ಸುತ್ತೂರು ಶ್ರೀ ಕ್ಷೇತ್ರದ ಬಗ್ಗೆ ಸಿಎಂ ಕುಮಾರಸ್ವಾಮಿ ಶ್ಲಾಘನೆ
ಮೈಸೂರು

ಸುತ್ತೂರು ಶ್ರೀ ಕ್ಷೇತ್ರದ ಬಗ್ಗೆ ಸಿಎಂ ಕುಮಾರಸ್ವಾಮಿ ಶ್ಲಾಘನೆ

February 3, 2019

ಸುತ್ತೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಸುತ್ತೂರು ಕ್ಷೇತ್ರ ವಿಶ್ವಕ್ಕೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದ್ದಾರೆ.

ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಾಮೂ ಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾ ಟಿಸಿ, ನೂತನ ವಧು-ವರರಿಗೆ ಆಶೀರ್ವದಿಸಿ ಮಾತನಾಡಿದ ಅವರು, ಈ ಸುತ್ತೂರು ಕ್ಷೇತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ದಾಖಲೆ ಮಾಡಿದೆ. ಇದು ಕೇವಲ ಶೈಕ್ಷಣಿಕ ಕ್ಷೇತ್ರವ ಲ್ಲದೆ, ಧಾರ್ಮಿಕ, ಕೃಷಿ, ಸಾಮಾಜಿಕ ಮತ್ತು ಸಾಂಸ್ಕøತಿಕವಾಗಿಯೂ ತನ್ನದೇ ಆದ ಸಾಧನೆ ಮಾಡಿ, ಗ್ರಾಮೀಣ ಜನರ ಬದುಕು, ರೈತರು ಹಾಗೂ ಸಾಮಾನ್ಯ ಜನರಿಗೆ ಅನುಕೂಲವಾಗುವ ಯೋಜನೆ ರೂಪಿಸಿ ಜನಮನ್ನಣೆ ಗಳಿಸಿದೆ. ಇಂತಹ ಪುಣ್ಯ ಭೂಮಿ ಸುತ್ತೂರಿನಲ್ಲಿ ಸ್ವಾಮೀಜಿ ಯವರ ಸನ್ನಿಧಾನದಲ್ಲಿ ದಾಂಪತ್ಯ ಜೀವ ನಕ್ಕೆ ಕಾಲಿಡುತ್ತಿರುವುದು ಶುಭದಾಯಕ. ನವದಂಪತಿಗಳಿಗೆ ತಾಯಿ ಚಾಮುಂಡೇಶ್ವರಿ ದೇವಿ ಹಾಗೂ ಪೂಜ್ಯ ಜಗದ್ಗುರುಗಳ ಆಶೀ ರ್ವಾದ ಸದಾ ಇರಲಿ ಎಂದು ಹಾರೈಸಿದರು.

ಸುತ್ತೂರು ಕ್ಷೇತ್ರಕ್ಕೂ ಹೆಚ್.ಡಿ. ದೇವೇ ಗೌಡರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಕುಟುಂಬದವರು ಶ್ರದ್ಧೆ, ಭಕ್ತಿಯಿಂದ ಈ ಕ್ಷೇತ್ರಕ್ಕೆ ಬರುತ್ತೇವೆ.

ಶ್ರೀಮಠ ನಮ್ಮ ಕುಟುಂಬಕ್ಕೆ ದೊಡ್ಡ ಶಕ್ತಿ ತುಂಬಿದೆ. ಸರ್ಕಾರಗಳು ಮಾಡಬೇಕಾದ ಹಲವಾರು ಕಾರ್ಯಕ್ರಮಗಳನ್ನು ಸುತ್ತೂರು ಮಠ ಮಾಡುತ್ತಿದೆ. ಎಲ್ಲಾ ಕ್ಷೇತ್ರಗಳಿಂದಲೂ ನಾಡಿಗೆ ದೊಡ್ಡ ಕೊಡುಗೆ ನೀಡಿದೆ. ಈ ಜಾತ್ರೆಯಲ್ಲಿ ರೈತರಿಗೆ ತಿಳಿವಳಿಕೆ ನೀಡುವ ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆ ಆಯೋಜಿ ಸಿದೆ. ಸಿರಿಧಾನ್ಯ ಬೆಳೆಯುವ ಮೂಲಕ ಕೃಷಿ ಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದ ಬಹುದು ಎಂಬುದನ್ನು ಶ್ರೀ ಮಠ ತೋರಿ ಸಿದೆ. ಗ್ರಾಮೀಣ ಸೊಗಡು ಈ ಜಾತ್ರೆಯ ವಿಶೇಷ ಎಂದರು. ಮಾಜಿ ಸಚಿವ ಶಾಮ ನೂರು ಶಿವಶಂಕರಪ್ಪ ಮಾತನಾಡಿ, ಸುತ್ತೂರುಮಠ ಇಡೀ ದೇಶದಲ್ಲಿ ಧಾರ್ಮಿಕ, ಶೈಕ್ಷಣಿಕ, ಅನ್ನದಾಸೋಹದಲ್ಲಿ ಹೆಸರು ಗಳಿಸಿದೆ. ಜಾತ್ರಾ ವೇಳೆ ನಡೆಯುವ ವಿವಾಹ ಮಹೋತ್ಸವದಲ್ಲಿ ನಮ್ಮಿಂದ ವಧುವರರಿಗೆ ತಾಳಿಕೊಡಿಸುವುದು ನಮ್ಮ ಪುಣ್ಯವಾಗಿದೆ. ಖರ್ಚಿಲ್ಲದೆ ಇಂಥ ಸಾಮೂಹಿಕ ವಿವಾಹ ದಲ್ಲಿ ಮದುವೆಯಾಗಬೇಕು. ಪರಸ್ಪರ ಅರಿತು ಜೀವನ ನಡೆಸಿಕೊಂಡು ಹೋಗ ಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಜ್ಜಯಿನಿ ಮಠದ ಶ್ರೀಸಿದ್ಧಲಿಂಗರಾಜ ದೇಶಿಕೇಂದ್ರ ಸ್ವಾಮೀಜಿ, ಶಾಂತಲಿಂಗೇಶ್ವರ ಮಠದ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಆಶೀರ್ವ ಚನ ನೀಡಿದರು. ಸಚಿವರಾದ ಜಿ.ಟಿ.ದೇವೇ ಗೌಡ, ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಶಾಸಕರಾದ ಡಾ. ಯತೀಂದ್ರ, ಬಿ.ಹರ್ಷವರ್ಧನ್, ಎಂ. ಅಶ್ವಿನ್‍ಕುಮಾರ್, ಸಿ.ಎಸ್.ನಿರಂಜನ ಕುಮಾರ್, ಕೆ.ಟಿ.ಶ್ರೀಕಂಠೇಗೌಡ, ಎನ್. ಎಸ್.ಬೋಜೇಗೌಡ, ಅನಿತಾಕುಮಾರ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »