ಪ್ಲಾಸ್ಟಿಕ್ ಸಂಸ್ಕರಣೆ, ತಂತ್ರಜ್ಞಾನ ಕುರಿತ ತರಬೇತಿ
ಮೈಸೂರು

ಪ್ಲಾಸ್ಟಿಕ್ ಸಂಸ್ಕರಣೆ, ತಂತ್ರಜ್ಞಾನ ಕುರಿತ ತರಬೇತಿ

May 26, 2018

ಮೈಸೂರು: ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ಲಾಸ್ಟಿಕ್ ಸಂಸ್ಕರಣೆ ಮತ್ತು ಪರೀಕ್ಷೆ, ಪ್ಲಾಸ್ಟಿಕ್ ಮೌಲ್ಡಿಂಗ್ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್ ತಂತ್ರಜ್ಞಾನ ಕುರಿತಂತೆ ತರಬೇತಿ ನೀಡುತ್ತಿದ್ದು, ನಿರುದ್ಯೋಗಿ ಯುವಜನರು ಪ್ರಯೋಜನ ಪಡೆಯಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಶಿರಾಲಿ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇವು ಒಂದೂವರೆ ವರ್ಷದಿಂದ ಮೂರು ವರ್ಷದವರೆಗಿನ ಕೋರ್ಸ್‍ಗಳಾಗಿದ್ದು, ಬಿಎಸ್ಸಿ- ರಸಾಯನ ಶಾಸ್ತ್ರ, ಹತ್ತನೇ ತರಗತಿ- ಗಣ ತ, ಇಂಗ್ಲಿಷ್, ವಿಜ್ಞಾನ ವಿಷಯಗಳ ಶಿಕ್ಷಣ ಕೋರ್ಸ್ ಆಧರಿಸಿ ಅಗತ್ಯವಾದ ಶೈಕ್ಷಣ ಕ ಅರ್ಹತೆಯಾಗಿದೆ. ಇದುವರೆಗೆ ಇಲ್ಲಿ ತರಬೇತಿ ಪಡೆದ ಎಲ್ಲರೂ ದೇಶದಾದ್ಯಂತ ಉದ್ಯೊಗ ಪಡೆದಿದ್ದು, ಈ ತರಬೇತಿಗಳಿಗೆ ವಿಫುಲ ಮಾನ್ಯತೆ ಇರುವ ಕಾರಣ ಯುವಜನರು ಮುಂದೆ ಬರಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ ಮೊ. 96326 88884 ಸಂಪರ್ಕಿಸಬಹುದು ಎಂದರು. ಸದಾಶಿವಪ್ಪ, ಸುಮನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »