ಮದುವೆ ಮಂಟಪದಲ್ಲಿ ನಗದು, ಚಿನ್ನಾಭರಣ ಕಳವು
ಹಾಸನ

ಮದುವೆ ಮಂಟಪದಲ್ಲಿ ನಗದು, ಚಿನ್ನಾಭರಣ ಕಳವು

September 2, 2018

ಹೊಳೆನರಸೀಪುರ: ಮದುವೆ ಮಂಟಪದಲ್ಲಿ ವರನ ಸಂಬಂಧಿಕರ ಕೊಠಡಿ ಯಲ್ಲಿರಿಸಿದ್ದ ನಗದು ಸೇರಿ ಚಿನ್ನಾಭರಣ ಕಳವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಚನ್ನಾಂಬಿಕಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪಟ್ಟಣದ ನಿವಾಸಿ ಮೋಹನ್ ಪುತ್ರಿ ಪೂಜಾ ವಿವಾಹವು ಕಾರ್ತಿಕ್ ಜೊತೆ ಏರ್ಪಡಿಸಲಾಗಿತ್ತು. ಆರತಕ್ಷತೆ ಮುಗಿದು ವಧು-ವರ ಸೇರಿದಂತೆ ಸಂಬಂಧಿಕರು ಊಟಕ್ಕೆ ತೆರಳಿದ್ದರು. ಈ ಸಮಾಯಕ್ಕಾಗಿ ಹೊಂಚು ಹಾಕಿದ್ದ ಖದೀಮರು ವರನ ಸಂಬಂಧಿಕರು ತಂಗಿದ್ದ ಕೊಠಡಿಯ ಬೀಗ ಮುರಿದು ಒಳನುಗ್ಗಿ ಕೈಗೆ ಸಿಕ್ಕ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ವರನ ಸಹೋದರಿ ಯಲಹಂಕ ನಿವಾಸಿ ಸುಧಾ, ಯಶವಂತ್ ದಂಪತಿ ಅವರ 4 ಸಾವಿರ ರೂ. ನಗದು, 51 ಗ್ರಾಂ. ಚಿನ್ನಾಭರಣ ಹಾಗೂ ಸಂಬಂಧಿ ಗೀತಾ ಅವರ ಲಕ್ಷ ರೂ. ನಗದು, 52 ಗ್ರಾಂ. ಚಿನ್ನಾಭರಣ ಕಳವಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ವಿವಾಹದ ಬಳಿಕ ವಧು ವರರು ಕಲ್ಯಾಣ ಮಂಟಪದ ಪಕ್ಕದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ವೇಳೆ ಕಳವಿಗೆ ಸಾಧ್ಯವಾಗದಿದ್ದರಿಂದ ವಧು-ವರರು, ಸಂಬಂಧಿಗಳು ಮಧ್ಯಾಹ್ನ ಊಟಕ್ಕೆ ತೆರೆಳಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

Translate »