ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾ ವಳಿಯಲ್ಲಿ ‘ಸುತ್ತೂರು ಕೇಸರಿ’ ಪ್ರಶಸ್ತಿಗೆ ನಡೆದ ಕಾದಾಟದಲ್ಲಿ ಸತತ ಎರಡು ಗಂಟೆಗಳ ಕಾಲ ಹೋರಾಟ ನಡೆಸಿದರೂ ಪೈಲ್ವಾನ ರಿಬ್ಬರು ಗೆಲ್ಲಲೂ ಇಲ್ಲ, ಸೋಲಲೂ ಇಲ್ಲ. ಆಯೋಜಕರು ಕಡೆಗೆ ಡ್ರಾ ಘೋಷಣೆ ಮಾಡಿ ಪಂದ್ಯ ಕೊನೆಗೊಳಿಸಿದರು. ಕೊಲ್ಲಾಪುರದ ಶಾಪುರಿ ತಾಲೀಂನ ಪೈ.ರಾಹುಲ್ ಸರಕ್ ಹಾಗೂ ಕಲಬುರ ಗಿಯ ಸೂರ್ಯವಂಶಿ ತಾಲೀಂನ ಪೈ. ಸಿದ್ದಪ್ಪ ನಡುವೆ ಎರಡು ಗಂಟೆ ಕಾದಾಟ ನಡೆದರೂ, ಇಬ್ಬರು ಪಟ್ಟಿನ ಮೇಲೆ ಪಟ್ಟು…
ನಮ್ಮೂರ ಶಾನುಭೋಗರ ಮಾತು ಕೇಳಿ ಲಾ ಮಾಡದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗ್ತಿರಲಿಲ್ಲಾ…
February 3, 2019ಸುತ್ತೂರು: ನಾನು ನಮ್ಮೂರಿನ ಶಾನುಭೋಗರ ಮಾತನ್ನು ಕೇಳಿ ಲಾ ಓದದಿದ್ದರೆ ಮುಖ್ಯಮಂತ್ರಿಯಾಗು ತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕಾನೂನು ಪದವಿ ಪಡೆದ ಪರಿಶ್ರಮದ ಹಿಂದಿನ ಕಥೆಯನ್ನು ಬಿಚ್ಚಿಟ್ಟರು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಇಂದು ನಡೆದ ರಾಜ್ಯ ಮಟ್ಟದ ಭಜನಾ ಮೇಳವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಕುರುಬರೆಲ್ಲಾ ಲಾ ಓದೋಕಾಗುತ್ತಾ? ಅದೇನಿದ್ದರೂ ಬ್ರಾಹ್ಮಣರ ಕೆಲಸ ಎಂದು ನಮ್ಮೂರ ಶಾನುಭೋಗರು ನಮ್ಮಪ್ಪನಿಗೆ ಹೆದರಿಸಿಬಿಟ್ಟಿದ್ದರು. ನಮ್ಮಪ್ಪ ಶಾನುಭೋಗರ ಮಾತನ್ನೇ ತಪ್ಪದೇ ಕೇಳ್ತಾ ಇದ್ರು. ನಾನು ಲಾ…
ಸುತ್ತೂರು ಶ್ರೀ ಕ್ಷೇತ್ರದ ಬಗ್ಗೆ ಸಿಎಂ ಕುಮಾರಸ್ವಾಮಿ ಶ್ಲಾಘನೆ
February 3, 2019ಸುತ್ತೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಸುತ್ತೂರು ಕ್ಷೇತ್ರ ವಿಶ್ವಕ್ಕೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದ್ದಾರೆ. ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಾಮೂ ಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾ ಟಿಸಿ, ನೂತನ ವಧು-ವರರಿಗೆ ಆಶೀರ್ವದಿಸಿ ಮಾತನಾಡಿದ ಅವರು, ಈ ಸುತ್ತೂರು ಕ್ಷೇತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ದಾಖಲೆ ಮಾಡಿದೆ. ಇದು ಕೇವಲ ಶೈಕ್ಷಣಿಕ ಕ್ಷೇತ್ರವ ಲ್ಲದೆ, ಧಾರ್ಮಿಕ, ಕೃಷಿ, ಸಾಮಾಜಿಕ ಮತ್ತು ಸಾಂಸ್ಕøತಿಕವಾಗಿಯೂ ತನ್ನದೇ ಆದ ಸಾಧನೆ ಮಾಡಿ, ಗ್ರಾಮೀಣ ಜನರ…
ಶಾಲಾ ವಿದ್ಯಾರ್ಥಿಗಳ ಅದ್ಭುತ ಮಾದರಿಗಳು ಅಚ್ಚರಿ ಮೂಡಿಸುತ್ತಿವೆ!
February 3, 2019ಸುತ್ತೂರು: ಶಿವರಾತ್ರೀಶ್ವರ ಶಿವ ಯೋಗಿಗಳವರ ಜಾತ್ರಾ ಮಹೋತ್ಸವ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜೆಎಸ್‍ಎಸ್ ಸಾಮಾನ್ಯ ಶಿಕ್ಷಣ ವಿಭಾಗದ ವತಿಯಿಂದ ಏರ್ಪಡಿಸಲಾಗಿರುವ ಶೈಕ್ಷಣಿಕ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಒಟ್ಟು 10 ವಿಭಾಗಗಳಲ್ಲಿ 152 ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ. ಅವುಗಳಲ್ಲಿ ಸುತ್ತೂರು ಶಾಲೆಯ ವಿದ್ಯಾರ್ಥಿಗಳು, ತಾವು ತಯಾರಿಸಿರುವ ರಾಕೆಟ್ (ಪಿ.ಎಸ್.ಎಲ್.ವಿ) ಉಡಾವಣೆ ಮತ್ತು ಅದರ ಉಪಯೋಗವನ್ನು ತಿಳಿಸಿ ದರು. ಅಜ್ಜೀಪುರ ಶಾಲೆಯ ವಿದ್ಯಾರ್ಥಿ ಗಳು ಸ್ವಯಂಚಾಲಿತ ಬೀದಿದೀಪ ಮಾದ ರಿಯ ಮೂಲಕ ಸಮಯದ ಉಳಿತಾಯ ಹಾಗೂ ಶಕ್ತಿಯ ಅಪವ್ಯಯ ತಪ್ಪಿಸು…
ಸುತ್ತೂರು ಜಾತ್ರೆಯಲ್ಲಿ ಸೆಲ್ಫಿ ತೋಟ
February 2, 2019ನಂಜನಗೂಡು: ಇದೇ ಪ್ರಥಮ ಬಾರಿಗೆ ಈ ವರ್ಷ ಸುತ್ತೂರು ಜಾತ್ರೆಯಲ್ಲಿ ಪ್ರಮುಖವಾಗಿ ಯುವ ಮನಸ್ಸುಗಳನ್ನು ಸೆಳೆಯಲು ಸಿದ್ಧವಾಗಿರುವ ‘ಸೆಲ್ಫಿ ತೋಟ’ಕ್ಕೆ ಯುವ ಹೃದಯಗಳು ತಮ್ಮ ಚಿತ್ರವನ್ನು ಸೆರೆಹಿಡಿಯಲು ಮುಗಿಬೀಳುತ್ತಿದ್ದರು. ಹೊಸ ಯುಗದ ಯುವಜನರ ಆಸಕ್ತಿ ಆರಂಭವಾಗಿದೆ. ಇದನ್ನು ಮನಗಂಡು ಸುತ್ತೂರು ಜಾತ್ರೆಯಲ್ಲಿ ಕೃಷಿ ಬ್ರಹ್ಮಾಂಡದ ಪಕ್ಕ ವಿಶೇಷವಾಗಿ ಹೂಗಳನ್ನು ಬೆಳೆಸಿ ಸೆಲ್ಫಿ ತೋಟವನ್ನು ಸಿದ್ಧಪಡಿಸಲಾಗಿದೆ. ಮೈಸೂರು ಭಾಗದಲ್ಲಿ ಜಾತ್ರೆಯೆಂದ ಕೂಡಲೇ ನೆನಪಿಗೆ ಬರುವುದು ಸುತ್ತೂರು ಜಾತ್ರೆ. ಈ ಜಾತ್ರೆಗೆ ಮೆರಗು ತರುವುದೇ ವಿವಿಧ ಮಳಿಗೆಗಳು. ಈ ವರ್ಷದ…
ಸಾಧನೆಗೈದ ರೈತರಿಗೆ ಪ್ರಶಸ್ತಿ ಪ್ರದಾನ
February 2, 2019ಮೈಸೂರು: ಇಂದು ಆರಂಭವಾದ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ವಿವಿಧ ಬೆಳೆ ಪದ್ಧತಿಯಲ್ಲಿ ಅತ್ಯುತ್ತಮ ಸಾಧನೆಗೈದ ನಂಜನಗೂಡು ತಾಲೂಕು ಮತ್ತು ಚಾಮರಾಜ ನಗರ ಜಿಲ್ಲೆಯ 10 ಮಂದಿ ರೈತರಿಗೆ ಯಳಂದೂರು ತಾಲೂಕಿನ ಶ್ರೀಮತಿ ಸುಂದರಮ್ಮ ವೀರಭದ್ರಪ್ಪ ಪ್ರತಿಷ್ಠಾನ ಸ್ಥಾಪಿಸಿರುವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸುತ್ತೂರು ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾ ರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ವಾಸು ಅವರು ರೈತರಿಗೆ ಪ್ರಶಸ್ತಿ ನೀಡಿ, ಹಸಿರು ಶಾಲು ಹೊದಿಸುವ ಮೂಲಕ ಅಭಿನಂದಿಸಿದರು. ಎಕರೆಗೆ 23 ರಿಂದ 27 ಕ್ವಿಂಟಾಲ್…
ಇಂದಿನಿಂದ ಸುತ್ತೂರು ಜಾತ್ರೆ ಆರಂಭ
February 1, 2019ನಂಜನಗೂಡು: ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಕೃಷಿಗೆ ಪೂರಕವಾಗಿ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಜನ ಸಾಮಾನ್ಯರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಸುತ್ತೂರು ಜಾತ್ರಾ ಮಹೋತ್ಸವದ ಆರು ದಿನಗಳ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಾತ್ರೆಯ ಪ್ರಮುಖ ಆರ್ಕಷಣೆಯಾಗಿರುವ ವಸ್ತು ಪ್ರದರ್ಶನ, ಕೃಷಿ ಮೇಳಕ್ಕೆ ಅಂತಿಮ ಸ್ಪರ್ಶ ನೀಡಲಾ ಗಿದೆ. ಮಹಾ ದಾಸೋಹಕ್ಕಾಗಿ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಜಾತ್ರೆಯನ್ನು ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ…
ವೈಭವದ ಮಾದಪ್ಪ ರಥೋತ್ಸವ
December 4, 2018ಸುತ್ತೂರು: ನಂಜನಗೂಡು ತಾಲೂಕು ಹದಿನಾರು ಗ್ರಾಮಕ್ಕೆ ಸೇರಿದ ಬಿಳಿಕೆರೆಯಲ್ಲಿ ಮಾದಪ್ಪನ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಮುಂಜಾನೆ ಯಿಂದಲೇ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ನಂತರ ಉತ್ಸವ ಮೂರ್ತಿ ಹೊತ್ತ ತೇರಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು `ಉಘೇ ಮಾದಪ್ಪ’ ಘೋಷಣೆ ಕೂಗುತ್ತಾ, ತೇರನ್ನು ಎಳೆದು ಪುನೀತ ರಾದರು. ಹರಕೆ ಹೊತ್ತಿದ್ದ ಭಕ್ತಾದಿಗಳು ತೇರಿಗೆ ಹಣ್ಣು-ದವನ ಎಸೆದು ಭಕ್ತಿ ಭಾವ ಪರವಶರಾದರು. ರಥೋತ್ಸವಕ್ಕೆ ಆಗಮಿ ಸಿದ್ದ…
ಸುತ್ತೂರು ಶಾಲೆಯಲ್ಲಿ ಶೂ ವಿತರಣೆ
July 28, 2018ಸುತ್ತೂರು: ನಂಜನಗೂಡು ತಾಲೂಕು ಸುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶೂಗಳನ್ನು ಗ್ರಾ.ಪಂ ಅಧ್ಯಕ್ಷ ಪಿ.ಸೋಮಣ್ಣ ವಿತರಿಸಿದರು. ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಹೆಚ್ಚಿನ ಅಭ್ಯಾಸ ಮಾಡಲು ಅನುಕೂಲವಾಗುವಂತೆ ಅತಿಥಿ ಶಿಕ್ಷಕರಾಗಿ ಬರುವವರಿಗೆ ಗ್ರಾ.ಪಂ ವತಿಯಿಂದಲೇ ವೇತನ ನೀಡಲಾಗುವುದು. ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಇಚ್ಚಿಸುವವರು ತಮ್ಮನ್ನು ಸಂಪರ್ಕಿಸಬೇಕೆಂದು ತಿಳಿಸಿದರು. ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಕಲಾವತಿ, ಮುಖ್ಯ ಶಿಕ್ಷಕಿ ವರಲಕ್ಷ್ಮಿ, ಸಹ ಶಿಕ್ಷಕರುಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವೀಣಾ, ಗ್ರಾಮಸ್ಥರು…
ಸುತ್ತೂರು ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ
July 22, 2018ಸುತ್ತೂರು: ಸುತ್ತೂರು ಜೆಎಸ್‍ಎಸ್ ಶಾಲೆಯಲ್ಲಿ ಬಿಳಿಗೆರೆ ಹೋಬಳಿ ಮಟ್ಟದ ಕ್ರೀಡಾಕೂಟವು ನಡೆಯಿತು. ಕ್ರೀಡಾಕೂಟದಲ್ಲಿ ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 50 ಬಾಲಕಿಯರು, 50 ಬಾಲಕರು ಆಟ ಮೇಲಾಟಗಳಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ ಅಶೋಕ ಪ್ರಭುಗೌಡ 7ನೇ ‘ಸಿ’-400 ಮೀ, 600 ಮೀ.,- ಪ್ರಥಮ, ರಾಹುಲ್ ಮೆಹತೊ 7ನೇ ‘ಬಿ’- ತಟ್ಟೆ ಎಸೆತ, ಗುಂಡು ಎಸೆತ, ಉದ್ದ ಜಿಗಿತ-ಪ್ರಥಮ, ಅಶೊಕ ಪ್ರಭುಗೌಡ ಮತ್ತು ತಂಡ 4ಘಿ100 ಮೀ ರಿಲೇ -ಪ್ರಥಮ ಸ್ಥಾನ ಗಳಿಸಿದ್ದಾರೆ….