ಹೊಸತನದ ಹುಡುಕಾಟದಲ್ಲಿ ದೇಸಿ ಕಲೆ, ಸಂಸ್ಕøತಿ ಮರೆಯುತ್ತಿದ್ದೇವೆ: ಡಿ.ಸಿ.ತಮ್ಮಣ್ಣ
ಮೈಸೂರು

ಹೊಸತನದ ಹುಡುಕಾಟದಲ್ಲಿ ದೇಸಿ ಕಲೆ, ಸಂಸ್ಕøತಿ ಮರೆಯುತ್ತಿದ್ದೇವೆ: ಡಿ.ಸಿ.ತಮ್ಮಣ್ಣ

February 2, 2019

ನಂಜನಗೂಡು: ಹೊಸತನದ ಹುಡುಕಾಟದಲ್ಲಿ ನಾವು ನಮ್ಮ ಪುರಾತನ ಸಂಸ್ಕøತಿ, ಜಾನಪದ ಕಲೆಯನ್ನು ಮರೆತು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಅವರು ಶ್ರೀ ಕ್ಷೇತ್ರ ಸುತ್ತೂರು ಶಿವರಾತ್ರೀ ಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ದೇಸಿ ಆಟಗಳ ಸ್ಪರ್ಧೆ ದೋಣಿ ವಿಹಾರ, ರಂಗೋಲಿ, ಸೋಬಾನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಕøತಿಯನ್ನು ಮರೆಯುತ್ತಿರುವುದ ರಿಂದ ಅನಾಥ ಪ್ರಜ್ಞೆ ಎಲ್ಲರನ್ನೂ ಕಾಡು ತ್ತಿದೆ. ಪುರಾತನ ಸಂಸ್ಕøತಿ, ಕಲೆ, ದೇಸಿ ಆಟೋಟಗಳ ಅನುಸರಿಸುವಿಕೆಯಿಂದ ಸುಖ ವಾಗಿ ಬದುಕಲು ಸಾಧ್ಯ ಎಂದ ಅವರು, ಜಾನಪದ ಕಲೆ, ಸಾಹಿತ್ಯ ದೇಸೀ ಆಟಗಳು ಪ್ರಸ್ತುತ ದಿನಗಳಲ್ಲಿ ಅಗೋಚರವಾಗಿವೆ. ಇದನ್ನು ಉಳಿಸುವ ಕಾಯಕದಲ್ಲಿ ಸುತ್ತೂರು ಮಠ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾವೆಲ್ಲಾ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದು, ರಾಜಕಾರಣಿಗಳು ರಾಜಕಾರಣದ ಗಾಂಭೀರ್ಯತೆಯನ್ನು ಹಾಳುಮಾಡುತ್ತಿದ್ದು, ನಾವೆಲ್ಲಾ ರಾಜಕಾರಣಕ್ಕೆ ಬರಬಾರದಿತ್ತು ಎಂಬ ಭಾವನೆ ಕಾಡುತ್ತಿದೆ ಎಂದು ತಮ್ಮಣ್ಣ ಬೇಸರ ವ್ಯಕ್ತಪಡಿಸಿದರು.

ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಮಾತನಾಡಿ, ಮನುಷ್ಯ ನಿಗೆ ಸಾಂಸ್ಕøತಿಕ, ಧಾರ್ಮಿಕ ಬದುಕು ಇಲ್ಲದೆ ಹೋಗಿದ್ದರೆ ಅವನು ಕ್ರೂರಿಯಾ ಗುತ್ತಿದ್ದ ಎಂದು ಅಭಿಪ್ರಾಯಪಟ್ಟ ಅವರು, ದೇಶದ ಸಂಪತ್ತನ್ನು ಸೃಷ್ಠಿ ಮಾಡುವ ಕಾಯಕದಲ್ಲಿ ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ತೊಡಗಿದ್ದಾರೆ. ಅವರಿಗೆ ಸುತ್ತೂರು ಜಾತ್ರೆ ದೊಡ್ಡ ಮನರಂಜನೆ ಯಾಗಿದೆ. ನಾವು ವಿದೇಶದಿಂದ ಏನನ್ನೂ ಅನುಕರಿಸಬೇಕಾಗಿಲ್ಲ. ನಮ್ಮ ಗ್ರಾಮೀಣ ಭಾಗದಲ್ಲಿ ಇರುವ ಜಾನಪದ, ಕಲೆ, ಸಂಸ್ಕøತಿಯನ್ನು ಪೋಷಿಸಿ ಅದಕ್ಕೆ ಅಂತಿಮ ಸ್ಪರ್ಶ ನೀಡಿದರೆ ಎಲ್ಲವನ್ನೂ ಇಲ್ಲಿ ಪಡೆ ಯಲು ಸಾಧ್ಯ ಎಂದರು.

ನಾನು ಶಿಕ್ಷಣ ಇಲಾಖೆಯ ಗೋಜಲು ಗೊಂದಲಗಳನ್ನು ಅರ್ಥಮಾಡಿಕೊಳ್ಳಲು ಸುಮಾರು 4 ತಿಂಗಳು ಬೇಕಾಯಿತು. ನಾನು ಅರ್ಥಮಾಡಿಕೊಳ್ಳುವ ಮೊದಲೇ ಆ ಸ್ಥಾನವನ್ನು ತ್ಯಜಿಸಿದೆ. ಆದರೆ ಸುತ್ತೂರು ಮಠ ಅನಾಥಾ ಶ್ರಮದಿಂದ ವೈದ್ಯಕೀಯ ಶಿಕ್ಷಣ ಸಂಸ್ಥೆಯ ವರೆವಿಗೆ ಎಲ್ಲವನ್ನೂ ಶಿಸ್ತು ಬದ್ಧವಾಗಿ ನಡೆ ಸುತ್ತಿರುವುದು ಪ್ರಶಂಸಾರ್ಹ ಎಂದರು.

ಮಾಜಿ ಸಚಿವ ಮಹಿಮಾ ಪಾಟೀಲ್ ಮಾತನಾಡಿ, ಪ್ರತಿಯೊಂದನ್ನೂ ನಾವು ಆಟವನ್ನಾಗಿ ನೋಡಬೇಕಿದೆ. ಆಗ ಜೀವನ ಸೊಗಸಾಗಿರುತ್ತದೆ. ಇಲ್ಲವಾದಲ್ಲಿ ಜೀವನ ಕಳೆದುಹೋಗುತ್ತದೆ. ರಾಜಕಾರ ಣವೂ ಸಹ ಒಂದು ಆಟ, ಅದನ್ನೇ ಜೀವನವೆಂದು ಮುಳುಗಿಹೋದಲ್ಲಿ ರಾಜ ಕಾರಣಿಯೂ ಸಂತೋವಾಗಿರುವುದಿಲ್ಲ, ಜನರೂ ಸಂತೋಷವಾಗಿರುವುದಿಲ್ಲ. ಚುನಾ ವಣೆಗಳು ಪಾರದರ್ಶಕವಾಗಿ ಸರಳವಾಗಿ ನಡೆಯಬೇಕು ಆಗ ಮಾತ್ರ ಆರಿಸಿ ಬಂದ ಜನಪ್ರತಿ ನಿಧಿಗಳು ಜನರಿಗಾಗಿ ಕೆÀಲಸ ಮಾಡುತ್ತಾರೆ ಎಂದರು.
ದೋಣಿ ವಿಹಾರ ಚೌಕಭಾರ, ಅಳ ಗುಳಿ ಮನೆ, ಹುಲಿಕುರಿ ಆಟಗಳು ಪ್ರೇಕ್ಷ ಕರ ಮನಸೆಳೆದವು.ಸಮಾರಂಭದಲ್ಲಿ ತೋಟಗಾರಿಕ ಸಚಿವ ಮನಗೂಳಿ, ಮಾಜಿ ಸಚಿವೆ ಗೀತಾ ಮಹದೇವ ಪ್ರಸಾದ್, ಮಾತನಾಡಿದರು. ಸಮಾರಂಭ ದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಜೀ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಸಮಾ ರಂಭದಲ್ಲಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಸುಧಾಕರ್ ಶೆಟ್ಟಿ, ಗಣೇಶ್ ಮಹದೇವಪ್ರಸಾದ್ ಸೇರಿದಂತೆ ಹಲವಾರು ಪ್ರಮುಖರು ಇದ್ದರು.

Translate »