ಚಾಮರಾಜನಗರ: ತಾಲೂಕಿನ ಬ್ಯಾಡಮೂಡ್ಲು ಹಾಗೂ ದೊಳ್ಳೀಪುರ ಗೌತಮ್ ಕಾಲೋನಿಯಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಾರ್ಯಕಾರಿಣ ಸದಸ್ಯ ಮಂಗಲಶಿವಕುಮಾರ್, ಮುಖಂಡ ಹನುಮಂತಶೆಟ್ಟಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ತಾಲೂಕಿನ ದೊಡ್ಡಮೋಳೆಯಲ್ಲಿ ಕಾಂಗ್ರೆಸ್‍ನ ಅಂಕಶೆಟ್ಟಿ, ಮಾದಶೆಟ್ಟಿ, ಚಿಕ್ಕಅಂಕಶೆಟ್ಟಿ, ನಾರಾಯಣಸ್ವಾಮಿ, ನಟರಾಜು, ಶ್ರೀನಿವಾಸ, ಶಿವಕುಮಾರ್, ರಂಗಸ್ವಾಮಿ, ನಿಂಗಶೆಟ್ಟಿ, ಸಿದ್ದಪ್ಪ, ನಿಂಗಶೆಟ್ಟಿ ಬಂಗಾರು ಹಾಗೂ ದೊಳ್ಳೀಪುರ ಗೌತಮ್ ಕಾಲೋನಿಯಲ್ಲಿ ಕಾಂಗ್ರೆಸ್ ಶಿವಸ್ವಾಮಿ, ಶಂಕರ್, ಮಹೇಶ್, ಕೃಷ್ಣ, ಮಹೇಶ್, ಮಹದೇವಶೆಟ್ಟಿ, ನಂಜಶೆಟ್ಟಿ, ಬಸವಣ್ಣ, ಕುಮಾರ್, ಶಿವರುದ್ದ, ಆರ್.ಮಹೇಶ್, ಸುಬ್ಬಣ್ಣಪುಟ್ಟರಾಚಶೆಟ್ಟಿ ಸೇರಿದಂತೆ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.
ಜಿಲ್ಲಾ ಬಿಜೆಪಿ ಜಿಲ್ಲಾ ಕಾರ್ಯಕಾರಿಣ ಸದಸ್ಯ ಮಂಗಲಶಿವಕುಮಾರ್ ಪಕ್ಷಕ್ಕೆ ನೂತನವಾಗಿ ಸೇರ್ಪಡೆಯಾದ ಕಾರ್ಯಕರ್ತರಿಗೆ ಪಕ್ಷದ ಶಲ್ಯ ಹಾಕಿ ಬರಮಾಡಿಕೊಂಡು ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರ ಜನಪರ ಕಾರ್ಯಕ್ರಮಗಳು ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಜಾರಿಯಾಗಿದ್ದ ಜನಪರ ಕಾರ್ಯಕ್ರಮಗಳನ್ನು ಒಪ್ಪಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಸಂತಸವಾಗಿದೆ ಎಂದರು.
ನರೇಂದ್ರಮೋದಿಯವರ ಅಲೆ ದೇಶವಲ್ಲದೆ ಅಂತರಾಷ್ಟ್ರೀಯ ಮಟ್ಟವನ್ನು ತಲುಪಿದ್ದು, ವಿಶ್ವನಾಯಕರಾಗಿ ಬೆಳೆದಿದ್ದಾರೆ. ಅಂತಹ ಪಕ್ಷದಲ್ಲಿ ಕೆಲಸ ಮಾಡುವುದು ನಮ್ಮೆಲ್ಲರಿಗೂ ಹೆಮ್ಮೆ ವಿಷಯ. ಹೊಸದಾಗಿ ಪಕ್ಷ ಸೇರ್ಪಡೆಯಾಗಿರುವ ಕಾರ್ಯಕರ್ತರು ಮೇ 12 ರಂದು ಕಮಲದ ಗುರುತಿಗೆ ಮತ ಹಾಕಿಸಿ ಪಕ್ಷದ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಬಿಜೆಪಿ ಬೆಂಬಲಿಸಿ : ಬಿಜೆಪಿ ಮುಖಂಡ ಹನುಮಂತಶೆಟ್ಟಿ ಮಾತನಾಡಿ, ಹರದನಹಳ್ಳಿ ಜಿ.ಪಂ. ಕ್ಷೇತ್ರದಲ್ಲಿ ಉಪ್ಪಾರರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿರುವುದು ಬಹಳ ಸಂತಸ ತಂದಿದೆ. ಹೊಸದಾಗಿ ಬಿಜೆಪಿ ಸೇರ್ಪಡೆಯಾಗಿರುವ ಉಪ್ಪಾರ ಸಮುದಾಯದ ಯುವಕರು ಒಮ್ಮತದಿಂದ ಬಿಜೆಪಿ ಬೆಂಬಲಿಸಿ ಕಮಲದ ಗುರುತಿಗೆ ಮತ ನೀಡುವ ಮೂಲಕ ಪಕ್ಷದ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಡಬೇಕು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ವಕ್ತಾರ ನಿಜಗುಣರಾಜ್, ಮಂಡಲ ಅಧ್ಯಕ್ಷ ಬಸವಣ್ಣ, ತಾ.ಪಂ.ಸದಸ್ಯ ಮಹದೇವಶೆಟ್ಟಿ, ಪುಟ್ಟರಾಜು, ಗ್ರಾ.ಪಂ.ಸದಸ್ಯ ಕುಮಾರ್ ಇತರರು ಹಾಜರಿದ್ದರು.