ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣ: ಸೂಕ್ತ ತನಿಖೆಗೆ ಪೋಷಕರ ಆಗ್ರಹ
ಹಾಸನ

ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣ: ಸೂಕ್ತ ತನಿಖೆಗೆ ಪೋಷಕರ ಆಗ್ರಹ

September 2, 2018

ಹಾಸನ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಚಿಕ್ಕಹೊನ್ನೇನಹಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿರುವ ಪೋಷಕರು ಮೃತಳ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಎಂ.ಡಿ. ಶ್ವೇತಾ (38) ಮೃತಪಟ್ಟ ಮಹಿಳೆ. ಸದ್ಯ ದೂರಿನ ಮೇರೆಗೆ ಮೃತಳ ಪತಿ ರವಿಶಂಕರ್‍ರನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆ.24ರಂದು ಶ್ವೇತಾಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತಿ ರವಿಶಂಕರ್, ಆತ ಸಂಬಂಧ ಹೊಂದಿದ್ದ ಹೊಸಕೊಪ್ಪಲಿನ ಓರ್ವ ಮಹಿಳೆಯೊಂದಿಗೆ ಸೇರಿ ಶ್ವೇತಾಳನ್ನು ಕೊಲೆ ಮಾಡಿದ್ದಾರೆಂದು ಮೃತಳ ಪೆÇೀಷಕರು ಆರೋಪಿಸಿ, ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಕೊಂಡಿರುವ ಪೆÇಲೀಸರು ರವಿಶಂಕರ್‍ನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ರವಿಶಂಕರ್ ಸಂಬಂಧ ಹೊಂದಿದ್ದ ಮಹಿಳೆಯನ್ನೂ ವಶಕ್ಕೆ ಪಡೆದು ಸೂಕ್ತ ತನಿಖೆ ನಡೆಸುವಂತೆ ಮೃತಳ ಪೆÇೀಷಕರು ಒತ್ತಾಯಿಸಿದ್ದಾರೆ.

Translate »