ಚಾಮರಾಜನಗರ

ಸಿದ್ದರಾಮಯ್ಯ ದುರಹಂಕಾರಿ, ಸಂಸ್ಕೃತಿ  ಇಲ್ಲದ ಅನಾಗರಿಕ ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್ ಕಿಡಿ
ಚಾಮರಾಜನಗರ

ಸಿದ್ದರಾಮಯ್ಯ ದುರಹಂಕಾರಿ, ಸಂಸ್ಕೃತಿ ಇಲ್ಲದ ಅನಾಗರಿಕ ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್ ಕಿಡಿ

May 7, 2018

ಚಾಮರಾಜನಗರ: ಸಿದ್ದರಾಮಯ್ಯ ಓರ್ವ ದುರಹಂಕಾರಿ, ಸಂಸ್ಕೃತಿ  ಇಲ್ಲದ ಅನಾಗರಿಕ. ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜರಿದವರು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಗೆ ಬರುವ 15 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಿಂದ 11ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಗೆ(2013)ಯಲ್ಲಿ ಬಿಜೆಪಿ ಪಕ್ಷ 3 ಬಣಗಳಾಗಿ ಮಾರ್ಪಟ್ಟಿತ್ತು….

ಹಲವಾರು ಮಂದಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
ಚಾಮರಾಜನಗರ

ಹಲವಾರು ಮಂದಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

May 7, 2018

ಚಾಮರಾಜನಗರ: ತಾಲೂಕಿನ ಬ್ಯಾಡಮೂಡ್ಲು ಹಾಗೂ ದೊಳ್ಳೀಪುರ ಗೌತಮ್ ಕಾಲೋನಿಯಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಾರ್ಯಕಾರಿಣ ಸದಸ್ಯ ಮಂಗಲಶಿವಕುಮಾರ್, ಮುಖಂಡ ಹನುಮಂತಶೆಟ್ಟಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ತಾಲೂಕಿನ ದೊಡ್ಡಮೋಳೆಯಲ್ಲಿ ಕಾಂಗ್ರೆಸ್‍ನ ಅಂಕಶೆಟ್ಟಿ, ಮಾದಶೆಟ್ಟಿ, ಚಿಕ್ಕಅಂಕಶೆಟ್ಟಿ, ನಾರಾಯಣಸ್ವಾಮಿ, ನಟರಾಜು, ಶ್ರೀನಿವಾಸ, ಶಿವಕುಮಾರ್, ರಂಗಸ್ವಾಮಿ, ನಿಂಗಶೆಟ್ಟಿ, ಸಿದ್ದಪ್ಪ, ನಿಂಗಶೆಟ್ಟಿ ಬಂಗಾರು ಹಾಗೂ ದೊಳ್ಳೀಪುರ ಗೌತಮ್ ಕಾಲೋನಿಯಲ್ಲಿ ಕಾಂಗ್ರೆಸ್ ಶಿವಸ್ವಾಮಿ, ಶಂಕರ್, ಮಹೇಶ್, ಕೃಷ್ಣ, ಮಹೇಶ್, ಮಹದೇವಶೆಟ್ಟಿ, ನಂಜಶೆಟ್ಟಿ, ಬಸವಣ್ಣ, ಕುಮಾರ್, ಶಿವರುದ್ದ, ಆರ್.ಮಹೇಶ್, ಸುಬ್ಬಣ್ಣಪುಟ್ಟರಾಚಶೆಟ್ಟಿ ಸೇರಿದಂತೆ…

ಇಂದು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸ
ಚಾಮರಾಜನಗರ

ಇಂದು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸ

May 7, 2018

ಚಾಮರಾಜನಗರ:  ಮುಖ್ಯ ಮಂತ್ರಿ ಸಿದ್ದರಾಮಯ್ಯ ನಾಳೆ (ಮೇ 7) ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಹನೂರಿನ ಮಲೈ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿ ರುವ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಕೊಳ್ಳೇಗಾಲ ಪಟ್ಟಣದ ನ್ಯಾಷನಲ್ ಮಿಡಲ್ ಸ್ಕೂಲ್ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಚಾಮ ರಾಜನಗರ ಹಳೇ ಖಾಸಗಿ ಬಸ್ ನಿಲ್ದಾಣ ದಲ್ಲಿ, ಸಂಜೆ 5 ಗಂಟೆಗೆ ಗುಂಡ್ಲುಪೇಟೆ ಪಟ್ಟಣದ…

ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಬಿಜೆಪಿ ಸೋಲಿಸಿ
ಚಾಮರಾಜನಗರ

ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಬಿಜೆಪಿ ಸೋಲಿಸಿ

May 7, 2018

ಚಾಮರಾಜನಗರ:  ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಯುವ ಸಲುವಾಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು. ಈ ಮೂಲಕ ಸಂವಿಧಾನ ಉಳಿಸಿ, ದೇಶವನ್ನು ರಕ್ಷಿಸಬೇಕಾಗಿದೆ ಎಂದು ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಪಿ.ಸಂಘಸೇನಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಂವಿಧಾನವನ್ನು ಬದಲಾಯಿಸುವ ಹುನ್ನಾರ ನಡೆಸಿದೆ. ಹೀಗಾಗಿ ದಲಿತರು ಬಿಜೆಪಿಗೆ ಮತ ನೀಡಬಾರದು ಎಂದು ಮನವಿ ಮಾಡಿದರು. ಬಿಜೆಪಿ ಸಂವಿಧಾನವನ್ನು ಬದಲಾಯಿಸಿ ಮನು ಶಾಸ್ತ್ರವನ್ನು ಜಾರಿಗೆ ತರುವ ಪ್ರಯತ್ನದಲ್ಲಿ ಇದೆ. ಪ್ರಜಾಪ್ರಭುತ್ವವನ್ನು ನಾಶ ಮಾಡಿ…

ಮೊಪೆಡ್‍ಗೆ ಕಾರು ಡಿಕ್ಕಿ; ಓರ್ವ ಸಾವು
ಚಾಮರಾಜನಗರ

ಮೊಪೆಡ್‍ಗೆ ಕಾರು ಡಿಕ್ಕಿ; ಓರ್ವ ಸಾವು

May 7, 2018

ಚಾಮರಾಜನಗರ:  ದ್ವಿಚಕ್ರ ವಾಹನ ಕಾರು ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ತಾಲೂಕಿನ ಮರಿಯಾಲದ ಗೇಟ್ ಬಳಿ ಭಾನುವಾರ ನಡೆದಿದೆ. ತಾಲೂಕಿನ ಹೆಗ್ಗೊಠಾರ ಗ್ರಾಮದ ಸಿದ್ದರಾಮಪ್ಪ(52) ಬಿನ್ ಲೇ.ಕೋಣ ನೂರು ನಾಗಪ್ಪ ಮೃತಪಟ್ಟವರು. ತಮ್ಮ ಗ್ರಾಮದಿಂದ ಸೂಪರ್ ಎಕ್ಸೆಲ್ ವಾಹನ ದಲ್ಲಿ ಚಾ.ನಗರಕ್ಕೆ ಬರುತ್ತಿದ್ದರು. ಮರಿ ಯಾಲ ಗೇಟ್ ಬಳಿ ಮೈಸೂರಿನಿಂದ ಬರುತ್ತಿದ್ದ ಮಾರುತಿಕಾರು ಡಿಕ್ಕಿ ಹೊಡೆದು ತಲೆಗೆ ತೀವ್ರಪೆಟ್ಟಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್
ಚಾಮರಾಜನಗರ

‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್

May 6, 2018

ಚಾಮರಾಜನಗರ:  ಜಿಲ್ಲೆಯು ಕಾಂಗ್ರೆಸ್‍ನ ಭದ್ರಕೋಟೆ. ಇದು 2008 ಮತ್ತು 2013ರಲ್ಲಿ ವಿಧಾನಸಭಾ ಚುನಾವಣೆ ಹಾಗೂ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಈ `ಕೈ’ ಕೋಟೆಯ ಮೇಲೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಾದರೂ ‘ಕಮಲ’ ವನ್ನು ಅರಳಿಸಬೇಕು ಎಂದು ಬಿಜೆಪಿ ಅವಿರತ ಪ್ರಯತ್ನ ನಡೆಸಿದೆ. ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ `ಕೈ’ಯ ಕೋಟೆಯಾಗಿದೆ. 2008 ಮತ್ತು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ…

ಬೈಕ್‍ಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ: ಸವಾರ ಸಾವು
ಚಾಮರಾಜನಗರ

ಬೈಕ್‍ಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ: ಸವಾರ ಸಾವು

May 6, 2018

ಹನೂರು: ತಾಲ್ಲೂಕಿನ ವಡಕೆಹಳ್ಳ ಗ್ರಾಮದ ಸಮೀಪ ಕೆಎಸ್ಆರ್‌ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ವಡಕೆಹಳ್ಳ ಗ್ರಾಮದ ವಾಟರ್ ಮೆನ್ ಗೋವಿಂದ (45) ಮೃತಪಟ್ಟ ವ್ಯಕ್ತಿ. ಗೋವಿಂದ ಅವರು ಬೆಳ್ಳಿಗೆ ಮನೆಯಿಂದ ಗ್ರಾಮ ಬಸ್‍ನಿಲ್ದಾಣದ ಕಡೆಗೆ ತಮ್ಮ ಬೈಕ್‍ನಲ್ಲಿ ಬರುತ್ತಿದ್ದಾಗ ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟದ ಕಡೆಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಗೋವಿಂದ ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ….

ಬಿಜೆಪಿ ಬೆಂಬಲಿಸಲು ಬಿಎಸ್‍ವೈ ಅಭಿವೃದ್ಧಿ ಬಳಗ ಮನವಿ
ಚಾಮರಾಜನಗರ

ಬಿಜೆಪಿ ಬೆಂಬಲಿಸಲು ಬಿಎಸ್‍ವೈ ಅಭಿವೃದ್ಧಿ ಬಳಗ ಮನವಿ

May 6, 2018

ಚಾಮರಾಜನಗರ:  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮನವಿ ಮಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರೈತರಿಗೆ ಅನೇಕ ಉಪಯುಕ್ತವಾದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮಹಿಳೆಯರಿಗೆ, ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಎಲ್ಲಾ ವರ್ಗದ ಜನರಿಗೂ ಒಂದಲ್ಲ…

ಹೆಲ್ಮೇಟ್ ಬಳಸಲು ಸವಾರರಿಗೆ ಸಲಹೆ
ಚಾಮರಾಜನಗರ

ಹೆಲ್ಮೇಟ್ ಬಳಸಲು ಸವಾರರಿಗೆ ಸಲಹೆ

May 6, 2018

ಚಾಮರಾಜನಗರ:  ಪ್ರತಿ ಯೊಬ್ಬ ವಾಹನ ಸವಾರರು ಹೆಲ್ಮೇಟ್ ಅನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಪಿ.ಕೆ.ವೆಂಕಟೇಶ್ ಸಲಹೆ ನೀಡಿದರು. ನಗರದಲ್ಲಿ ಶನಿವಾರ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯ, ಜೆಎಸ್‍ಎಸ್ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಪಟ್ಟಣ ಸಂಚಾರಿ ಪೊಲೀಸ್ ಠಾಣೆಯಿಂದ ಹಮ್ಮಿ ಕೊಂಡಿದ್ದ 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮರಾಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ್ವಿಚಕ್ರ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕಡ್ಡಾಯ ವಾಗಿ ಚಾಲನಾ ಪರವಾನಗಿ ಪಡೆದು, ರಸ್ತೆಯ…

ಸಂತೇಮರಹಳ್ಳಿ: ಎ.ಆರ್.ಕೃಷ್ಣಮೂರ್ತಿ ಮತಯಾಚನೆ
ಚಾಮರಾಜನಗರ

ಸಂತೇಮರಹಳ್ಳಿ: ಎ.ಆರ್.ಕೃಷ್ಣಮೂರ್ತಿ ಮತಯಾಚನೆ

May 6, 2018

ಸಂತೇಮರಹಳ್ಳಿ:  ಕೊಳ್ಳೇಗಾಲ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರು ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡ ರೊಂದಿಗೆ ಸಂತೇಮರಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಬಿರು ಸಿನ ಮತ ಪ್ರಚಾರ ನಡೆಸಿದರು. ಸಂತೇಮರಹಳ್ಳಿಯ ಮಹದೇಶ್ವರ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಮತ ಯಾಚನೆ ಆರಂಭಿಸಿದರು. ಈ ವೇಳೆ ಕಾರ್ಯಕರ್ತರು ಎ.ಆರ್.ಕೃಷ್ಣಮೂರ್ತಿ ಅವರಿಗೆ ಹೂವಿನ ಹಾರವನ್ನು ಹಾಕಿ ಸ್ವಾಗತಿಸಿದರು. ತಮಟೆ ಹಾಗೂ ಪಟಾಕಿ ಸಿಡಿಸಿ ಘೋಷಣೆ ಕೂಗಿದರು. ಬಳಿಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಮೀಸಲು ಕ್ಷೇತ್ರ ಕಾಂಗ್ರೆಸ್‍ನ ಭದ್ರ ಕೋಟೆಯಾಗಿದ್ದು,…

1 133 134 135 136 137 141
Translate »