ಸುತ್ತೂರು ಶಾಲೆಯಲ್ಲಿ ಶೂ ವಿತರಣೆ
ಮೈಸೂರು

ಸುತ್ತೂರು ಶಾಲೆಯಲ್ಲಿ ಶೂ ವಿತರಣೆ

July 28, 2018

ಸುತ್ತೂರು: ನಂಜನಗೂಡು ತಾಲೂಕು ಸುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶೂಗಳನ್ನು ಗ್ರಾ.ಪಂ ಅಧ್ಯಕ್ಷ ಪಿ.ಸೋಮಣ್ಣ ವಿತರಿಸಿದರು. ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಹೆಚ್ಚಿನ ಅಭ್ಯಾಸ ಮಾಡಲು ಅನುಕೂಲವಾಗುವಂತೆ ಅತಿಥಿ ಶಿಕ್ಷಕರಾಗಿ ಬರುವವರಿಗೆ ಗ್ರಾ.ಪಂ ವತಿಯಿಂದಲೇ ವೇತನ ನೀಡಲಾಗುವುದು. ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಇಚ್ಚಿಸುವವರು ತಮ್ಮನ್ನು ಸಂಪರ್ಕಿಸಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಕಲಾವತಿ, ಮುಖ್ಯ ಶಿಕ್ಷಕಿ ವರಲಕ್ಷ್ಮಿ, ಸಹ ಶಿಕ್ಷಕರುಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವೀಣಾ, ಗ್ರಾಮಸ್ಥರು ಹಾಜರಿದ್ದರು.

Translate »