ಸುತ್ತೂರು ಜಾತ್ರೆಯಲ್ಲಿ ಸೆಲ್ಫಿ ತೋಟ
ಮೈಸೂರು

ಸುತ್ತೂರು ಜಾತ್ರೆಯಲ್ಲಿ ಸೆಲ್ಫಿ ತೋಟ

February 2, 2019

ನಂಜನಗೂಡು: ಇದೇ ಪ್ರಥಮ ಬಾರಿಗೆ ಈ ವರ್ಷ ಸುತ್ತೂರು ಜಾತ್ರೆಯಲ್ಲಿ ಪ್ರಮುಖವಾಗಿ ಯುವ ಮನಸ್ಸುಗಳನ್ನು ಸೆಳೆಯಲು ಸಿದ್ಧವಾಗಿರುವ ‘ಸೆಲ್ಫಿ ತೋಟ’ಕ್ಕೆ ಯುವ ಹೃದಯಗಳು ತಮ್ಮ ಚಿತ್ರವನ್ನು ಸೆರೆಹಿಡಿಯಲು ಮುಗಿಬೀಳುತ್ತಿದ್ದರು.

ಹೊಸ ಯುಗದ ಯುವಜನರ ಆಸಕ್ತಿ ಆರಂಭವಾಗಿದೆ. ಇದನ್ನು ಮನಗಂಡು ಸುತ್ತೂರು ಜಾತ್ರೆಯಲ್ಲಿ ಕೃಷಿ ಬ್ರಹ್ಮಾಂಡದ ಪಕ್ಕ ವಿಶೇಷವಾಗಿ ಹೂಗಳನ್ನು ಬೆಳೆಸಿ ಸೆಲ್ಫಿ ತೋಟವನ್ನು ಸಿದ್ಧಪಡಿಸಲಾಗಿದೆ.

ಮೈಸೂರು ಭಾಗದಲ್ಲಿ ಜಾತ್ರೆಯೆಂದ ಕೂಡಲೇ ನೆನಪಿಗೆ ಬರುವುದು ಸುತ್ತೂರು ಜಾತ್ರೆ. ಈ ಜಾತ್ರೆಗೆ ಮೆರಗು ತರುವುದೇ ವಿವಿಧ ಮಳಿಗೆಗಳು. ಈ ವರ್ಷದ ಸುತ್ತೂರು ಜಾತ್ರೆಯಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಿದರೆ 20 ರೂಪಾಯಿ ಅಂಗಡಿ ಚಾಟ್ ಸೆಂಟರ್, ಹೋಟಲ್‍ಗಳು, ಆಟಿಕೆಗಳ ಮಳಿಗೆಗಳು ಮೆರಗು ತಂದಿವೆ. ವ್ಯಾಪಾರಿಗಳಂತೂ ಜಾತ್ರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೂರದಿಂದ ಬರುವ ಭಕ್ತಾದಿಗಳನ್ನು ತಂಪಾಗಿರಿಸಲು ಅಲ್ಲಲ್ಲಿ ಐಸ್‍ಕ್ರೀಂ ಹಾಗೂ ಹಣ್ಣಿನ ಅಂಗಡಿ ಗಳನ್ನು ತೆರೆದಿರುವ ವ್ಯಾಪಾರಿಗಳು ಪ್ರವಾಸಿಗರನ್ನು ತೃಪ್ತಿಪಡಿಸುತ್ತಿದ್ದಾರೆ.

Translate »