ಗೂಡ್ಸ್ ವಾಹನದಲ್ಲಿ ಜಾನುವಾರು ಸಾಗಾಣಿಕೆ: ಇಬ್ಬರ ಬಂಧನ
ಮೈಸೂರು

ಗೂಡ್ಸ್ ವಾಹನದಲ್ಲಿ ಜಾನುವಾರು ಸಾಗಾಣಿಕೆ: ಇಬ್ಬರ ಬಂಧನ

July 28, 2018

ಬೆಟ್ಟದಪುರ:  ಕಸಾಯಿ ಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನವನ್ನು ಜಪ್ತಿ ಮಾಡಿರುವ ಬೆಟ್ಟದಪುರ ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಗೂಡ್ಸ್ ವಾಹನ (ಕೆಎ12, ಬಿ.5894) ವೊಂದರಲ್ಲಿ ಒಂದು ಹಸು, ಒಂದು ಕರು ಹಾಗೂ ಒಂದು ಎಮ್ಮೆಯನ್ನು ರವಿ ಹಾಗೂ ಸಾದ್ದಿಕ್ ಖಾನ್ ಎಂಬುವರು ಗುರುವಾರ ಮಧ್ಯಾಹ್ನ 2 ಗಂಟೆಯಲ್ಲಿ ಕಣಗಾಲು ಬಳಿ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇಲೆ ಪಿಎಸ್‍ಐಗಳಾದ ಚಿಕ್ಕಸ್ವಾಮಿ, ಜಗದೀಶ್ ಹಾಗೂ ಸಿಬ್ಬಂದಿಗಳಾದ ಮಧು ಕುಮಾರ್, ಭಾಸ್ಕರ್, ಮಂಜು ಮತ್ತು ಸ್ವಾಮಿ ಅವರು ಕಾರ್ಯಾಚರಣೆ ನಡೆಸಿ ಜಾನುವಾರು, ವಾಹನ ಸಮೇತ ಆರೋಪಿ ಗಳನ್ನು ಬಂಧಿಸಿದರು.

Translate »