ಪೈಲ್ವಾನರ 2 ಗಂಟೆ ಸೆಣಸಾಟ ಡ್ರಾನಲ್ಲಿ ಅಂತ್ಯ
ಮೈಸೂರು

ಪೈಲ್ವಾನರ 2 ಗಂಟೆ ಸೆಣಸಾಟ ಡ್ರಾನಲ್ಲಿ ಅಂತ್ಯ

February 6, 2019

ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾ ವಳಿಯಲ್ಲಿ ‘ಸುತ್ತೂರು ಕೇಸರಿ’ ಪ್ರಶಸ್ತಿಗೆ ನಡೆದ ಕಾದಾಟದಲ್ಲಿ ಸತತ ಎರಡು ಗಂಟೆಗಳ ಕಾಲ ಹೋರಾಟ ನಡೆಸಿದರೂ ಪೈಲ್ವಾನ ರಿಬ್ಬರು ಗೆಲ್ಲಲೂ ಇಲ್ಲ, ಸೋಲಲೂ ಇಲ್ಲ. ಆಯೋಜಕರು ಕಡೆಗೆ ಡ್ರಾ ಘೋಷಣೆ ಮಾಡಿ ಪಂದ್ಯ ಕೊನೆಗೊಳಿಸಿದರು.

ಕೊಲ್ಲಾಪುರದ ಶಾಪುರಿ ತಾಲೀಂನ ಪೈ.ರಾಹುಲ್ ಸರಕ್ ಹಾಗೂ ಕಲಬುರ ಗಿಯ ಸೂರ್ಯವಂಶಿ ತಾಲೀಂನ ಪೈ. ಸಿದ್ದಪ್ಪ ನಡುವೆ ಎರಡು ಗಂಟೆ ಕಾದಾಟ ನಡೆದರೂ, ಇಬ್ಬರು ಪಟ್ಟಿನ ಮೇಲೆ ಪಟ್ಟು ಹಾಕಿ ಸೆಣಸಿದರೂ ಗೆಲುವು ಕಾಣದೇ ಅಭಿಮಾನಿಗಳನ್ನ ನಿರಾಶೆಗೊಳಿಸಿದರು. ಆಯೋಜಕರು ನಿಗದಿ ಮಾಡಿದ್ದಂತೆ ಪೈ.ರಾಹುಲ್ ಸರಕ್‍ಗೆ 20 ಸಾವಿರ ರೂ. ನಗದು ಬಹುಮಾನ ಹಾಗೂ ಪೈ.ಸಿದ್ದಪ್ಪ ಅವರಿಗೆ 18 ಸಾವಿರ ರೂ. ಬಹುಮಾನ ನೀಡಿ ಗೌರವಿಸಿದರು. ಸುತ್ತೂರು ಕೇಸರಿ ಪ್ರಶಸ್ತಿಯನ್ನು ಆಯೋಜಕರು ತಮ್ಮಲ್ಲೇ ಇಟ್ಟುಕೊಂಡರು.

‘ಸುತ್ತೂರು ಕುಮಾರ್’ ಪ್ರಶಸ್ತಿಗಾಗಿ ಮೈಸೂರಿನ ಪೈ.ಚಂದನ್ ಹಾಗೂ ಉದ್ಬೂರು ಪೈ.ಭರತ್ ನಡುವೆ ಮಾರ್ಫಿಟ್ ಕುಸ್ತಿ ನಡೆಯಿತು. ಚಂದನ್ ಮಣಿಸಿ ಭರತ್ ಗೆಲುವಿನ ನಗೆ ಬೀರಿದರು. ಬೆಂಗಳೂರಿನ ಕುಸ್ತಿಪಟು ಕಾಂತರಾಜು ಹಾಗೂ ಮೈಸೂರಿನ ಪೈ.ಪ್ರವೀಣ್ ಚಿಕ್ಕಳ್ಳಿ ನಡು ವಿನ ಮಂದ್ಯದಲ್ಲಿ ಪ್ರವೀಣ್ ಚಿಕ್ಕಳ್ಳಿ ಜಯ ಸಾಧಿಸಿದರು. 30 ನಿಮಿಷದ ಕುಸ್ತಿಯಲ್ಲಿ ರಮ್ಮನಹಳ್ಳಿ ಪೈ.ರವಿ ಹಾಗೂ ಪಾಲಹಳ್ಳಿ ಪೈ.ಗಿರೀಶ್ ಪಂದ್ಯ ಡ್ರಾ ಕಂಡಿತು. ಪಾಂಡವಪುರ ಪೈ.ಸುಜೇಂದ್ರ ಹಾಗೂ ರಮ್ಮನಹಳ್ಳಿ ಪೈ.ಪ್ರತಾಪ್ ನಡುವಿನ ಕುಸ್ತಿಯೂ ಕೂಡ ಡ್ರಾನಲ್ಲಿ ಅಂತ್ಯವಾಯಿತು.

ರಾಷ್ಟ್ರಮಟ್ಟದ ಕುಸ್ತಿಯಲ್ಲಿ ರಾಜ್ಯ ಸೇರಿ ದಂತೆ ನೆರೆಹೊರೆ ರಾಜ್ಯದಿಂದಲೂ ಕುಸ್ತಿಪಟು ಗಳು ಭಾಗವಹಿಸಿ ಸೆಣಸಾಡಿದರು. 50 ಜೊತೆ ನಾಡ ಕುಸ್ತಿಯಲ್ಲಿ ಪ್ರತಿ ಸ್ಪರ್ಧೆಗೆ ತಲಾ 5 ನಿಮಿಷ ಕಾಲಾ ವಕಾಶ ನೀಡ ಲಾಗಿತ್ತು. ಕುಸ್ತಿಯನ್ನು ವೀಕ್ಷಿಸಲು ಸಾವಿ ರಾರು ಜನರು ನೆರೆದು ಸತತ ಐದು ಗಂಟೆಗಳ ಕಾಲ ಪೈಲ್ವಾನರ ಕಸರತ್ತು, ಮೈಕಟ್ಟು, ವಿವಿಧ ಪಟ್ಟುಗಳನ್ನು ನೋಡಿ ಸಂತಸಪಟ್ಟರು.

ಚಾಲನೆ: ಕುಸ್ತಿ ಪಂದ್ಯಾವಳಿ ಚಾಲನೆ ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ದೇವನೂರು ಗುರು ಮಲ್ಲೇಶ್ವರ ದಾಸೋಹ ಮಹಾ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಕನಕ ಗುರು ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ, ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷ ಕೆ.ಜಿ.ಮಹೇಶ್ ಮತ್ತಿತರರು ಹಾಜರಿದ್ದರು.

Translate »