ಮೈಸೂರು, ಜ.18(ಪಿಎಂ)- ಇತಿಹಾಸ ಕಂಡ ಅದ್ಭುತ ಶಕ್ತಿಯಾದ ಸ್ವಾಮಿ ವಿವೇಕಾನಂದರು ವೈಜ್ಞಾ ನಿಕ ಚಿಂತನೆಯುಳ್ಳ ಮಹಾನ್ ವಿಚಾರವಾದಿ. ಅವರು ಆಧ್ಯಾತ್ಮದ ಅಗ್ನಿಪರ್ವತ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಸ್ಮರಿಸಿದರು. ಮೈಸೂರು ಮಾನಸಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿಯ ತತ್ವ ಶಾಸ್ತ್ರ ಅಧ್ಯಯನ ವಿಭಾಗ, ಸ್ವಾಮಿ ವಿವೇಕಾನಂದ ಪೀಠದ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವೀರ ಸನ್ಯಾಸಿ, ಮಹಾ ಮಾನವತಾವಾದಿಯಾದ ವಿವೇಕಾನಂದರು ದೇಶ-ಕಾಲಗಳನ್ನು…
ರಾಮಾಯಣ, ಮಹಾಭಾರತ ಜಗತ್ತಿನ ವಿದ್ವಾಂಸರ ಮನ್ನಣೆಗೆ ಪಾತ್ರವಾದ ಮಹಾನ್ ಗ್ರಂಥಗಳು
January 19, 2020ಮೈಸೂರು,ಜ.18(ಎಸ್‍ಪಿಎನ್)- ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯಗಳು ಜಗತ್ತಿನ ಎಲ್ಲಾ ವಿದ್ವಾಂಸರೂ ಮೆಚ್ಚಿದ ಉತ್ಕøಷ್ಟ ಗ್ರಂಥಗಳು ಎಂದು ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಪ್ರೊ.ಟಿ.ಎನ್.ಪ್ರಭಾಕರ್ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ಮಾಧವ ಕೃಪಾದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಏರ್ಪಡಿಸಿದ್ದ ಕಾ.ಶ್ರೀ.ನಾಗರಾಜ ರಚನೆಯ `ಮಹಾಭಾರತ ಕಥಾಲೋಕ’ 3ನೇ ಮುದ್ರಣ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರಾಮಾಯಣ ಮತ್ತು ಮಹಾಭಾರತ ಹಲವು ಮೌಲ್ಯಗಳನ್ನೊಳಗೊಂಡ ಮಹಾಗ್ರಂಥ. ಇಲ್ಲಿ ಶಕ್ತಿಯಿದೆ, ಯುಕ್ತಿ ಇದೆ, ಮಂತ್ರ-ತಂತ್ರವಿದೆ. ರಾಜ್ಯಾಡಳಿತ ಚಾತುರ್ಯವಿದೆ….
ಹೋಟೆಲ್ ಮಾಲೀಕರಿಗೆ 17.5 ಲಕ್ಷ ರೂ. ಮೌಲ್ಯದ ನಾಣ್ಯ ವಿತರಣೆ
January 19, 2020ಮೈಸೂರು,ಜ.18-ಮೈಸೂರು ನಗರದ ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿ ಚಿಲ್ಲರೆ ಅಭಾವದಿಂದಾಗಿ ವ್ಯವಹಾರ ನಡೆಸಲು ತುಂಬಾ ತೊಂದರೆಯಾಗಿತ್ತು. ಇದನ್ನು ಮನಗಂಡು ಪ್ರಪ್ರಥಮ ಬಾರಿಗೆ ಮೈಸೂರಿನ ಹೋಟೆಲ್ ಮಾಲೀ ಕರಿಗೆ 17.5 ಲಕ್ಷ ರೂ. ಮೌಲ್ಯದ ನಾಣ್ಯಗಳನ್ನು ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ವಿತರಿಸಲಾಯಿತು. ರೂ. 1, ರೂ. 2, ರೂ. 5 ಮತ್ತು ರೂ. 10ರ ಡಿನಾಮಿನೇಷನ್‍ವುಳ್ಳ ನಾಣ್ಯಗಳನ್ನು ಬೆಂಗಳೂರಿನ ವಿಜಯ ಬ್ಯಾಂಕ್‍ನಿಂದ ತಂದು ಹೋಟೆಲ್ ಮಾಲೀಕರಿಗೆ ತಮ್ಮ ದಿನನಿತ್ಯದ ವ್ಯವಹಾರ ಕ್ಕಾಗಿ ನೀಡಲಾಯಿತು. ನಾಣ್ಯಗಳನ್ನು ಅಂದವಾಗಿ ಗೋಣಿ ಚೀಲಗಳಲ್ಲಿ…
ಪರೀಕ್ಷಾ ಪೇ ಚರ್ಚಾ ಸಂವಾದ: ರಾಜ್ಯದಿಂದ 42 ವಿದ್ಯಾರ್ಥಿಗಳು ಭಾಗಿ
January 19, 2020ಬೆಂಗಳೂರು, ಜ.18- ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿರುವ `ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ದೇಶದ ವಿವಿಧ ಶಾಲೆಗಳಿಂದ ಆಯ್ದ 2,000 ಹಾಗೂ ರಾಜ್ಯದಿಂದ 42 ವಿದ್ಯಾರ್ಥಿಗಳು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿ ದ್ದಾರೆ. ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ದೆಹಲಿಯ ತಲಕಟೋರಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಜರುಗಲಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳನ್ನು ಪರೀಕ್ಷೆಯ ಭಯದಿಂದ ಪಾರು ಮಾಡುವಲ್ಲಿ ಈ ಕಾರ್ಯಕ್ರಮ…
ನೀರು ಸರಬರಾಜಲ್ಲಿ ವ್ಯತ್ಯಯ
January 19, 2020ಮೈಸೂರು, ಜ.18-ಮೈಸೂರಿನ ಈ ಕೆಳಕಂಡ ಪ್ರದೇಶಗಳಲ್ಲಿ ಜ.19 ಮತ್ತು 20ರಂದು ನೀರು ಸರಬ ರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿ ವಿಲಾಸ ನೀರು ಸರಬ ರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಯಾದವ ಗಿರಿ, ಬನ್ನಿಮಂಟಪ ಎ, ಬಿ, ಸಿ ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರನಗರ, ತಿಲಕ್ ನಗರ, ಬಡೇಮಕಾನ್, ಹಲೀಂನಗರ, ದೇವರಾಜ ಮೊಹಲ್ಲಾ ಭಾಗಶಃ, ನಜರ್‍ಬಾದ್ ಮೊಹಲ್ಲಾ, ವಿದ್ಯಾರಣ್ಯ ಪುರಂ, ವಿಶ್ವೇಶ್ವರನಗರ, ಚಾಮುಂಡಿಪುರಂ, ದೇವರಾಜ ಮೊಹಲ್ಲಾ, ಲೂರ್ದ್‍ನಗರ, ಮೀನಾಬಜಾರ್, ವಾರ್ಡ್…
ಪಿಎಲ್‍ಡಿ ಬ್ಯಾಂಕ್ ಎದುರು ರೈತರ ಪ್ರತಿಭಟನೆ
January 19, 2020ತಿ.ನರಸೀಪುರ, ಜ.18(ಎಸ್‍ಕೆ)-ತಾಲೂಕು ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್(ಪಿಕಾರ್ಡ್@ ಪಿಎಲ್‍ಡಿ) ಅಧಿಕಾರಿಗಳು ಸಾಲ ವಸೂಲಾತಿಗಾಗಿ ರೈತರ ಮನೆ ಬಾಗಿಲಿಗೆ ತೆರಳಿ ಅಸಭ್ಯವಾಗಿ ವರ್ತಿ ಸುತ್ತಿರುವುದಾಗಿ ಆರೋಪಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವ ದಲ್ಲಿ ರೈತರು ಶನಿವಾರ ಪ್ರತಿಭಟಿಸಿದರು. ಪಟ್ಟಣದ ಪಿಕಾರ್ಡ್ @ ಪಿಎಲ್‍ಡಿ ಬ್ಯಾಂಕ್ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಬ್ಯಾಂಕ್‍ಗೆ ಬೀಗ ಜಡಿದು ಘೋಷಣೆ ಕೂಗಿದರು. ರೈತರೊಂದಿಗೆ ಅಸಭ್ಯವಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಉದ್ದೇಶಿಸಿ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರ…
ಸಲಗ ದಾಳಿ: ಹಸುವಿಗೆ ತೀವ್ರ ಗಾಯ
January 19, 2020ಹುಣಸೂರು, ಜ.18(ಹೆಚ್‍ಎಸ್‍ಎಂ)-ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕಿಕ್ಕೇರಿಕಟ್ಟೆ ಗ್ರಾಮದಲ್ಲಿ ಒಂಟಿ ಸಲಗ ಹಸುವೊಂದರ ಮೇಲೆ ದಾಳಿ ನಡೆಸಿದೆ. ಗ್ರಾಮದ ಪ್ರಕಾಶ್ ಅವರಿಗೆ ಸೇರಿದ ಹಸು ಸಲಗ ದಾಳಿಯಿಂದ ಗಂಭೀರವಾಗಿ ಗಾಯ ಗೊಂಡಿದೆ. ಶುಕ್ರವಾರ ರಾತ್ರಿ ಉದ್ಯಾನದ ಹುಣ ಸೂರು ವಲಯದ ಅರಣ್ಯ ಪ್ರದೇಶದಿಂದ ನಾಡಿನತ್ತ ಬಂದಿರುವ ಶಂಕೆ ಇದ್ದು, ತಡರಾತ್ರಿ ಪ್ರಕಾಶ್ ಮನೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ದಂತದಿಂದ ತಿವಿದಿದೆ. ಇದರಿಂದ ಕರುಳು ದೇಹದ ಹೊರ…
ಸರ್ಕಾರಿ ಆಸ್ಪತ್ರೆಗೆ ಕನ್ನ: ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳ ಕಳವು
January 19, 2020ತಿ.ನರಸೀಪುರ, ಜ.18(ಎಸ್‍ಕೆ)-ಆಸ್ಪತ್ರೆಯ ಬೀಗ ಮುರಿದು ಲಕ್ಷಾಂತರ ರೂ.ಮೌಲ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ಕುಪ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕುಪ್ಯ ಗ್ರಾಮದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳವು ನಡೆದಿದೆ. ಆಸ್ಪತ್ರೆಯ ಬೀಗ ಮುರಿದಿರುವ ಕಳ್ಳರು ಒಂದು ಲಕ್ಷ ರೂ. ಮೌಲ್ಯದ ಕಂಪ್ಯೂಟರ್, ಯುಪಿಎಸ್, ಟಿ.ವಿ, ಜೆರಾಕ್ಸ್ ಮೆಷಿನ್, ಪ್ರಿಂಟರ್ ಸೇರಿದಂತೆ ಹಲವು ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಪಟ್ಟಣ ಠಾಣೆ ಪೆÇಲೀಸರು ಸ್ಥಳ ಪರಿಶೀಲಿಸಿದರು. ಶ್ವಾನದಳ…
ಕೆರೆಯಲ್ಲಿ ಮುಳುಗಿ ಬಾಲಕ ಸಾವು
January 19, 2020ಹುಣಸೂರು, ಜ.18(ಹೆಚ್‍ಎಸ್‍ಎಂ)- ಅಜ್ಜಿ ಮನೆಗೆ ಬಂದಿದ್ದ ಬಾಲಕನೋರ್ವ ಸ್ನೇಹಿತರೊಂದಿಗೆ ಕೆರೆಯಲ್ಲಿ ಆಟವಾಡಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಮ್ಮಿಗೆ ಕಾಲೋನಿಯಲ್ಲಿ ನಡೆದಿದೆ. ತಾಲೂಕಿನ ಹನಗೋಡು ಹೋಬಳಿಯ ಪಂಚವಳ್ಳಿ ಗ್ರಾಮದ ಪರಮೇಶ್-ರೇಷ್ಮಾ ದಂಪತಿ ಪುತ್ರ ಅಖಿಲ್(9) ಸಾವನ್ನಪ್ಪಿದ ಬಾಲಕ. ಈತ ಪಂಚವಳ್ಳಿ ಶಾಲೆಯ 3ನೇ ತರಗತಿ ವಿದ್ಯಾರ್ಥಿ. ಸಂಕ್ರಾಂತಿ ಹಬ್ಬಕ್ಕೆ ಅಜ್ಜಿ ಮನೆಗೆ ಬಂದಿದ್ದ. ಶನಿವಾರ ಮಧ್ಯಾಹ್ನ ಸಹಪಾಠಿ ಗಳೊಂದಿಗೆ ಆಟವಾಡಲು ತೆರಳಿದ್ದ ವೇಳೆ ಗ್ರಾಮದ ಕೆರೆಯಲ್ಲಿ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದ ತಕ್ಷಣ…
ನೋಟಿಸ್ ನೀಡಿದ್ದಕ್ಕೆ ನಿದ್ರೆ ಮಾತ್ರೆ ಸೇವಿಸಿ ಇಂಜಿನಿಯರಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಅಸ್ವಸ್ಥ
January 19, 2020ಮೈಸೂರು, ಜ. 18(ಆರ್‍ಕೆ)- ಸೇವಾ ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದರಿಂದ ಬೇಸತ್ತÀ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕಿ ನಿದ್ರೆ ಮಾತ್ರೆ ಸೇವಿಸಿ, ತೀವ್ರ ಅಸ್ವಸ್ಥರಾಗಿರುವ ಘಟನೆ ಶುಕ್ರವಾರ ಸಂಜೆ ಮೈಸೂರಿನಲ್ಲಿ ಸಂಭವಿಸಿದೆ. ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಸ್. ಸೌಮ್ಯ ಸುಧನ ಅಸ್ವಸ್ಥರಾದವ ರಾಗಿದ್ದು, ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ಮತ್ತೊಂದು ಕಂಪನಿಯೊಂದಿಗೆ ಭಾಗೀದಾರರಾಗಿದ್ದಾರೆಂಬ ವಿಷಯ ತಿಳಿದು ಸಂಸ್ಥೆಯ ಅಧ್ಯಕ್ಷರು ನೀಡಿದ…










