ಮೈಸೂರು: ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಬೆಳೆಯ ಇಳುವರಿ ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳು ವಂತೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ನಿರ್ಮಲಾನಂದ ಮಹಾ ಸ್ವಾಮೀಜಿ ಅವರು ರೈತರಿಗೆ ಸಲಹೆ ನೀಡಿದ್ದಾರೆ.
ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ಇಂದು ಆರಂಭಗೊಂಡ ಆದಿ ಜಗದ್ಗುರು ಶ್ರೀ ಶಿವ ರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದೇಶದ ಜನ ಸಂಖ್ಯೆಯಲ್ಲಿ ಶೇಕಡ 70 ರಷ್ಟಿರುವ ರೈತರು ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿರುವುದರಿಂದ ಆರ್ಥಿಕ ಸಬಲತೆಗೆ ಕಾರಣರಾಗಿದ್ದಾರೆ ಎಂದರು.
ರೈತರು ದೇಶದ ಆರ್ಥಿಕತೆಯಲ್ಲಿ ಶೇಕಡ 30 ರಿಂದ 50 ರಷ್ಟು ಇದ್ದ ಜಿಡಿಪಿ ಪ್ರಮಾಣ ಇದೀಗ ಶೇ. 14ರಿಂದ 15ಕ್ಕೆ ಇಳಿದಿದೆ. ಕೃಷಿ ಭೂಮಿ ಕಡಿಮೆಯಾಗಿರು ವುದು ಮತ್ತು ಕೃಷಿ ಅವಲಂಬಿತರ ಸಂಖ್ಯೆ ಇಳಿಮುಖವಾಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಶ್ರೀಗಳು ನುಡಿದರು.
ಇರುವಷ್ಟು ಭೂಮಿಯಲ್ಲೇ ಅತ್ಯಾಧು ನಿಕ ಪದ್ಧತಿ ಅಳವಡಿಸಿಕೊಂಡು ನಿಯಮಿತ ವೆಚ್ಚದಲ್ಲಿ ಅಧಿಕ ಇಳುವರಿ ಬರುವಂತೆ ಮಾಡಿದ ನಂತರ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಂಡುಕೊಂಡರೆ ರೈತರ ಆರ್ಥಿಕ ಪ್ರಗತಿ ಕಾಣಲು ಸಾಧ್ಯ ಎಂದು ಅವರು ಇದೇ ವೇಳೆ ನುಡಿದರು.
ಮಠ-ಮಾನ್ಯಗಳೂ ಸಹ ಧಾರ್ಮಿಕ, ಆಧ್ಯಾತ್ಮಿಕ ವಿಷಯಗಳಿಗೆ ಹೆಚ್ಚು ಒತ್ತು ಕೊಡುತ್ತಿದ್ದು, ಸುತ್ತೂರು ಮಹಾಸಂಸ್ಥಾ ನದ ಮಠವು ಜಾತ್ರಾ ಮಹೋತ್ಸವದಲ್ಲಿ ಕೃಷಿ ಮೇಳ ಆಯೋಜಿಸಿ ರೈತರಿಗೆ ಉತ್ತೇಜನ ನೀಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದ ಶ್ರಿ ನಿರ್ಮ ಲಾನಂದ ಸ್ವಾಮೀಜಿಗಳು, ಧರ್ಮದ ಜೊತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿರುವ ಸುತ್ತೂರು ಮಹಾಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ ಎಂದರು.
ಸುತ್ತೂರು ಜಾತ್ರೆಯ ಕೇಂದ್ರ ಬಿಂದು ಕೃಷಿಮೇಳ
ನಂಜನಗೂಡು: ಪ್ರತಿ ವರ್ಷ ಸುತ್ತೂರು ಜಾತ್ರೆಯಲ್ಲಿ ಕೃಷಿಮೇಳಕ್ಕೆ ವಿಶೇಷ ಆದ್ಯತೆ ನೀಡುತ್ತಿರುವ ಹಿನ್ನೆಲೆ ಯಲ್ಲಿ ಜನರ ಬಹು ಆಕರ್ಷಣೆಯ ಕೇಂದ್ರವಾಗಿ ಜಾತ್ರೆಯ ಮೊದಲ ದಿನವೇ ಸಾಗರೋಪಾದಿಯಲ್ಲಿ ಜನ ಕೃಷಿಮೇಳವನ್ನು ವೀಕ್ಷಿಸುತ್ತಿದ್ದಾರೆ.
ಈ ಬಾರಿಯ ಕೃಷಿಮೇಳದಲ್ಲಿ 30 ದಿನದಿಂದ 90ದಿನದೊಳಗೆ ಬೆಳೆಯ ಬಹುದಾದ 160 ಬೆಳೆಗಳ ಪ್ರಾತ್ಯಕ್ಷಿಕೆ ಕಾಣಬಹುದಾಗಿದೆ. ರೈತರಿಗೆ ಕೃಷಿ ಬಗ್ಗೆ ತಿಳುವಳಿಕೆ ಹಾಗೂ ಅವರು ಸ್ವಾವ ಲಂಬನೆ ಜೀವನಕ್ಕೆ ಸಿದ್ಧಗೊಂಡಿರುವ ಕೃಷಿಮೇಳವನ್ನು ಈ ಬಾರಿ 3 ಭಾಗ ಗಳಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ತೋಟಗಾರಿಕೆಯು ಮೊದಲನೆಯದ್ದಾ ಗಿದ್ದು, 60 ಬೇರೆ ತರಹದ ದೇಶಿಯ ಹಾಗೂ ವಿದೇಶಿಯ ತರಕಾರಿ ಮತ್ತು ಹೂವುಗಳನ್ನು ಒಳಗೊಂಡಿವೆ.
ಕೃಷಿ ಮೇಳದ ಎರಡನೇ ಭಾಗವಾಗಿ ಕೃಷಿ ಬ್ರಹ್ಮಾಂಡ ಸಿದ್ಧವಾಗಿದೆ. ಕಡಿಮೆ ಜಾಗ ದಲ್ಲಿ ಹೆಚ್ಚು ವೈವಿಧ್ಯತೆಯ ಬೆಳೆಗಳನ್ನು ಬೆಳೆಯಬಹುದೆಂಬ ಅರಿವು ಮೂಡಿಸ ಲಾಗಿದೆ. ಒಂದು ಎಕರೆ ಹತ್ತು ಗುಂಟೆಯಲ್ಲಿ 112 ಬೆಳೆಗಳನ್ನು ಬೆಳೆಯಲಾಗಿದ್ದು, ವಾಣಿಜ್ಯ ಬೆಳೆ, ಸಿರಿಧಾನ್ಯಗಳು, ವಿದೇಶಿ ಬೆಳೆಗಳು ದ್ವಿದಳ ಬೆಳೆಗಳು, ಎಣ್ಣೆ ಕಾಳು ಬೆಳೆಗಳು, ಕಬ್ಬು, ತರಕಾರಿಗಳು ಹಾಗೂ ಸೊಪ್ಪಿನ ಬೆಳೆಗಳು, ಹೂವಿನಗಿಡಗಳು, ಹಣ್ಣಿನ ಬೆಳೆಗಳು, ತೋಟಪಟ್ಟಿ ಬೆಳೆಗಳು, ಔಷಧ ಹಾಗೂ ಸುಗಂಧ ಸಸ್ಯಗಳು, ಮೇವಿನ ಬೆಳೆ ಗಳು, ರೇಷ್ಮೆ, ಬಹುಪಯೋಗಿ ಮರಗಳು, ಬೇಲಿ ಬೆಳೆಗಳು, ಪೂರಕ ಕಸುಬುಗಳು ಒಳಗೊಂಡಿದೆ. ಅಲ್ಲದೆ ಮಳೆ ನೀರು ಸಂಗ್ರಹಣೆ, ಮೀನುಗಾರಿಕೆ ಮತ್ತು ಜೇನು ಸಾಕಾಣಿಕೆ ವಿಶೇಷವಾಗಿ ಕುಟೀರವೊಂದನ್ನು ನಿರ್ಮಿಸಲಾಗಿದ್ದು, ಅಲ್ಲಿ ಪಶುಸಂಗೋ ಪನೆಯನ್ನು ಸಹ ಮಾಡಬಹುದಾದ ವ್ಯವಸ್ಧೆ ಇದೆ. ಇದರಿಂದ ಸಣ್ಣ ಹಾಗೂ ಅತೀ ಸಣ್ಣ ರೈತರು ಸ್ವಾವಲಂಬನೆ ಬದುಕನ್ನು ಕಟ್ಟಿ ಕೊಳ್ಳಲು ಕೃಷಿ ಬ್ರಹ್ಮಾಂಡ ನೆರವಾಗಲಿದೆ.,
ಒಟ್ಟಾರೆಯಾಗಿ ಕೃಷಿ ಮೇಳದಲ್ಲಿ 108 ವಿದೇಶಿ ಆಹಾರ ಬೆಳೆಗಳನ್ನು ಬೆಳೆಯ ಲಾಗಿದ್ದು, ನಾಲ್ಕು ಉದ್ಯಮಗಳನ್ನು ನಿರ್ಮಿ ಸಲಾಗಿದೆ. ಇದರಲ್ಲಿ ಪ್ರಮುಖ ವಿದೇಶಿ ಬೆಳೆಗಳಾದ ಟೆಪ್ ಆಫ್ರಿಕಾದ ಇತಿಯೋಪಿಯಾ ಬೆಳೆ, ಚಿಯಾ- ದಕ್ಷಿಣ ಅಮೇರಿಕಾದ ಬೆಳೆ, ಇದರ ಜೊತೆಗೆ ವಿದೇಶಿಯ ಬೆಳೆಗ ಳಾದ ಸಿರಿಧಾನ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಸಾಮೆ, ನವಣೆ, ರಾಗಿ, ಬರಗು ಅಲ್ಲದೆ ದ್ವಿದಳ ಧಾನ್ಯಗಳು, ವಾಣಿಜ್ಯ ಬೆಳೆಗಳನ್ನು ಬೆಳೆದಿರುವುದ ಲ್ಲದೇ ದೇಸೀಯ ತಳಿಗಳನ್ನೊಳಗೊಂಡ ಪಶುಗಳ ಪ್ರದರ್ಶನದ ನಾಲ್ಕನೇ ಭಾಗ ವಾಗಿ ಕೃಷಿ ಮೇಳದ ವಸ್ತುಪ್ರದರ್ಶದಲ್ಲಿ ಕಂಡು ಬರುತ್ತದೆ. ಕೃಷಿ ಸಂಶೋಧನೆ ಗಾಗಿ ಕೃಷಿ ಮಳಿಗೆಗಳಿದ್ದು, ರಸಗೊಬ್ಬರ ಗಳು, ಕೃಷಿ ಉತ್ಪನ್ನಗಳ ಬಗ್ಗೆ ರಾಜ್ಯದ ವಿವಿಧ ಜಿಲ್ಲೆ ಗಳಿಂದ ಬಂದು ರೈತರಿಗೆ ಮಾಹಿತಿ ನೀಡಲಾಗುತ್ತದೆ. ಕೃಷಿ ಮೇಳವು ಸಾವಿರಾರು ವಿದ್ಯಾಥಿರ್üಗಳಿಗೆ, ರೈತರಿಗೆ ಸಮಗ್ರ ಬೆಳೆಗಳನ್ನು ಬೆಳೆದು ಆರ್ಥಿಕ ವಾಗಿ ಸ್ವಾವಲಂಬಿಯಾಗಲು ಹೆಚ್ಚಿನ ರೀತಿಯಲ್ಲಿ ಉಪಯೋಗವಾಗುತ್ತದೆ ಮತ್ತು ಸುತ್ತೂರು ಜಾತ್ರೆಗಾಗಿ ನೂರು ದಿನಗಳಿಂದ ವಿಶೇಷವಾಗಿ ವಿವಿಧ ಬೆಳೆ ಗಳನ್ನು ಬೆಳೆಸಲು ಶ್ರಮ ವಹಿಸಲಾಗಿದೆ ಎಂದು ಕೃಷಿ ಮೇಳದ ಮುಖಸ್ಥರಾದ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಅರುಣ್ ಬಳಮಟ್ಟಿಯವರು ತಿಳಿಸಿದ್ದಾರೆ.