ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ
ಹಾಸನ

ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ

September 2, 2018

ಹೊಳೆನರಸೀಪುರ:  ಇಲ್ಲಿನ ಹೇಮಾವತಿ ನದಿಗೆ ಹಾರಿ ವೃದ್ಧೆಯೋರ್ವೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಜಯಮ್ಮ (65) ಮೃತರು. ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಕರ್ತವ್ಯದಿಂದ ನಿವೃತ್ತಿಯಾದ ನಂತರ ಜೀವನ ನಿರ್ವಹಣೆಗೆ ಬೇರೆ ಕೆಲಸವಿಲ್ಲದೆ ಹಲವರಿಂದ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ಗಾರರ ಕಿರುಕುಳ ತಾಳಲಾರದೆ ಮನನೊಂದು ನದಿಗೆ ಹಾರಿ ಸಾವನ್ನಪ್ಪಿದ್ದಾರೆ ಎನ್ನ ಲಾಗಿದೆ. ಈ ಸಂಬಂಧ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »