Tag: Varuna channel

ತಾಯಿ, ಮಕ್ಕಳಿಬ್ಬರ ಮೃತದೇಹ ಪತ್ತೆ
ಮೈಸೂರು

ತಾಯಿ, ಮಕ್ಕಳಿಬ್ಬರ ಮೃತದೇಹ ಪತ್ತೆ

September 22, 2018

ಮೈಸೂರು: ಕೆಆರ್‌ಎಸ್‌ ಬಳಿ ವರುಣಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಮೃತದೇಹಗಳು ಇಂದು ಬೆಳಿಗ್ಗೆ ಬೆಳಗೊಳ ಸಮೀಪ ನಾಲೆಯಲ್ಲಿ ಪತ್ತೆಯಾಗಿವೆ. ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ, ಹಾಲಿನ ವ್ಯಾಪಾರಿ ಕುಮಾರ್ ಎಂಬುವರ ಪತ್ನಿ ಶ್ರೀಮತಿ ಕಮಲ(45), ಮಕ್ಕಳಾದ ವೈಷ್ಣವಿ (17) ಹಾಗೂ ವರ್ಷಾ(14) ಎಂಬುವರೇ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದವರು. ತಮ್ಮ ಮನೆ ಬಳಿ ಪ್ರತಿಷ್ಠಾಪಿಸಿದ್ದ ಗಣಪತಿ ಪೂಜೆಗೆಂದು ಹೋಗಿ ದ್ದಾಗ ವೈಷ್ಣವಿ ಮತ್ತು ವರ್ಷಾ ಅಲ್ಲಿದ್ದಕೆಲ ಯುವಕರೊಂದಿಗೆ ಸೆಲ್ಫಿ…

ವರುಣಾ ಉಪನಾಲೆಯಲ್ಲಿ ಅಪರಿಚಿತ ಶವ ಪತ್ತೆ
ಮೈಸೂರು

ವರುಣಾ ಉಪನಾಲೆಯಲ್ಲಿ ಅಪರಿಚಿತ ಶವ ಪತ್ತೆ

September 2, 2018

ಮೈಸೂರು: ಮೈಸೂರು ತಾಲೂಕು ವರುಣಾ ಪೊಲೀಸ್ ಠಾಣೆ ವ್ಯಾಪ್ತಿಯ ಕಡವೆಕಟ್ಟೆಹುಂಡಿ ಗ್ರಾಮದಲ್ಲಿ ಹಾದುಹೋಗುವ ವರುಣಾ ಉಪನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸುಮಾರು 50ರಿಂದ 60 ವರ್ಷದವನಾದ ಈತನ ಕೈ-ಕಾಲುಗಳ ಸ್ವಲ್ಪ ಭಾಗವನ್ನು ಜಲಚರಗಳು ತಿಂದು ಹಾಕಿದ್ದು, ಈತ ಎಲ್ಲೋ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದು, ಉಪನಾಲೆಯಲ್ಲಿ ನೀರು ನಿಲ್ಲಿಸುವಾಗ ಮೃತದೇಹ ಇಲ್ಲಿ ಸಿಕ್ಕಿ ಹಾಕಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಾರಸುದಾರರು ವರುಣಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2594411 ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್…

ವರುಣಾ ನಾಲೆಯಲ್ಲಿ ನೀರುಪಾಲಾದ ಬಾಲಕ ಮೃತದೇಹಕ್ಕಾಗಿ ಮುಂದುವರೆದ ಶೋಧ
ಮೈಸೂರು

ವರುಣಾ ನಾಲೆಯಲ್ಲಿ ನೀರುಪಾಲಾದ ಬಾಲಕ ಮೃತದೇಹಕ್ಕಾಗಿ ಮುಂದುವರೆದ ಶೋಧ

August 21, 2018

ಮೈಸೂರು: ಗೆಳೆಯರೊಂದಿಗೆ ಈಜಲು ಹೋಗಿ ಬಾಲಕನೋರ್ವ ಪಂಪ್‍ಹೌಸ್ ಸಮೀಪದ ವರುಣಾ ನಾಲೆಯಲ್ಲಿ ನೀರು ಪಾಲಾಗಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಮೇಟಗಳ್ಳಿ ನಿವಾಸಿ ಸುಧಾಕರ್ ಶೆಟ್ಟಿ ಅವರ ಮಗ ಗಗನ್(16) ವರುಣಾ ನಾಲೆಯಲ್ಲಿ ನೀರುಪಾಲಾದ ಬಾಲಕ. ಮೇಟಗಳ್ಳಿಯ ಕುವೆಂಪು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಗಗನ್ ಶನಿವಾರ ಶಾಲೆ ಬಿಟ್ಟ ನಂತರ ಮನೆಗೆ ಹಿಂದಿರುಗಿ ವಾಲಿಬಾಲ್ ಆಟ ಆಡುತ್ತೇನೆಂದು ಹೇಳಿ ಸಹೋದರ ಸುಜನ ಹಾಗೂ ಇತರ 5 ಮಂದಿ ಗೆಳೆಯರೊಂದಿಗೆ ಹೊರಗೆ ಹೋಗಿದ್ದ. ಸ್ಕೂಟರ್‍ಗಳಲ್ಲಿ ಕೆಆರ್‍ಎಸ್…

ವರುಣಾ ನಾಲೆಗೆ ನವೀಕರಣ ಭಾಗ್ಯ
ಮೈಸೂರು

ವರುಣಾ ನಾಲೆಗೆ ನವೀಕರಣ ಭಾಗ್ಯ

July 17, 2018

75 ಕೋಟಿ ವೆಚ್ಚದಲ್ಲಿ 3 ಪ್ಯಾಕೇಜ್‍ಗಳಲ್ಲಿ ಕಾಮಗಾರಿ ಮೈಸೂರು: ಮೈಸೂರಿನ ನಾಲ್ಕು ಹಾಗೂ ಮಂಡ್ಯದ ಒಂದು ತಾಲೂಕು ಸೇರಿ ಐದು ತಾಲೂಕುಗಳ ಕೃಷಿಭೂಮಿಗೆ ನೀರುಣಿಸುತ್ತಿರುವ ವರುಣಾ ನಾಲೆಯ ನವೀಕರಣ ಕಾಮಗಾರಿ ಆರಂಭಗೊಂಡಿದ್ದು, ಕೃಷಿ ಭೂಮಿಗೆ ಸಮರ್ಪಕ ನೀರು ದೊರೆಯುವ ವಿಶ್ವಾಸ ಮೂಡಿದೆ. ವರುಣಾ ನಾಲೆಯು 82 ಗ್ರಾಮಗಳ ಕೃಷಿ ಭೂಮಿಗೆ ಜೀವಸೆಲೆಯಾಗಿದೆ. ಇದರ ನಿರ್ಮಾಣಕ್ಕೆ 1979ರಲ್ಲಿ ಚಾಲನೆ ನೀಡಲಾಗಿತ್ತು. ನಿರ್ಮಾಣಗೊಂಡ ಬಳಿಕ ರೈತರ ನೀರಾವರಿ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿ ಹೊಸ ಭರವಸೆ ಮೂಡಿಸಿದ್ದ ವರುಣಾ ನಾಲೆ ಕಾಲ…

Translate »