ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಮೈಸೂರು

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ

April 26, 2019

ವಾರಣಾಸಿ: ಹಿಂದೆಂದೂ ಇಲ್ಲದಂತೆ ಗುರುವಾರ ಸಂಪೂರ್ಣ ಕೇಸರಿಮಯವಾಗಿದ್ದ ಉತ್ತರ ಪ್ರದೇಶದ ಪುಣ್ಯಕ್ಷೇತ್ರ ವಾರಣಾಸಿಯಲ್ಲಿ ಸಂಜೆಯಿಂದಲೇ ಮೋದಿ… ಮೋದಿ… ಜೈಕಾರ ಪ್ರತಿಧ್ವನಿಸುತ್ತಿತ್ತು. ಬಳಿಕ ರಾತ್ರಿ 9ರವರೆಗೂ ಪವಿತ್ರ ಗಂಗಾನದಿಯ ದಂಡೆಯಲ್ಲಿ ಮಹಾ ಮಂಗಳಾ ರತಿಯ ಬೆಳಕಿನಲ್ಲಿ ಕೇಸರಿ ವಸ್ತ್ರಧಾರಿ ಗಳ ಭಕ್ತಿಭಾವ ಪ್ರತಿಫಲಿಸಿತು. ಇದಕ್ಕೆಲ್ಲಾ ಕಾರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ರೋಡ್ ಶೋ ಮತ್ತು ಗಂಗಾಮಾತೆಗೆ ಮಹಾಮಂಗಳಾರತಿ ಪೂಜೆ.

ರೋಡ್ ಶೋ: ವಾರಣಾಸಿ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ನರೇಂದ್ರ ಮೋದಿ ಅವರು, ಗುರುವಾರ ಸಂಜೆ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ 3 ಗಂಟೆಗೂ ಹೆಚ್ಚು ಸಮಯ ಮೆಗಾ ರೋಡ್ ಶೋ ನಡೆಸಿದರು. ಲಂಕಾ ಗೇಟ್‍ನಿಂದ ಗಂಗಾ ಘಾಟಿವರೆಗೂ ಬೃಹತ್ ಮೆರವಣಿಗೆ ನಡೆದಾಗ 6 ಕಿ.ಮೀ. ದೂರದ ರಸ್ತೆಯ ಎರಡೂ ಬದಿಗಳಲ್ಲಿ ಲಕ್ಷಾಂತರ ಮಂದಿ ಮೋದಿ ಅಭಿಮಾನಿ ಗಳು, ಬಿಜೆಪಿ ಕಾರ್ಯಕರ್ತರು, ವಾರಣಾಸಿ ನಿವಾಸಿಗಳು ಜಮಾವಣೆಗೊಂಡು ನಿರಂತರವಾಗಿ ಹರ್ ಹರ್ ಮೋದಿ… ಎಂದು ಜೈಕಾರ ಕೂಗುತ್ತಿದ್ದರು. ಮೋದಿ ಅವರ ವಾಹ ನದ ಮೇಲೆ ಗುಲಾಬಿ ಹೂಗಳನ್ನು ಎರಚಿ ಅಭಿಮಾನ ತೋರಿದರು. ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಬಹಳಷ್ಟು ಮಂದಿ ಕೇಸರಿ ವರ್ಣದ ಸೀರೆ, ಚೂಡಿದಾರ್‍ಗಳನ್ನು ಧರಿಸಿದ್ದರು.

ಮಾಳವೀಯ ಪ್ರತಿಮೆಗೆ ಗೌರವ: ಸಂಜೆ 5.15ರ ವೇಳೆಗೆ ಬಿಗಿಭದ್ರತೆಯಲ್ಲಿ ವಾರಣಾಸಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಮೊದಲಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಂದಿಸಿದರು. ಬಳಿಕ ವಿಶ್ವನಾಥನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ರೋಡ್ ಶೋ ಆರಂಭಿಸಿದರು. ಮುಸ್ಲಿಮ್ ಸಮುದಾಯ ಹೆಚ್ಚು ವಾಸವಿರುವ ಮದನ್‍ಪುರ, ಸೋನರ್‍ಪುರ ಮಾರ್ಗವಾಗಿಯೂ ರೋಡ್ ಶೋ ಸಾಗಿತು. ಮೋದಿ ಅವರನ್ನು ಬರಮಾಡಿಕೊಳ್ಳಲೆಂದೇ 101 ಸ್ವಾಗತ ಕೇಂದ್ರ ತೆರೆಯಲಾಗಿತ್ತು.

ಬಿಜೆಪಿ ರಾಷ್ಟ್ರೀಯ ಅ್ರಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಪಿಯೂಷ್ ಗೋಯಲ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಮತ್ತಿತರ ನಾಯಕರು ರೋಡ್ ಶೋ ಮತ್ತು ಗಂಗಾಪೂಜೆ ವೇಳೆ ಪ್ರಧಾನಿಗಳ ಜತೆಗಿದ್ದರು. ಎನ್‍ಡಿಎ ಮೈತ್ರಿಕೂಟದ ವಿವಿಧ ಪಕ್ಷಗಳ ಕೆಲ ನಾಯಕರು ರೋಡ್ ಶೋನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಏ.26ರ ಶುಕ್ರವಾರ ಬೆಳಿಗ್ಗೆ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿ ಅವರು, ಮುನ್ನಾ ದಿನವಾದ ಗುರುವಾರ ಭರ್ಜರಿ ರೋಡ್ ಶೋ ನಡೆಸುವ ಮೂಲಕ ತಮಗಿರುವ ಜನಬೆಂಬಲವನ್ನು ಜಗಜ್ಜಾಹೀರು ಮಾಡಿದರು. ಮೇ 19ಕ್ಕೆ ವಾರಣಾಸಿಯಲ್ಲಿ ಚುನಾವಣೆ ನಡೆಯಲಿದೆ. ಬಿಹಾರದ ಧರ್ಬಾಂಗ್‍ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ಬರುವುದು ವಿಳಂಬವಾಗಿದ್ದರಿಂದ ವಾರಾಣಸಿಯಲ್ಲಿ ಮಧ್ಯಾಹ್ನ 3ಕ್ಕೆ ಆರಂಭವಾಗಬೇಕಿದ್ದ ರೋಡ್‍ಶೋ 2 ಗಂಟೆ ಕಾಲ ತಡÀವಾಯಿತು. ಕೆಲ ದಿನಗಳಿಂದ ವಾರಣಾಸಿಯ ಪ್ರತಿ ಮನೆಗೂ ತೆರಳಿ ಬಿಜೆಪಿ ಕಾರ್ಯಕರ್ತರು, ಗುರುವಾರ ಮೋದಿ ಬೃಹತ್ ರ್ಯಾಲಿಯಲ್ಲಿ ಭಾಗವಹಿ ಸುವಂತೆ ಮನವಿ ಮಾಡಿದ್ದರು. ಮೋದಿ ಅವರ ಮೇಲಿನ ಅಭಿಮಾನ, ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ವಾರಣಾಸಿ ಜನತೆ ಅಭೂತಪೂರ್ವ ಸ್ವಾಗತ ಕೋರಿದರು.

ಬಿಗಿಭದ್ರತೆ: 6 ಲಕ್ಷಕ್ಕೂ ಅಧಿಕ ಮಂದಿ ಸೇರಿರುವ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ಉತ್ತರ ಪ್ರದೇಶದ ಸಾವಿರಾರು ಪೆÇಲೀಸರು, ಅರೆಸೇನಾ ಪಡೆ ಸಿಬ್ಬಂದಿ ಭದ್ರತೆಯ ಕೋಟೆಯನ್ನೇ ರಚಿಸಿದ್ದರು. ಡ್ರೋಣ್ ಕ್ಯಾಮರಾಗಳ ಕಣ್ಗಾವಲು ಇದ್ದಿತು. ಜತೆಗೆ ಪ್ರಧಾನಿಯವರ ವಿಶೇಷ ಭದ್ರತಾ ಪಡೆಯೂ ಎಚ್ಚರದ ಕಣ್ಣಿಟ್ಟಿದೆ.

Translate »