ವರುಣಾ ಉಪನಾಲೆಯಲ್ಲಿ ಅಪರಿಚಿತ ಶವ ಪತ್ತೆ
ಮೈಸೂರು

ವರುಣಾ ಉಪನಾಲೆಯಲ್ಲಿ ಅಪರಿಚಿತ ಶವ ಪತ್ತೆ

September 2, 2018

ಮೈಸೂರು: ಮೈಸೂರು ತಾಲೂಕು ವರುಣಾ ಪೊಲೀಸ್ ಠಾಣೆ ವ್ಯಾಪ್ತಿಯ ಕಡವೆಕಟ್ಟೆಹುಂಡಿ ಗ್ರಾಮದಲ್ಲಿ ಹಾದುಹೋಗುವ ವರುಣಾ ಉಪನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸುಮಾರು 50ರಿಂದ 60 ವರ್ಷದವನಾದ ಈತನ ಕೈ-ಕಾಲುಗಳ ಸ್ವಲ್ಪ ಭಾಗವನ್ನು ಜಲಚರಗಳು ತಿಂದು ಹಾಕಿದ್ದು, ಈತ ಎಲ್ಲೋ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದು, ಉಪನಾಲೆಯಲ್ಲಿ ನೀರು ನಿಲ್ಲಿಸುವಾಗ ಮೃತದೇಹ ಇಲ್ಲಿ ಸಿಕ್ಕಿ ಹಾಕಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವಾರಸುದಾರರು ವರುಣಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2594411 ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2444800 ಅನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Translate »