ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್: ರೋಗಿಗಳ ಪರದಾಟ ಹಾಸನ: ಪಶ್ಚಿಮ ಬಂಗಾಳದ ಎನ್‍ಆರ್‍ಎಸ್ ಆಸ್ಪತ್ರೆಯಲ್ಲಿ ವೈದ್ಯನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಅಖಿಲ ಭಾರತ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿರುವ ವೈದ್ಯಕೀಯ ಸೇವೆ ಬಂದ್‍ಗೆ ಹಾಸನ ಜಿಲ್ಲಾ ಐಎಂಎ ಘಟಕ ಬೆಂಬಲ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಸೋಮವಾರ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಸ್ಥಗಿತಗೊಂಡು, ಚಿಕಿತ್ಸೆಗಾಗಿ ರೋಗಿಗಳು ಅಲೆದಾಟ ನಡೆಸಿದರು. ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ತುರ್ತು…
ಠೇವಣಿ ಹಣ ಮರು ಪಾವತಿಗೆ ಆಗ್ರಹಿಸಿ ಪ್ರತಿಭಟನೆ
June 18, 2019ಬೇಲೂರು: ಕಳೆದ 5 ತಿಂಗಳ ಹಿಂದೆ ಪುರಸಭೆಯಿಂದ ಹರಾಜು ಮಾಡಿದ್ದ ಮೀನು ಮಾರಾಟ ಮಳಿಗೆಗಳ ಬಿಡ್ ದಾರರಿಗೆ ಠೇವಣಿ ಹಣ ವಾಪಸ್ ನೀಡದೆ ವಂಚಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಪುರಸಭೆ ಮುಂಭಾಗ ಸೋಮವಾರ ಮೀನು ಮಳಿಗೆಗಳ ಬಿಡ್ ದಾರರು ಪ್ರತಿಭಟನೆ ನಡೆಸಿದರು. ಪುರಸಭೆ ಮಾಜಿ ಸದಸ್ಯ ಎಸ್.ರವಿ ಮಾತನಾಡಿ, ಪುರಸಭೆಯಿಂದ ಪಟ್ಟಣದ ಮಸೀದಿ ಬೀದಿಯ ಬಳಿ ಮೀನು ಮಾರಾಟ ಕ್ಕೆಂದು ನಿರ್ಮಿಸಿದ 6 ಮಳಿಗೆಗಳನ್ನು ನಿಯಮಾನುಸಾರ ವಿವಿಧ ರೀತಿಯಲ್ಲಿ ಬಾಡಿಗೆಗೆ ಹರಾಜು ಕೂಗಿ ಪಡೆದು ಕೊಂಡೆವು….
ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಪುರಪ್ರವೇಶ
June 18, 2019ಶ್ರವಣಬೆಳಗೊಳ: ಮಂಡ್ಯ ಜಿಲ್ಲೆಯ ಆರತಿಪುರದಲ್ಲಿ ನೂರಾರು ಜಿನ ಮೂರ್ತಿಗಳು ದೊರಕಿದ್ದು, ಪ್ರಾಚೀನ ಇತಿ ಹಾಸವನ್ನು ಬೆಳಕಿಗೆ ತರಲು ಮ್ಯೂಸಿಯಂ ತೆರೆಯಲು ಕೇಂದ್ರ ಪುರಾತತ್ವ ಇಲಾಖೆ ಮುಂದಾಗಿದೆ. ಇದಕ್ಕೆ ನೂತನ ಶ್ರೀಗಳು ಸಹಕಾರ ನೀಡಿ ಕಾರ್ಯರೂಪಕ್ಕೆ ತರಬೇಕು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಹೇಳಿದರು. ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಆಯೋಜಿಸಿದ್ದ, ಮಂಡ್ಯ ಜಿಲ್ಲೆಯ ಆರತಿಪುರ ಕ್ಷೇತ್ರದ ಜೈನ ಮಠದ ನೂತನ ಪಟ್ಟಾಚಾರ್ಯರಾಗಿ ಪಟ್ಟಾಭಿಷಕ್ತ ರಾದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಪುರ ಪ್ರವೇಶ ಮತ್ತು ಅಭಿನಂದನಾ ಸಮಾರಂಭದಲ್ಲಿ…
ಅರಸೀಕೆರೆ ತಾಪಂ ಕೆಡಿಪಿ ತ್ರೈಮಾಸಿಕ ಸಭೆ: ಬರಗಾಲ ನಿರ್ವಹಣೆಗೆ ಸೂಕ್ತ ಕ್ರಮವಹಿಸಿ: ಶಾಸಕ ತಾಕೀತು
June 18, 2019* 112 ಗ್ರಾಮಗಳಲ್ಲಿ ನೀರಿನ ಸಮಸ್ಯೆ * 33 ಗ್ರಾಮಗಳಿಗೆ 92 ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆ * ಜಾನುವಾರುಗಳ ಮೇವು ವಿತರಣೆ ಹೆಚ್ಚಿಸಲು ಒತ್ತಾಯ ಅರಸೀಕೆರೆ: ಕ್ಷೇತ್ರದಲ್ಲಿ ಬರಗಾಲ ತಾಂಡವಾಡುತ್ತಿದ್ದು, ಕುಡಿಯುವ ನೀರು ಮತ್ತು ಅಂತರ್ಜಲ ಸಮಸ್ಯೆಯನ್ನು ಸಮರ್ಥವಾಗಿ ಎದುರಿ ಸುವ ಜೊತೆಗೆ ಬರಗಾಲ ನಿರ್ವಹಣೆಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವ ಲಿಂಗೇಗೌಡ ತಾಕೀತು ಮಾಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ…
ನಗರಸಭೆ ಕಾರ್ಯಾಚರಣೆ: ರಸ್ತೆ ಬದಿ ಗುಜರಿ ವಸ್ತುಗಳ ತೆರವು
June 18, 2019ಹಾಸನ: ರಸ್ತೆ ಬದಿ ಉದ್ದಲಕ್ಕೂ ಇಡಲಾಗಿದ್ದ ಗುಜರಿ ವಸ್ತುಗಳನ್ನು ನಗರಸಭೆ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು. ನಗರದ ಹೊಸಲೈನ್ ರಸ್ತೆ, ಚನ್ನವೀರಪ್ಪ ಕಲ್ಯಾಣ ಮಂಟಪದ ಎದುರು ಹಲವು ವರ್ಷಗಳಿಂದ ಗುಜರಿ ವ್ಯಾಪಾರ ನಡೆಸುತ್ತಿದ್ದು, ಅಂಗಡಿಯವರು ಕಬ್ಬಿಣದ ವಸ್ತುಗಳ ನ್ನೆಲ್ಲಾ ರಸ್ತೆ ಬದಿ ಇಡಲಾಗುತ್ತಿದ್ದರಿಂದ ಪ್ರತಿನಿತ್ಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಹಲವು ಬಾರಿ ನಗರಸಭೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತರು ಗುಜರಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದರು. ಆದರೂ, ಇದಕ್ಕೆ ಮಾಲೀಕರು ಸ್ಪಂದಿಸದ…
ವೃದ್ಧಾಶ್ರಮಕ್ಕೆ ಬಂದ ಶಾಲಾ ಮಕ್ಕಳ ಕಂಡು ಹಿರಿಯರ ಕಣ್ಣಲ್ಲಿ ಮಿಂಚು!
June 17, 2019ಹಾಸನ, ಜೂ.16- ಸದಾ ಶಾಲೆ, ಮನೆ, ಮನೆ ಪಾಠ ಇಲ್ಲವೇ ಮೈದಾನದಲ್ಲೇ ಇರುತ್ತಿದ್ದ ಶಾಲೆಯ ಮಕ್ಕಳು ಭಾನುವಾರ ಹೊಸದೊಂದು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿದರು. ಮನೆಯಲ್ಲಿ ಒಬ್ಬರೋ, ಇಬ್ಬರೋ ಅಜ್ಜ- ಅಜ್ಜಿಯಂದಿರನ್ನು ಕಂಡಿದ್ದ ಮಕ್ಕಳಿಗೂ ಅಲ್ಲಿದ್ದ ಹಿರಿಯ ಜೀವಿಗಳ ಗುಂಪು ಕಂಡು ಅಚ್ಚರಿಯಾಯಿತು! ಹಾಸನದ ವಿದ್ಯಾನಗರದಲ್ಲಿರುವ ಕ್ರೈಸ್ಟ್ ಶಾಲೆಯ ವಿದ್ಯಾರ್ಥಿಗಳನ್ನು ಗವೇನಹಳ್ಳಿ ಯಲ್ಲಿರುವ ಕಾಮಧೇನು ವೃದ್ಧಾಶ್ರಮಕ್ಕೆ ಭಾನುವಾರ ಕರೆದೊಯ್ಯಲಾಗಿತ್ತು. ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಸೇವಾ ಮನೋ ಭಾವ ಬೆಳೆಸಬೇಕೆಂಬುದೇ ಈ ಭೇಟಿ ಆಯೋಜನೆಯ ಉದ್ದೇಶವಾಗಿತ್ತು….
ವಿಶ್ವ ರಕ್ತದಾನಿಗಳ ದಿನ 111 ಜನರಿಂದ ರಕ್ತದಾನ
June 17, 2019ಸಕಾಲಕ್ಕೆ ರಕ್ತ ದೊರೆಯದೇ ಹಲವರ ಸಾವು: ಡಿಸಿ ಅಕ್ರಂ ಪಾಷ ವಿಷಾದ ಹಾಸನ: ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ, ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಜತೆಗೂಡಿ ನಗರದಲ್ಲಿನ ಕಸಾಪ ಜಿಲ್ಲಾ ಭವನದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ `ವಿಶ್ವ ರಕ್ತದಾನಿಗಳ ದಿನ’ ಆಚರಣೆ, ಬೃಹತ್ ರಕ್ತದಾನ ಶಿಬಿರದಲ್ಲಿ 111 ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷ, ಅಪಘಾತವಾದಾಗ ಮೊದಲು ಬೇಕಾಗುವುದೇ…
ಧಾರ್ಮಿಕ, ಸಮಾಜಮುಖಿ ಕೆಲಸದಿಂದ ಬದುಕು ಶ್ರೇಷ್ಠ
June 17, 2019ಶ್ರೀ ಜವರನಹಳ್ಳಿ ವಿರಕ್ತ ಮಠದ ಕಾರ್ಯಕ್ರಮದಲ್ಲಿ ಪ್ರಭು ಸ್ವಾಮೀಜಿ ಉಪನ್ಯಾಸ ಹಾಸನ: ಬದುಕು ಶ್ರೇಷ್ಠಮಟ್ಟ ಕ್ಕೇರಲು ಧಾರ್ಮಿಕವಾಗಿ ಮತ್ತು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದು ಬಳ್ಳಾರಿಯ ಕಂಪ್ಲಿ ಮಠದ ಶ್ರೀ ಪ್ರಭು ಸ್ವಾಮೀಜಿ ಸಲಹೆ ನೀಡಿದರು. ನಗರದ ಶ್ರೀ ಜವೇನಹಳ್ಳಿ ಮಠದಲ್ಲಿ ಧ್ಯಾನ ಧಾಮ ಶ್ರೀ ಜವರನಹಳ್ಳಿ ವಿರಕ್ತ ಮಠದ ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿ 33ನೇ ಪುಣ್ಯಾರಾಧನೆಯಲ್ಲಿ ಮಾತನಾ ಡಿದ ಅವರು, ಶರಣರ ತತ್ವ ಸಿದ್ಧಾಂತ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಜೀವನ ಇರುವುದೇ ಅಲ್ಪದಿನ. ಆ…
ಮಕ್ಕಳಿಗೆ ಕೆಲಸವಲ್ಲ, ಶಿಕ್ಷಣ ಕೊಡಿಸಿ: ಬಾಲಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಜಿಪಂ ಸಿಇಓ ಶ್ವೇತಾ
June 17, 2019ಹಾಸನ, ಜೂ.16- ಮಕ್ಕಳ ಬಾಲ್ಯ ಅಮೂಲ್ಯವಾದುದು. ಮಕ್ಕಳನ್ನು ಯಾವ ಕಾರಣಕ್ಕೂ ಕೆಲಸಕ್ಕೆ ತಳ್ಳದೇ ಕಡ್ಡಾಯ ವಾಗಿ ಶಿಕ್ಷಣ ಕೊಡಿಸಬೇಕು ಎಂದು ಜಿಪಂ ಅಧ್ಯಕ್ಷೆ ಶ್ವೇತಾ ಕರೆ ನೀಡಿದರು. ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಡಳಿತ, ಜಿಪಂ, ಬಾಲಕಾರ್ಮಿಕ ತಡೆ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯ ದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಳಿಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪಣ ತೊಡುವ ಪ್ರಮಾಣವಚನ…
ಕಡ್ಡಾಯ ಶಿಕ್ಷಣದಿಂದ ಬಾಲ ಕಾರ್ಮಿಕ ಪದ್ಧತಿ ಅಂತ್ಯ
June 17, 2019ಅರಸೀಕೆರೆ: ಶಿಕ್ಷಣ ಎಂಬುದು ಜೀವನದಲ್ಲಿ ಸಿಗುವ ದೊಡ್ಡ ಕೊಡುಗೆ. ಶಿಕ್ಷಣ ಪಡೆದು ಮಕ್ಕಳು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಕಡ್ಡಾಯ ಶಿಕ್ಷಣ ದಿಂದ ಬಾಲಕಾರ್ಮಿಕ ಪದ್ಧತಿ ತೊಲಗು ತ್ತದೆ ಎಂದು ಜೆಎಂಎಫ್‍ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲಾ ಹೇಳಿದರು. ನಗರದ ಸೇಂಟ್ ಮೇರೀಸ್ ಪ್ರೌಢಶಾಲೆ ಯಲ್ಲಿ ಬಾಲಕಾರ್ಮಿಕರ ವಿರೋಧಿ ದಿನಾ ಚರಣೆಯ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಅವರು, ಮಕ್ಕಳು ವಿದ್ಯೆ ಯಿಂದ ವಂಚಿತರಾಗಿ ಬಾಲಕಾರ್ಮಿಕ ರಾಗಿ ದುಡಿಯಲು ಪೆÇೀಷಕರ ಅನಕ್ಷರತೆ ಮತ್ತು ಕುಟುಂಬದ ಆರ್ಥಿಕ ದುಃಸ್ಥಿತಿ…