Tag: Mysuru

ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿಲ್ಲ: ಮೇಯರ್
ಮೈಸೂರು

ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿಲ್ಲ: ಮೇಯರ್

April 28, 2019

ಮೈಸೂರು: ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಿ ಸಿಲ್ಲ. ಆದಾಗ್ಯೂ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಕೊರತೆ ಕಂಡು ಬರುವ ಪ್ರದೇಶಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆಗೆ ಪಾಲಿಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಶಾಲೆ ಆವರಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಗರ ಪಾಲಿಕೆಯಲ್ಲಿ 20 ನೀರಿನ ಟ್ಯಾಂಕರ್‍ಗಳು ಇದ್ದು, ಹೆಚ್ಚುವರಿಯಾಗಿ ಇನ್ನು 5 ಟ್ಯಾಂಕರ್‍ಗಳಿಗೆ ವ್ಯವಸ್ಥೆ ಮಾಡಲಾಗು ತ್ತಿದೆ. ಚಾಮುಂಡಿ…

ಹಾಡಹಗಲೇ ನ್ಯಾಯಾಂಗ ಬಡಾವಣೆ ಮನೆಯಲ್ಲಿ ಕಳವು
ಮೈಸೂರು

ಹಾಡಹಗಲೇ ನ್ಯಾಯಾಂಗ ಬಡಾವಣೆ ಮನೆಯಲ್ಲಿ ಕಳವು

April 28, 2019

ಮೈಸೂರು: ಹಾಡಹಗಲೇ ಮನೆ ಬಾಗಿಲು ಬೀಗ ಮುರಿದು 1.5 ಲಕ್ಷ ರೂ. ನಗದು ಹಾಗೂ 50 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನ ಹೊರ ವಲಯದ ನ್ಯಾಯಾಂಗ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ಮೈಸೂರು ತಾಲೂಕು, ಜಯಪುರ ಹೋಬಳಿ ವ್ಯಾಪ್ತಿಯ ನ್ಯಾಯಾಂಗ ಬಡಾವಣೆ ನಿವಾಸಿ ನಟೇಶ್ ಎಂಬುವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ರಿಂದ 3ಗಂಟೆ ನಡುವೆ ನಡೆದಿದೆ. ಕಿಟಕಿ ಸರಳು ಮುರಿದು ಒಳಗೆ ಪ್ರವೇಶಿಸಿರುವ ಖದೀಮರು, ಕೊಠಡಿಯ ವಾರ್‍ಡ್ರೋಬ್‍ನಲ್ಲಿದ್ದ 1.5 ಲಕ್ಷ ರೂ. ನಗದು ಹಾಗೂ…

ಮೊಬೈಲ್ ಸಂಭಾಷಣೆಯಲ್ಲಿ ಮೈ ಮರೆತ ಟಿಪ್ಪರ್ ಚಾಲಕ ನೆಲಕ್ಕುರುಳಿದ ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರ್ಮರ್
ಮೈಸೂರು

ಮೊಬೈಲ್ ಸಂಭಾಷಣೆಯಲ್ಲಿ ಮೈ ಮರೆತ ಟಿಪ್ಪರ್ ಚಾಲಕ ನೆಲಕ್ಕುರುಳಿದ ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರ್ಮರ್

April 28, 2019

ವಿದ್ಯುತ್ ಕಡಿತಗೊಂಡಿದ್ದರಿಂದ ತಪ್ಪಿದ್ದ ಭಾರೀ ಅನಾಹುತ ಹುಣಸೂರು: ಟಿಪ್ಪರ್ ಚಾಲಕನೋರ್ವನ ಬೇಜವಾಬ್ದಾರಿತನದಿಂದ ನಗರದಲ್ಲಿ ಟ್ರಾನ್ಸ್‍ಫಾರ್ಮರ್ ಸೇರಿದಂತೆ 10 ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರೀ ಅವಘಡ ತಪ್ಪಿದಂತಾಗಿದೆ. ನಗರದ ಎಪಿಎಂಸಿ ಬಳಿಯಲ್ಲಿನ ದಿವಂಗತ ದೇವರಾಜ ಅರಸರ ಪುತ್ಥಳಿ ಬಳಿ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಬೆಳಿಗ್ಗೆ 8 ಗಂಟೆ ಟಿಪ್ಪರ್ ಟ್ರ್ಯಾಲಿಗೆ ಸಿಕ್ಕಿಹಾಕಿಕೊಂಡ ವಿದ್ಯುತ್ ಲೈನ್(ವಿದ್ಯುತ್ ತಂತಿ) ಎಳೆದೊಯ್ದ ಕಾರಣ ವಿದ್ಯುತ್ ಟಿಸಿ, ಹತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿರುವೆ. ಸದ್ಯ ಯಾವುದೇ ಸಾವು-ನೋವು ಸಂಭವಿಸಿಲ್ಲ. ಘಟನೆ ವಿವರ:…

‘ಹಣದಿಂದ ಆರೋಗ್ಯ ಕೊಳ್ಳಲಾಗುವುದಿಲ್ಲ’ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಭಿಮತ
ಮೈಸೂರು

‘ಹಣದಿಂದ ಆರೋಗ್ಯ ಕೊಳ್ಳಲಾಗುವುದಿಲ್ಲ’ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಭಿಮತ

April 28, 2019

ಸುತ್ತೂರು: ಹಣದಿಂದ ಆರೋಗ್ಯವನ್ನಾಗಲೀ, ಯೌವನವನ್ನಾಗಲೀ ಕೊಂಡುಕೊಳ್ಳಲು ಸಾಧ್ಯವಿಲ್ಲ. ಆದರೆ, ಸ್ವಸ್ಥ ಚಿಂತನೆಯಿಂದ ಹಾಗೂ ಶಿಸ್ತು ಬದ್ದ ಬದುಕಿನಿಂದ ಇಳಿ ವಯಸ್ಸಿನಲ್ಲಿಯೂ ಆರೋಗ್ಯವಂತರಾಗಿ ಇರಬಹುದು ಎಂದು ವಿಜಾಪುರದ ಜ್ಞಾನಯೋಗೇಶ್ವರ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ಸುತ್ತೂರು ಶ್ರೀ ಕ್ಷೇತ್ರದಲ್ಲಿರುವ ಜೆಎಸ್‍ಎಸ್ ಹಿರಿಯ ಮನೆ ನಿವಾಸಿಯಾಗಿರುವ ಕೆ.ಎಂ.ತಮ್ಮಯ್ಯನವರ ನೂರನೇ ಹುಟ್ಟುಹಬ್ಬ ಕಾರ್ಯಕ್ರಮದ ಸಾನಿದ್ಯ ವಹಿಸಿ ಅವರು ಮಾತನಾಡಿದರು. ಮನುಷ್ಯ ತನ್ನ ದುರಾಲೋಚನೆಗಳಿಂದ ಆರೋಗ್ಯ ಮತ್ತು ಆಯುಷ್ಯವನ್ನು ಕಳೆದಕೊಳ್ಳುತ್ತಿದ್ದಾನೆ ಎಂದು ವಿಷಾಧಿಸಿದ ಅವರು, ಮನುಷ್ಯ ಭವಿಷ್ಯದ ಚಿಂತೆಯಲ್ಲಿ ವರ್ತಮಾನದ ಸುಖದಿಂದ…

ನೈಸರ್ಗಿಕ ವಿಕೋಪ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅವಶ್ಯ
ಮೈಸೂರು

ನೈಸರ್ಗಿಕ ವಿಕೋಪ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅವಶ್ಯ

April 28, 2019

ಮೈಸೂರು: ನೈಸರ್ಗಿಕ ವಿಕೋಪ ಸಂಭವಿಸಿದರೆ, ಅದರ ತ್ವರಿತ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅತ್ಯಾವ ಶ್ಯಕ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ತಂತ್ರಜ್ಞಾನ ಬಳಕೆಯಲ್ಲಿ ನಿಪುಣರಾಗಿರ ಬೇಕು ಎಂದು ಎಟಿಐ ವಿಪತ್ತು ನಿರ್ವ ಹಣಾ ತರಬೇತಿ ಕೇಂದ್ರದ ನಿರ್ದೇಶಕ ಡಾ.ಅಶೋಕ ಸಂಗನಾಳ್ ತಿಳಿಸಿದ್ದಾರೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿಕೋಪ ನಿರ್ವಹಣಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ವಿಕೋಪ ನಿರ್ವ ಹಣಾ ಕ್ರಿಯಾ ಯೋಜನೆಯ ಪರಿಷ್ಕರಣೆ ಮತ್ತು ತಯಾರಿಕೆ’ ಕುರಿತ 3 ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ…

ನಾಳೆ, ನಾಡಿದ್ದು ಕೆಲವೆಡೆ ನೀರು ಸರಬರಾಜಲ್ಲಿ ವ್ಯತ್ಯಯ
ಮೈಸೂರು

ನಾಳೆ, ನಾಡಿದ್ದು ಕೆಲವೆಡೆ ನೀರು ಸರಬರಾಜಲ್ಲಿ ವ್ಯತ್ಯಯ

April 28, 2019

ಮೈಸೂರು: ಮೈಸೂರು ನಗರಕ್ಕೆ ಕಬಿನಿ ನದಿ ಮೂಲದಿಂದ ನೀರು ಸರಬರಾಜು ಮಾಡುವ ಮುಖ್ಯ ಏರು ಕೊಳವೆ ಮಾರ್ಗದಲ್ಲಿ ತುರ್ತು ನಿರ್ವಹಣೆ ಕೆಲಸ ಕೈಗೊಳ್ಳುವುದರಿಂದ ಏ.29 ಮತ್ತು 30ರಂದು ಮೈಸೂರಿನ 42ನೇ ವಾರ್ಡ್, 44ರಿಂದ 51ನೇ ವಾರ್ಡ್‍ವರೆಗೆ ಹಾಗೂ 54ರಿಂದ 65ನೇ ವಾರ್ಡ್ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಮೈಸೂರು

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ

April 26, 2019

ವಾರಣಾಸಿ: ಹಿಂದೆಂದೂ ಇಲ್ಲದಂತೆ ಗುರುವಾರ ಸಂಪೂರ್ಣ ಕೇಸರಿಮಯವಾಗಿದ್ದ ಉತ್ತರ ಪ್ರದೇಶದ ಪುಣ್ಯಕ್ಷೇತ್ರ ವಾರಣಾಸಿಯಲ್ಲಿ ಸಂಜೆಯಿಂದಲೇ ಮೋದಿ… ಮೋದಿ… ಜೈಕಾರ ಪ್ರತಿಧ್ವನಿಸುತ್ತಿತ್ತು. ಬಳಿಕ ರಾತ್ರಿ 9ರವರೆಗೂ ಪವಿತ್ರ ಗಂಗಾನದಿಯ ದಂಡೆಯಲ್ಲಿ ಮಹಾ ಮಂಗಳಾ ರತಿಯ ಬೆಳಕಿನಲ್ಲಿ ಕೇಸರಿ ವಸ್ತ್ರಧಾರಿ ಗಳ ಭಕ್ತಿಭಾವ ಪ್ರತಿಫಲಿಸಿತು. ಇದಕ್ಕೆಲ್ಲಾ ಕಾರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ರೋಡ್ ಶೋ ಮತ್ತು ಗಂಗಾಮಾತೆಗೆ ಮಹಾಮಂಗಳಾರತಿ ಪೂಜೆ. ರೋಡ್ ಶೋ: ವಾರಣಾಸಿ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ನರೇಂದ್ರ ಮೋದಿ ಅವರು, ಗುರುವಾರ ಸಂಜೆ ಕಾಶಿ…

ಕ್ಯಾತಮಾರನಹಳ್ಳಿ ರಾಜು ಸೇರಿ ಹಲವು ಹತ್ಯೆಗಳ ಆರೋಪಿ ಟಿಂಬರ್ ಅತೀಫ್ ಬಂಧನ
ಮೈಸೂರು

ಕ್ಯಾತಮಾರನಹಳ್ಳಿ ರಾಜು ಸೇರಿ ಹಲವು ಹತ್ಯೆಗಳ ಆರೋಪಿ ಟಿಂಬರ್ ಅತೀಫ್ ಬಂಧನ

April 26, 2019

ಮೈಸೂರು: ಒಂದು ದಶಕದ ಕಾಲ ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವು ನಗರ ಹಾಗೂ ಆಂಧ್ರಪ್ರದೇಶ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ, ಮೈಸೂರಿನ ಹಲವು ಬರ್ಬರ ಹತ್ಯೆಗಳ ಮಾಸ್ಟರ್‍ಮೈಂಡ್, ಕುಖ್ಯಾತ ಹಂತಕನೋರ್ವನನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಮತ್ತು ಕುವೆಂಪುನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಲಷ್ಕರ್‍ಮೊಹಲ್ಲಾದ ಎರೆಕಟ್ಟೆ ಬೀದಿ ನಿವಾಸಿ ಅಬ್ದುಲ್ ರವೂಫ್ ಷರೀಫ್ ಪುತ್ರ ಅತೀಫ್ ಅಹಮದ್ ಷರೀಫ್ ಅಲಿಯಾಸ್ ಟಿಂಬರ್ ಅತೀಫ್ (39) ಪೊಲೀಸರಿಗೆ ಸೆರೆ ಸಿಕ್ಕಿರುವ ಕುಖ್ಯಾತ ಹಂತಕನಾಗಿದ್ದು, ವ್ಯವಸ್ಥಿತ ಯೋಜನೆ ರೂಪಿಸಿ…

ವರಿಷ್ಠರ ಕಟ್ಟಾದೇಶ: ಮೇ 23ರವರೆಗೆ ಆಪರೇಷನ್ ಕಮಲಕ್ಕೆ ಬ್ರೇಕ್
ಮೈಸೂರು

ವರಿಷ್ಠರ ಕಟ್ಟಾದೇಶ: ಮೇ 23ರವರೆಗೆ ಆಪರೇಷನ್ ಕಮಲಕ್ಕೆ ಬ್ರೇಕ್

April 26, 2019

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಳ್ಳುವವರೆಗೂ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರ ವನ್ನು ಉರುಳಿಸುವ ಪ್ರಯತ್ನಕ್ಕೆ ಕೈ ಹಾಕ ದಂತೆ ರಾಜ್ಯ ಬಿಜೆಪಿ ಮುಖಂಡರಿಗೆ ಆ ಪಕ್ಷದ ವರಿಷ್ಠರು ಕಟ್ಟಾದೇಶ ಮಾಡಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ಆರಂಭಕ್ಕೂ ಮುನ್ನ ಪಕ್ಷದ ವರಿಷ್ಠರು ಈ ಆದೇಶ ಮಾಡಿದ್ದಲ್ಲದೆ, ಮೇ23ರ ನಂತರ ಸರ್ಕಾರ ಬದಲಾವಣೆಗೆ ಸಂಬಂಧಿ ಸಿದಂತೆ ನಾವೇ ನಿರ್ಧಾರ ತೆಗೆದುಕೊಳ್ಳು ತ್ತೇವೆ ಎಂಬ ಮಾಹಿತಿ ಕೂಡ ನೀಡಿದ್ದಾರೆ….

ಮೈಸೂರಲ್ಲಿವೆ 12 ಅತ್ಯಂತ ತೀವ್ರ ಅಪಘಾತ ವಲಯಗಳು
ಮೈಸೂರು

ಮೈಸೂರಲ್ಲಿವೆ 12 ಅತ್ಯಂತ ತೀವ್ರ ಅಪಘಾತ ವಲಯಗಳು

April 26, 2019

ಮೈಸೂರು: ಮೈಸೂರಲ್ಲಿ 12 ತೀವ್ರ ಅಪಘಾತ ವಲಯಗಳಿವೆ. ಮೈಸೂರಿನ ಕೆ.ಆರ್, ಎನ್‍ಆರ್, ಸಿದ್ದಾರ್ಥ ನಗರ ಹಾಗೂ ವಿವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಈ 12 ಅಪಘಾತ ವಲಯಗಳಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ ಒಟ್ಟು 169 ಅಪಘಾತಗಳು ಸಂಭವಿಸಿದ್ದು, 45 ಮಂದಿ ಮೃತಪಟ್ಟಿದ್ಧರೆ, 158 ಮಂದಿಗೆ ತೀವ್ರತರ ಗಾಯಗಳಾಗಿವೆ. 500 ಮೀಟರ್ ಅಂತರದಲ್ಲಿ ಮೂರು ವರ್ಷದಲ್ಲಿ 10 ಅಪಘಾತ ಸಂಭವಿಸಿ, ಸಾಕಷ್ಟು ಸಾವು-ನೋವುಗಳಾಗಿದ್ದರೆ ಅಂತಹ ಸ್ಥಳವನ್ನು ತೀವ್ರ ಅಪಘಾತ ವಲಯ(ಃಟಚಿಛಿಞ Sಠಿoಣ) ಎಂದು…

1 11 12 13 14 15 194
Translate »