ಕಿಡ್ನಿ ಕದಿಯುವ ವೈದ್ಯರು, ಸಂಶೋಧನೆಯನ್ನೇ  ಮಾರಿಕೊಳ್ಳುವ ವಿಜ್ಞಾನಿಗಳು:ಸಚಿವ ನಾಡಗೌಡ
ಮೈಸೂರು

ಕಿಡ್ನಿ ಕದಿಯುವ ವೈದ್ಯರು, ಸಂಶೋಧನೆಯನ್ನೇ ಮಾರಿಕೊಳ್ಳುವ ವಿಜ್ಞಾನಿಗಳು:ಸಚಿವ ನಾಡಗೌಡ

February 6, 2019

ನಂಜನಗೂಡು:ನಾವಿಂದು ಕಿಡ್ನಿ ಕದಿಯುವ ವೈದ್ಯರು, ಸಂಶೋಧನೆಯನ್ನೇ ಮಾರಿಕೊಳ್ಳುವ ವಿಜ್ಞಾನಿಗಳನ್ನೇ ಕಾಣು ವಂತಾಗಲು ಸಂಸ್ಕಾರರಹಿತವಾದ ಸಮಾ ಜವೇ ಕಾರಣ ಎಂದು ರಾಜ್ಯದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ವಿಷಾ ದಿಸಿದರು. ಸುತ್ತೂರಿನ ಜಾತ್ರೋತ್ಸವದಲ್ಲಿ ಮಂಗಳವಾರ ಸಂಜೆ ನಡೆದ ಸಾಂಸ್ಕøತಿಕ ಮೇಳ ಹಾಗೂ ದನಗಳ ಜಾತ್ರೆಯ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವಿಂದು ಮಕ್ಕಳಿಗೆ ಶಿಕ್ಷಣ ಕಲಿಸುವುದು ಮುಖ್ಯವಲ್ಲ, ಸಂಸ್ಕಾರ ಕಲಿಸು ವುದು ಅತೀ ಮುಖ್ಯ ಎಂದು ಹೇಳಿದರು. ಸಂಸ್ಕಾರರಹಿತ ಯುವ ಜನಾಂಗ ರೂಪು ಗೊಳ್ಳುತ್ತಿರುವುದರಿಂದಾಗಿ ಎಲ್ಲೆಡೆ ಅಶಾಂತಿ, ಕ್ಷೋಭೆ ಕಾಣುವಂತಾಗಿದೆ ಎಂದರು.

ರಾಜ್ಯದ ಮಠಮಾನ್ಯಗಳು ಸಂಸ್ಕಾರ ಯುತವಾದ ಮಾನವೀಯ ಮೌಲ್ಯ ಗಳನ್ನು ಪ್ರತಿದಿನ ಲಕ್ಷಾಂತರ ವಿದ್ಯಾರ್ಥಿ ಗಳಿಗೆ ಬಿತ್ತರಿಸುತ್ತಿರುವುದರಿಂದ ರಾಜ್ಯ ಶಾಂತಿ ನೆಮ್ಮದಿಯಿಂದ ಇರುವಂತಾಗಿದೆ. ಸರ್ಕಾರವನ್ನೂ ಮೀರಿ ಸಮಾಜಮುಖಿ ಕೆಲಸ ಮಾಡುತ್ತಿರುವುದು ನಮ್ಮ ವೀರಶೈವ ಮಠಗಳು, ಜಾತಿಬೇಧವಿಲ್ಲದೆ ಎಲ್ಲರನ್ನೂ ಒಟ್ಟಿಗೂ ಕೊಂಡೊಯ್ದು ಸಮ-ಸಮಾಜ ನಿರ್ಮಾಣಕ್ಕೆ ದುಡಿಯುತ್ತಿರುವುದು ನಮ್ಮ ವೀರಶೈವ ಸಮಾಜದ ಹೆಗ್ಗಳಿಕೆಯಾಗಿದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಸೋಮಣ್ಣ ಮಾತನಾಡಿ, ಸುತ್ತೂರು ಶ್ರೀಕ್ಷೇತ್ರ ಹಾಗೂ ಇಲ್ಲಿನ ಜಾತ್ರೆ ಗಿನ್ನಿಸ್ ದಾಖಲೆಯತ್ತ ಸಾಗಿದೆ ಎಂದರು.

ರಾಜಕಾರಣ ಎಂದರೆ ಮುಳ್ಳಿನ ಹಾಸಿಗೆಯಿದ್ದಂತೆ, ಪಕ್ಷದ ಸಭೆಗಿಂತ ನನಗೆ ಇಲ್ಲಿನ ಜಾತ್ರೆ ಹಾಗೂ ಸುತ್ತೂರು ಮಠ ಮುಖ್ಯ ಅದಕ್ಕಾಗಿ ನಾನು ಇಲ್ಲಿಗೆ ಧಾವಿಸಿ ದ್ದೇನೆ ಎಂದರು. ಅಧಿಕಾರ ಶಾಶ್ವತವಲ್ಲ, ಅಧಿಕಾರವಿದ್ದಾಗ ನಾವು ಮಾಡಿದ ಕೆಲಸ ಅತೀ ಮುಖ್ಯ ಎಂದ ಸೋಮಣ್ಣ, ನಾಡ ಗೌಡರು ಇಂತಹ ಅತ್ಯುತ್ತಮ ಕೆಲಸ ಮಾಡಿ ದ್ದಾರೆ. ಪಶು ಸಂಗೋಪನೆ ಇಲಾಖೆಯಲ್ಲಿ ಆದಾಯವಿಲ್ಲವೆಂದು ಬೇರೆ ಇಲಾಖೆಗೆ ಎರವಲು ಹೋದ ಎಲ್ಲರನ್ನೂ ವಾಪಸು ಕರೆಸಿ ರೈತರಿಗೆ ಸಹಾಯ ಮಾಡಿ ಎಂದು ದುಡಿಸುತ್ತಿರುವುದು ನಾಡಗೌಡರ ಸಾಧನೆಯಾಗಿದೆ ಎಂದು ಪ್ರಶಂಸಿಸಿದರು. ಅಫ್ಜಲ್‍ಪುರದ ಶಾಸಕ ಎಂ.ವೈ.ಪಾಟೀಲ್ ಅವರು ಬಿಜೆಪಿ ತಪ್ಪಿನಿಂದಾಗಿ ಕಾಂಗ್ರೆಸ್ ಶಾಸಕರಾದರು, ಅಂದಿನ ನಮ್ಮ ತಪ್ಪು ಅಧಿಕಾರಕ್ಕೆ ಮುಳುವಾಯಿತು ಎಂದು ಸೋಮಣ್ಣ ಬೇಸರ ವ್ಯಕ್ತಪಡಿಸಿದರು.

ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ನಾವು ಕೃಷಿ ಹಾಗೂ ಪಶುಸಂಗೋಪನೆ ಯಿಂದ ದೂರವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದನ್ನು ಗಮನಿಸಿಯೇ ಸುತ್ತೂರು ಶ್ರೀಗಳು ಕೃಷಿ ಹಾಗೂ ಪಶು ಸಂಗೋಪನೆಗೆ ಒತ್ತು ನೀಡುತ್ತಿದ್ದಾರೆ ಎಂದರು.

ಶಾಸಕ ಅನ್ನದಾನಿ ಮಾತನಾಡಿ, ಮುಂದಿನ ಶಿವರಾತ್ರೀಶ್ವರ ಜಯಂತಿ ಮಳವಳ್ಳಿಯಲ್ಲಿ ಜರುಗಲಿದೆ ಎಂದು ಘೋಷಿಸಿದರು. ಇಳಕಲ್ ಮಠದ ಗುರುಮಹಾಂತಸ್ವಾಮಿಗಳು ಆಶೀರ್ವಚನ ನೀಡಿದ ವಿಧಾನಪರಿಷತ್ ಸದಸ್ಯ ದೇವೇಗೌಡ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಆನಂದ್ ಹಸೂರ್ ಮುಂತಾದವರು ಉಪಸ್ಥಿತರಿದ್ದರು, ಶ್ರೀ ಉಮಾಮಹೇಶ್ವರ್ ಸ್ವಾಗತಿಸಿದರೆ ದನಗಳ ಪರಿಷೆಯ ವರದಿಯನ್ನು ಬಿ.ಎಂ.ಸಿದ್ದಪ್ಪ ಹಾಗೂ ಸಾಂಸ್ಕøತಿಕ ಸ್ಪರ್ಧೆ ವರದಿಯನ್ನು ಸೋಮಸುಂದರಂ ಮಂಡಿಸಿದರು.

Translate »