Tag: Sri Sadashiva Swamiji

ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ: ಸದಾಶಿವ ಸ್ವಾಮೀಜಿ ಸೇವೆ ಅನನ್ಯ
ಮಂಡ್ಯ

ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ: ಸದಾಶಿವ ಸ್ವಾಮೀಜಿ ಸೇವೆ ಅನನ್ಯ

July 16, 2018

ಪಾಂಡವಪುರ: ಲಿಂಗೈಕ್ಯ ಶ್ರೀ ಸದಾಶಿವ ಸ್ವಾಮೀಜಿಗಳು ಶ್ರದ್ಧಾ ಭಕ್ತಿಯಿಂದ ಮಠದಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಶ್ವತ ವಾದ ಕೆಲಸ ಮಾಡಿದ್ದಾರೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿಜೀ ತಿಳಿಸಿದರು. ತಾಲೂಕಿನ ಬೇಬಿಬೆಟ್ಟದ ಶ್ರೀರಾಮ ಯೋಗಿಶ್ವರ ಮಠದ ಆವರಣದಲ್ಲಿ ಭಾನು ವಾರ ನಡೆದ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಗಳ 11ನೇ ದಿನದ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಮೇಲು-ಕೀಳೆಂಬ ಭಾವನೆ ಬಿಟ್ಟು ಭಕ್ತರ ಮನೆ ಮನೆಗೆ ತೆರಳಿ ಧರ್ಮ ಪ್ರಚಾರ ಮಾಡುವ ಮೂಲಕ ಭಕ್ತರ ಪ್ರೀತಿ ಸಂಪಾದಿ ಸಿದ್ದರು….

ನಾಳೆ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಪುಣ್ಯಸ್ಮರಣೆ
ಮಂಡ್ಯ

ನಾಳೆ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಪುಣ್ಯಸ್ಮರಣೆ

July 14, 2018

ಪಾಂಡವಪುರ:  ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಜು.15 ರಂದು ಮಠದ ಆವರಣದಲ್ಲಿ ನಡೆಯಲಿದೆ ಎಂದು ಮಠದ ಕಿರಿಯ ಶ್ರೀಗಳಾದ ಶ್ರೀಗುರು ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗೈಕ್ಯ ಸದಾಶಿವ ಸ್ವಾಮೀಜಿಗಳು ಸಾಕಷ್ಟು ಧರ್ಮ ಪ್ರಚಾರ ಮಾಡಿದ್ದರು. ಗ್ರಾಮೀಣ ಭಾಗದಲ್ಲಿ ಜಾತಿ-ಭೇದ, ಮೇಲುಕೀಳು, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಧಾರ್ಮಿಕ ಪ್ರಚಾರ ಮಾಡಿ ಜನರ ಪ್ರೀತಿ ಗಳಿಸಿದ್ದರು. ಅವರ ಅಗಲಿಕೆ ನೋವುಂಟು ಮಾಡಿದೆ ಎಂದರು….

ಸದಾಶಿವ ಶ್ರೀಗಳ ಅಗಲಿಕೆ ಒಂದು ಕಣ್ಣು ಕಳೆದುಕೊಂಡಂತೆ: ಪುಣ್ಯಸ್ಮರಣೆ ಪೂರ್ವಭಾವಿ ಸಭೆಯಲ್ಲಿ ಸಚಿವ ಸಿಎಸ್‍ಪಿ ವಿಷಾದ
ಮಂಡ್ಯ

ಸದಾಶಿವ ಶ್ರೀಗಳ ಅಗಲಿಕೆ ಒಂದು ಕಣ್ಣು ಕಳೆದುಕೊಂಡಂತೆ: ಪುಣ್ಯಸ್ಮರಣೆ ಪೂರ್ವಭಾವಿ ಸಭೆಯಲ್ಲಿ ಸಚಿವ ಸಿಎಸ್‍ಪಿ ವಿಷಾದ

July 9, 2018

ಚಿನಕುರಳಿ:  ಸದಾಶಿವ ಸ್ವಾಮೀಜಿ ಗಳ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಕಳೆದುಕೊಂಡ ನಾವು ಒಂದು ಕಣ್ಣನ್ನು ಕಳೆದುಕೊಂಡಂತಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ವಿಷಾದ ವ್ಯಕ್ತಪಡಿಸಿದರು. ಜು.15ರಂದು ನಡೆಯುವ ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮರಿದೇವರು ಸ್ವಾಮೀಜಿಗಳ ಶಿಷ್ಯರಾಗಿದ್ದ ಶ್ರೀಸದಾಶಿವ ಸ್ವಾಮೀಜಿಗಳು ಹಾಗೂ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ಈ ಮಠಗಳ ಎರಡು ಕಣ್ಣುಗಳಾಗಿದ್ದರು. ಆದರೆ…

ಸದಾಶಿವ ಸ್ವಾಮೀಜಿಗಳ ಅಂತ್ಯಕ್ರಿಯೆ
ಮಂಡ್ಯ

ಸದಾಶಿವ ಸ್ವಾಮೀಜಿಗಳ ಅಂತ್ಯಕ್ರಿಯೆ

July 6, 2018

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದ ಸದಾಶಿವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೇಬಿ ಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಆವರಣದಲ್ಲಿ ನಡೆಯಿತು.ರಾಜ್ಯದ ನಾನಾ ಭಾಗಗಳಿಂದ ಆಗಮಿ ಸಿದ್ದ ವಿವಿಧ ಮಠಗಳ ಮಠಾಧೀಶರು, ಮಠದ ಭಕ್ತರು ಹಾಗೂ ಸಾರ್ವಜನಿಕರು ಮಠದ ಆವರಣದಲ್ಲಿ ಇಡಲಾಗಿದ್ದ ಸದಾ ಶಿವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಬೆಳಿಗ್ಗೆ 11.30ರ ವೇಳೆಗೆ ಸ್ವಾಮೀಜಿ ಅವರ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮಠದ ಆವರಣದಲ್ಲಿ ಒಂದು ಸುತ್ತು ಮೆರವಣಿಗೆ ನಡೆಸಲಾಯಿತು. ನಂತರ ಮಠದ…

ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ನಿಧನ
ಮಂಡ್ಯ

ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ನಿಧನ

July 5, 2018

ಬೆಂಗಳೂರಿನ ಭಕ್ತರ ಮನೆಯಲ್ಲಿ ಹೃದಯಾಘಾತ, ಭಕ್ತರು-ಗಣ್ಯರಿಂದ ಸಂತಾಪ ಪಾಂಡವಪುರ: ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀಸದಾಶಿವ ಸ್ವಾಮೀಜಿ(60) ಅವರು ಬುಧವಾರ ಮುಂಜಾನೆ 5.30ರಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನ ಭಕ್ತರ ಮನೆಗೆ ತೆರಳಿದ ಸಂದರ್ಭದಲ್ಲಿ ಸ್ವಾಮೀಜಿ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಭಕ್ತರ ಕುಟುಂಬದ ವಿವಾಹಕ್ಕೆಂದು ತೆರಳಿದ್ದ ಸ್ವಾಮೀಜಿ ವಿವಾಹದಲ್ಲಿ ಪಾಲ್ಗೊಂಡ ಬಳಿಕ ಕಳೆದ ರಾತ್ರಿ ಶಾಂತಕುಮಾರ್ ಎಂಬ ಭಕ್ತರೊಬ್ಬರ ಮನೆಯಲ್ಲಿ ತಂಗಿದ್ದರು. ಭಕ್ತರ ಮನೆಯಲ್ಲಿ ಮಲಗಿದ್ದಾಗ ಬೆಳಿಗ್ಗೆ 5 ಗಂಟೆಗೆ ಪೂಜೆಗೆಂದು ಎದ್ದೇಳಿಸಿದಾಗ ಸ್ವಾಮೀಜಿ ಇಹಲೋಕ…

Translate »