ಸಾಧನೆಗೈದ ರೈತರಿಗೆ ಪ್ರಶಸ್ತಿ ಪ್ರದಾನ
ಮೈಸೂರು

ಸಾಧನೆಗೈದ ರೈತರಿಗೆ ಪ್ರಶಸ್ತಿ ಪ್ರದಾನ

February 2, 2019

ಮೈಸೂರು: ಇಂದು ಆರಂಭವಾದ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ವಿವಿಧ ಬೆಳೆ ಪದ್ಧತಿಯಲ್ಲಿ ಅತ್ಯುತ್ತಮ ಸಾಧನೆಗೈದ ನಂಜನಗೂಡು ತಾಲೂಕು ಮತ್ತು ಚಾಮರಾಜ ನಗರ ಜಿಲ್ಲೆಯ 10 ಮಂದಿ ರೈತರಿಗೆ ಯಳಂದೂರು ತಾಲೂಕಿನ ಶ್ರೀಮತಿ ಸುಂದರಮ್ಮ ವೀರಭದ್ರಪ್ಪ ಪ್ರತಿಷ್ಠಾನ ಸ್ಥಾಪಿಸಿರುವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಸುತ್ತೂರು ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾ ರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ವಾಸು ಅವರು ರೈತರಿಗೆ ಪ್ರಶಸ್ತಿ ನೀಡಿ, ಹಸಿರು ಶಾಲು ಹೊದಿಸುವ ಮೂಲಕ ಅಭಿನಂದಿಸಿದರು. ಎಕರೆಗೆ 23 ರಿಂದ 27 ಕ್ವಿಂಟಾಲ್ ಭತ್ತ ಬೆಳೆದ ತುಮ್ಮನೇರಳೆ ಗ್ರಾಮದ ಟಿ.ಎನ್. ರಾಜೇಂದ್ರ ಕುಮಾರ್, ಬಸವನಪುರದ ಮಲ್ಲಾರಾಧ್ಯ, 23 ರಿಂದ 28 ಟನ್ ಬಾಳೆ ಬೆಳೆದ ಶಿವಳ್ಳಿ ಗ್ರಾಮದ ಕೆ. ಶಿವಶಂಕರ್, ಅಲಕೆರೆ ಅಗ್ರಹಾರದ ಮಹ ದೇವಯ್ಯ, 20 ರಿಂದ 23 ಟನ್ ಟೊಮ್ಯಾಟೋ ಬೆಳೆದಿರುವ ಕಲ್ಪುರ ಗ್ರಾಮದ ರವಿಕುಮಾರ್, ಬೇವಿನತಾಳಮರದ ಶಿವಣ್ಣ, 20 ರಿಂದ 26 ಕ್ವಿಂಟಾಲ್ ಮುಸುಕಿನ ಜೋಳ ಬೆಳೆದ ಕಣ್ಣೂರಿನ ಮಹೇಂದ್ರಸ್ವಾಮಿ, ನಾಗನತ್ತ ಗ್ರಾಮದ ಪ್ರಭುಸ್ವಾಮಿ, 8 ರಿಂದ 9 ಟನ್ ಪೋಲ್ ಬೀನ್ಸ್ ಬೆಳೆದಿರುವ ಬಲಚವಾಡಿಯ ಮಲ್ಲಿಕಾರ್ಜುನಪ್ಪ ಹಾಗೂ ಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಶ್ರೀ ಸುಂದರಮ್ಮ ವೀರಭದ್ರಪ್ಪ ಪ್ರತಿಷ್ಠಾನದಿಂದ ಈ 10 ಮಂದಿ ಯಶಸ್ವಿ ರೈತರನ್ನು ಸನ್ಮಾನಿಸಲಾಯಿತು.

Translate »