Tag: Plastic

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರ ವಿರುದ್ಧ ಕ್ರಮ : ನಗರಸಭೆ ಎಚ್ಚರಿಕೆ
ಚಾಮರಾಜನಗರ

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರ ವಿರುದ್ಧ ಕ್ರಮ : ನಗರಸಭೆ ಎಚ್ಚರಿಕೆ

August 1, 2018

ಚಾಮರಾಜನಗರ:  ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿರುವವರು ಕೂಡಲೇ ಮಾರಾಟ ವಹಿವಾಟು ನಿಲ್ಲಿಸಬೇಕು. ಇಲ್ಲವಾದಲ್ಲಿ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಿ ಕ್ರಮ ವಹಿಸಲಾಗುವುದೆಂದು ನಗರಸಭೆ ಎಚ್ಚರಿಕೆ ನೀಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳು ದೈನಂದಿನ ಬಳಕೆಯಲ್ಲಿರುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿಗಳ ಸರಾಗ ಹರಿವಿಗೆ ತಡೆ ಉಂಟುಮಾಡಿದೆ. ಪರಿಸರ ಸಂರಕ್ಷಣಾ ಕಾಯಿದೆ 1986ರ ಸೆಕ್ಷನ್ 5ರ ಅನ್ವಯ ಯಾವುದೇ ಅಂಗಡಿ ಮಾರಾಟಗಾರರು…

ನಿಷೇಧದ ನಡುವೆಯೂ ತ್ಯಾಜ್ಯ ಸೇರುತ್ತಿರುವ ಪ್ಲಾಸ್ಟಿಕ್ ವಸ್ತುಗಳು
ಮೈಸೂರು

ನಿಷೇಧದ ನಡುವೆಯೂ ತ್ಯಾಜ್ಯ ಸೇರುತ್ತಿರುವ ಪ್ಲಾಸ್ಟಿಕ್ ವಸ್ತುಗಳು

July 31, 2018

ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಹಾಳೆ, ಪ್ಲೇಟ್, ಚಮಚ, ಬಾಟಲಿಗಳ ಬಳಕೆ ನಿಂತಿಲ್ಲ – ರಾಜಕುಮಾರ್ ಭಾವಸಾರ್ ಮೈಸೂರು:  ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ನಿಷೇಧವಿದ್ದರೂ ಮೈಸೂರಿನ ಬಹುತೇಕ ಕಲ್ಯಾಣ ಮಂಟಪ, ಛತ್ರಗಳಲ್ಲಿ ಪ್ಲಾಸ್ಟಿಕ್ ಲೋಟ, ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಪ್ಲೇಟ್ ಮತ್ತು ಚಮಚಗಳ ಬಳಕೆ ನಿರಾಂತಕವಾಗಿ ನಡೆದಿದೆ. ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಸ್ಟ್ರಾ ಕೊಳವೆ, ಊಟದ ಮೇಜಿನ ಮೇಲೆ ಹರಡುವ…

ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ ಪರಿಸರ ಚಿತ್ರಕಲಾ ಸ್ಪರ್ಧೆ: ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಮುಂದಾಗೋಣ
ಮಂಡ್ಯ

ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ ಪರಿಸರ ಚಿತ್ರಕಲಾ ಸ್ಪರ್ಧೆ: ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಮುಂದಾಗೋಣ

July 23, 2018

ಮಂಡ್ಯ:  ಪ್ರಸ್ತುತ ದಿನಗಳಲ್ಲಿ ದೇಶವನ್ನು ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಕಲಾತಪಸ್ವಿ ಟ್ರಸ್ಟ್‍ನ ಪ್ರಧಾನ ಪೋಷಕ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು. ನಗರದ ಗಾಂಧಿ ಭವನದಲ್ಲಿ ಕಲಾತಪಸ್ವಿ ಟ್ರಸ್ಟ್, ಅಮ್ಮ ಕಿಡ್ಸ್, ಕರ್ನಾಟಕ ಚಿತ್ರಕಲಾ ಆಕಾಡೆಮಿ ಮೈಸೂರು ಆಯೋಜಿಸಿದ್ದ ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ “ಪರಿಸರ” ಕುರಿತ 3ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತಿಯಾದ ಪ್ಲಾಸ್ಟಿಕ್ ಬಳಿಕೆಯಿಂದ ಪರಿಸರ ಮಾಲಿನ್ಯ ಗೊಳ್ಳುತ್ತಿರುವುದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ತಾಪಮಾನ ಹೆಚ್ಚಳಗೊಳ್ಳಲು ಇದು ಪ್ರಮುಖ…

ದಿನಸಿ ಅಂಗಡಿ ಮೇಲೆ ದಾಳಿ: ಪ್ಲಾಸ್ಟಿಕ್ ವಸ್ತು ವಶ
ಹಾಸನ

ದಿನಸಿ ಅಂಗಡಿ ಮೇಲೆ ದಾಳಿ: ಪ್ಲಾಸ್ಟಿಕ್ ವಸ್ತು ವಶ

June 1, 2018

ಬೇಲೂರು: ಪಟ್ಟಣದ ದಿನಸಿ ಅಂಗಡಿಯ ಮೇಲೆ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಗುರುವಾರ ದಾಳಿ ನಡೆಸಿ ಅಕ್ರಮವಾಗಿ ಶೇಖರಿಸಿದ್ದ ಪಾಸ್ಟಿಕ್ ವಸ್ತುಗಳನ್ನು ವಶ ಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿದ್ದ ಊಟಕ್ಕೆ ಬಳಕೆ ಮಾಡುವ ಪ್ಲಾಸ್ಟಿಕ್ ರೋಲ್, ಪ್ಲಾಸ್ಟಿಕ್ ಲೋಟ, ಥರ್ಮಾಕೋಲ್ ತಟ್ಟೆಗಳನ್ನು ವಶಪಡಿಸಿಕೊಂಡು 5,000 ದಂಡ ವಿಧಿಸಿದರು. ಪಟ್ಟಣದ ಗುಂಡಪ್ಪಶೆಟ್ಟಿ ಅವರ ಅಂಗಡಿಗೆ ದಾಳಿ ನಡೆಸಿದ ಅಧಿಕಾರಿ ಗಳು 5 ಪ್ಲಾಸ್ಟಿಕ್ ರೋಲ್, 10 ಲೋಟದ ಪ್ಯಾಕೇಟ್, 3 ಚೀಲ ಥರ್ಮಾಕೋಲ್ ತಟ್ಟೆ ವಶಕ್ಕೆ…

ಪ್ಲಾಸ್ಟಿಕ್ ಸಂಸ್ಕರಣೆ, ತಂತ್ರಜ್ಞಾನ ಕುರಿತ ತರಬೇತಿ
ಮೈಸೂರು

ಪ್ಲಾಸ್ಟಿಕ್ ಸಂಸ್ಕರಣೆ, ತಂತ್ರಜ್ಞಾನ ಕುರಿತ ತರಬೇತಿ

May 26, 2018

ಮೈಸೂರು: ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ಲಾಸ್ಟಿಕ್ ಸಂಸ್ಕರಣೆ ಮತ್ತು ಪರೀಕ್ಷೆ, ಪ್ಲಾಸ್ಟಿಕ್ ಮೌಲ್ಡಿಂಗ್ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್ ತಂತ್ರಜ್ಞಾನ ಕುರಿತಂತೆ ತರಬೇತಿ ನೀಡುತ್ತಿದ್ದು, ನಿರುದ್ಯೋಗಿ ಯುವಜನರು ಪ್ರಯೋಜನ ಪಡೆಯಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಶಿರಾಲಿ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇವು ಒಂದೂವರೆ ವರ್ಷದಿಂದ ಮೂರು ವರ್ಷದವರೆಗಿನ ಕೋರ್ಸ್‍ಗಳಾಗಿದ್ದು, ಬಿಎಸ್ಸಿ- ರಸಾಯನ ಶಾಸ್ತ್ರ, ಹತ್ತನೇ ತರಗತಿ- ಗಣ ತ, ಇಂಗ್ಲಿಷ್, ವಿಜ್ಞಾನ ವಿಷಯಗಳ ಶಿಕ್ಷಣ…

Translate »