ಮೊಪೆಡ್‍ಗೆ ಕಾರು ಡಿಕ್ಕಿ; ಓರ್ವ ಸಾವು
ಚಾಮರಾಜನಗರ

ಮೊಪೆಡ್‍ಗೆ ಕಾರು ಡಿಕ್ಕಿ; ಓರ್ವ ಸಾವು

May 7, 2018

ಚಾಮರಾಜನಗರ:  ದ್ವಿಚಕ್ರ ವಾಹನ ಕಾರು ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ತಾಲೂಕಿನ ಮರಿಯಾಲದ ಗೇಟ್ ಬಳಿ ಭಾನುವಾರ ನಡೆದಿದೆ.

ತಾಲೂಕಿನ ಹೆಗ್ಗೊಠಾರ ಗ್ರಾಮದ ಸಿದ್ದರಾಮಪ್ಪ(52) ಬಿನ್ ಲೇ.ಕೋಣ ನೂರು ನಾಗಪ್ಪ ಮೃತಪಟ್ಟವರು. ತಮ್ಮ ಗ್ರಾಮದಿಂದ ಸೂಪರ್ ಎಕ್ಸೆಲ್ ವಾಹನ ದಲ್ಲಿ ಚಾ.ನಗರಕ್ಕೆ ಬರುತ್ತಿದ್ದರು. ಮರಿ ಯಾಲ ಗೇಟ್ ಬಳಿ ಮೈಸೂರಿನಿಂದ ಬರುತ್ತಿದ್ದ ಮಾರುತಿಕಾರು ಡಿಕ್ಕಿ ಹೊಡೆದು ತಲೆಗೆ ತೀವ್ರಪೆಟ್ಟಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »