ಶಾಲಾ ವಿದ್ಯಾರ್ಥಿಗಳ ಅದ್ಭುತ ಮಾದರಿಗಳು ಅಚ್ಚರಿ ಮೂಡಿಸುತ್ತಿವೆ!
ಮೈಸೂರು

ಶಾಲಾ ವಿದ್ಯಾರ್ಥಿಗಳ ಅದ್ಭುತ ಮಾದರಿಗಳು ಅಚ್ಚರಿ ಮೂಡಿಸುತ್ತಿವೆ!

February 3, 2019

ಸುತ್ತೂರು: ಶಿವರಾತ್ರೀಶ್ವರ ಶಿವ ಯೋಗಿಗಳವರ ಜಾತ್ರಾ ಮಹೋತ್ಸವ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜೆಎಸ್‍ಎಸ್ ಸಾಮಾನ್ಯ ಶಿಕ್ಷಣ ವಿಭಾಗದ ವತಿಯಿಂದ ಏರ್ಪಡಿಸಲಾಗಿರುವ ಶೈಕ್ಷಣಿಕ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಒಟ್ಟು 10 ವಿಭಾಗಗಳಲ್ಲಿ 152 ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ.

ಅವುಗಳಲ್ಲಿ ಸುತ್ತೂರು ಶಾಲೆಯ ವಿದ್ಯಾರ್ಥಿಗಳು, ತಾವು ತಯಾರಿಸಿರುವ ರಾಕೆಟ್ (ಪಿ.ಎಸ್.ಎಲ್.ವಿ) ಉಡಾವಣೆ ಮತ್ತು ಅದರ ಉಪಯೋಗವನ್ನು ತಿಳಿಸಿ ದರು. ಅಜ್ಜೀಪುರ ಶಾಲೆಯ ವಿದ್ಯಾರ್ಥಿ ಗಳು ಸ್ವಯಂಚಾಲಿತ ಬೀದಿದೀಪ ಮಾದ ರಿಯ ಮೂಲಕ ಸಮಯದ ಉಳಿತಾಯ ಹಾಗೂ ಶಕ್ತಿಯ ಅಪವ್ಯಯ ತಪ್ಪಿಸು ವುದನ್ನು ವಿವರಿಸುವ ರೀತಿ ವೀಕ್ಷಕರ ಗಮನ ವನ್ನು ಸೆಳೆಯಿತು. ಜಯನಗರ ಶಾಲೆಯ ವಿದ್ಯಾರ್ಥಿಗಳು ಚಪ್ಪಾಳೆಯಿಂದ ಬಲ್ಬ್ ಉರಿಯುವ ಮಾದರಿಯ ಮೂಲಕ ಸ್ವಿಚ್ ಸಹಾಯವಿಲ್ಲದೆ ಬಲ್ಬ್‍ನ್ನು ಹೊತ್ತಿ ಸುವ ವಿಧಾನವನ್ನು ವಿವರಿಸುತ್ತಿದ್ದಾರೆ.

ರಾಮಾಪುರ ಶಾಲೆಯ ಮಕ್ಕಳು ಬೆಳಕಿನ ಪೆಟ್ಟಿಗೆ ಮಾದರಿಯ ಮೂಲಕ ಬೆಳಕಿನ ಗುಣ ಗಳನ್ನು ಪ್ರಾಯೋಗಿಕವಾಗಿ ವಿವರಿಸುತ್ತಿರು ವುದು ಉತ್ತಮವಾಗಿದೆ. ಸರಸ್ವತಿಪುರಂ ಶಾಲೆಯ ಮಕ್ಕಳು ಸುರಕ್ಷತೆ ಮತ್ತು ಸಂರಕ್ಷಣೆ ಮಾದ ರಿಯ ಮೂಲಕ ರಸ್ತೆಯ ತಿರುವುಗಳಲ್ಲಿ ಅಪ ಘಾತವನ್ನು ತಪ್ಪಿಸುವ ವಿಧಾನವನ್ನು ಸಾಕ್ಷೀ ಕರಿಸುತ್ತಿರುವುದು ಗಮನಾರ್ಹವಾಗಿದೆ.

ಲಕ್ಷ್ಮೀಪುರಂ ಶಾಲೆಯ ವಿದ್ಯಾರ್ಥಿ ಗಳು ನ್ಯೂಟನ್‍ನ ಚಲನೆಯ ನಿಯಮ ಗಳು ಮಾದರಿಯ ಮೂಲಕ ಚಲನೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಬರಗಿ ಶಾಲೆಯ ವಿದ್ಯಾರ್ಥಿಗಳು ಕಾಂತೀಯ ಅನುರಣನ ಮಾದರಿಯ ಮೂಲಕ ಎಕ್ಸ್ ರೇ ಮತ್ತು ಸ್ಕ್ಯಾನಿಂಗ್ ಬಗ್ಗೆ ಸಾರ್ವಜ ನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಹುಲ್ಲಹಳ್ಳಿ ಶಾಲೆಯ ವಿದ್ಯಾರ್ಥಿಗಳು ಸೋಲಾರ್ ವಿಲೇಜ್ ಮಾದರಿಯ ಮೂಲಕ ಸೌರ ಶಕ್ತಿಯ ಬಳಕೆಯ ಬಗ್ಗೆ ವಿವರಿಸುತ್ತಿರು ವುದು ಆಕರ್ಷಣೀಯವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಶಾಲೆಗಳಲ್ಲಿ ವಿಜ್ಞಾನಾ ಭಿವೃದ್ಧಿ ಸಮಿತಿಯ ಸಂಚಾರಿ ಪ್ರಯೋ ಗಾಲಯದ ಮೂಲಕ ಹಲವಾರು ಮಾದರಿ ಗಳನ್ನು ಸುತ್ತೂರು ಬಿ.ಇಡಿ ಪ್ರಶಿಕ್ಷಣಾರ್ಥಿ ಗಳು ಪ್ರದರ್ಶಿಸುತ್ತಿದ್ದಾರೆ. ಅಗಸ್ತ್ಯ ಫೌಂಡೇಶನ್ ವತಿಯಿಂದ ಪ್ರದರ್ಶಿಸಿ ರುವ ಮಾದರಿಗಳನ್ನು ಲಕ್ಷ್ಮೀಪುರಂ ಶಾಲೆಯ ವಿದ್ಯಾರ್ಥಿಗಳು ವಿವರಿಸುತ್ತಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳು ಜಾತ್ರೆಯನ್ನು ನೋಡಲು ಬಂದ ಜನಸಾಗರಕ್ಕೆ ತಿಳಿವಳಿಕೆ ನೀಡುವಲ್ಲಿ ಮತ್ತು ಅರಿವು ಮೂಡಿಸುವಲ್ಲಿ ಉತ್ಸುಕರಾಗಿದ್ದಾರೆ. ಬೆಳಗಿನಿಂದಲೇ ಹರಗುರು ಚರಮೂರ್ತಿ ಗಳು, ಅಧಿಕಾರವರ್ಗ ದವರು, ಸಾರ್ವ ಜನಿಕರು, ಭಕ್ತಾದಿಗಳು, ಶಾಲಾ ವಿದ್ಯಾರ್ಥಿಗಳು ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Translate »