ಸುತ್ತೂರು: ಮುಂಗಾರು ಮಳೆ ಯಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದರೂ ರಾಂಪುರ ನಾಲೆಗೆ ಇನ್ನೂ ನೀರು ಹರಿಸಿಲ್ಲ ಎಂದು ರೈತರು ದೂರಿದ್ದಾರೆ. ವಾಡಿಕೆಯಂತೆ ಭತ್ತದ ಹೈನು ಫಸಲಿಗೆ ಜೂನ್ ತಿಂಗಳಲ್ಲೇ ನಾಲೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದ್ದಾರೆ. ನಾಲೆಯ ಕೆಲವು ಕಡೆ ಹೂಳು ಎತ್ತಿಸ ಬೇಕಾಗಿದೆ. ಅದೂ ಕೂಡ ನಡೆದಿಲ್ಲ. ನಂಜನಗೂಡು ತಾಲೂಕಿನ ಹುಳಿಮಾವು ಬಳಿ ಹಾದು ಹೋಗಿರುವ ರಾಂಪುರ ನಾಲೆಯಲ್ಲಿ ಹೂಳು ತೆಗೆದಿಲ್ಲ. ನೀರು ಜಮೀನು ಗಳಿಗೆ ತಲುಪದ ಸ್ಥಿತಿಯಿದೆ. ಹೂಳು ತೆಗೆಸಲು ಸಂಬಂಧಪಟ್ಟ…
ರೈಲು ಬೋಗಿಯಲ್ಲಿ ಸರ್ಕಾರಿ ಶಾಲೆ: ಮಕ್ಕಳನ್ನು ಸೆಳೆಯಲು ಶಿಕ್ಷಕರ ಹೀಗೊಂದು ತಂತ್ರ
July 11, 2018ಮೈಸೂರು: ಬಸ್ ಸೌಲಭ್ಯವೇ ಇಲ್ಲದ ಗ್ರಾಮದಲ್ಲಿ ಏಕಾಏಕಿ ರೈಲು ಗಾಡಿ ಬಂದು ನಿಂತರೆ ಅಚ್ಚರಿ ಎನಿಸದೇ ಇರಲಾರದು. ಅಂತಹ ಆಶ್ಚರ್ಯಕರ ಸಂಗತಿಯೊಂದು ನಂಜನಗೂಡು ತಾಲೂಕು, ಸುತ್ತೂರು ಕ್ಲಸ್ಟರ್ ವ್ಯಾಪ್ತಿಯ ಹಾರೋಪುರ ಗ್ರಾಮದಲ್ಲಿ ನಡೆದಿದೆ. ನಂಜನಗೂಡಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಹಾರೋಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೈಲು ಬೋಗಿ ಗಳಾಗಿ ಮಾರ್ಪಟ್ಟಿದ್ದು, ಇದೀಗ ಶಾಲೆ ಜನಾಕರ್ಷಣೆ ಕೇಂದ್ರವಾಗಿದೆ. ಶಾಲೆಯಲ್ಲಿ 3 ಕೊಠಡಿಗಳಿವೆ. ಮೊದಲ ಕೊಠಡಿಗೆ ಎಂಜಿನ್ ಹಾಗೂ ಉಳಿದೆರಡು ಕೊಠಡಿಗೆ ಬೋಗಿಗಳ ಚಿತ್ರ ಚಿತ್ರಿಸಲಾಗಿದ್ದು,…
ರೈತ ಮುಖಂಡರು ಸಾಲ ಮನ್ನಾಕ್ಕೆ ಯಾಚಿಸುವುದು ನಾಚಿಕೆಗೇಡು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ
June 4, 2018ಸುತ್ತೂರು: ರೈತ ಮುಖಂಡರು ಸರ್ಕಾರವನ್ನು ಸಾಲ ಮನ್ನಾ ಮಾಡಿ ಎಂದು ಕೇಳುವುದು ನಾಚಿಕೆಗೇಡಿನ ಸಂಗತಿ, ದೇಶಕ್ಕೆ ಅನ್ನ ನೀಡುವ ರೈತರು ಅನ್ನಕ್ಕಾಗಿ ಕೈ ಚಾಚಬಾರದು ಎಂದು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ ತಿಳಿಸಿದರು. ಅವರು ನಂಜನಗೂಡು ತಾಲೂಕು ಸರಗೂರು ಗ್ರಾಮದ ರೈತ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಎಸ್.ಸಿ. ಬಸವರಾಜುರವರು ತೋಟಕ್ಕೆ ಇಂದು ಭೇಟಿ ನೀಡಿ ಮಾತ ನಾಡುತ್ತಾ, ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತಹ ಬೆಳೆಗಳನ್ನು ಬೆಳೆದು ಅದರಲ್ಲೂ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದರೆ…