ಅರಸೀಕೆರೆ ತಾಪಂ ಕೆಡಿಪಿ ತ್ರೈಮಾಸಿಕ ಸಭೆ: ಬರಗಾಲ ನಿರ್ವಹಣೆಗೆ ಸೂಕ್ತ ಕ್ರಮವಹಿಸಿ: ಶಾಸಕ ತಾಕೀತು
ಹಾಸನ

ಅರಸೀಕೆರೆ ತಾಪಂ ಕೆಡಿಪಿ ತ್ರೈಮಾಸಿಕ ಸಭೆ: ಬರಗಾಲ ನಿರ್ವಹಣೆಗೆ ಸೂಕ್ತ ಕ್ರಮವಹಿಸಿ: ಶಾಸಕ ತಾಕೀತು

June 18, 2019

* 112 ಗ್ರಾಮಗಳಲ್ಲಿ ನೀರಿನ ಸಮಸ್ಯೆ

* 33 ಗ್ರಾಮಗಳಿಗೆ 92 ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆ

* ಜಾನುವಾರುಗಳ ಮೇವು ವಿತರಣೆ ಹೆಚ್ಚಿಸಲು ಒತ್ತಾಯ

ಅರಸೀಕೆರೆ: ಕ್ಷೇತ್ರದಲ್ಲಿ ಬರಗಾಲ ತಾಂಡವಾಡುತ್ತಿದ್ದು, ಕುಡಿಯುವ ನೀರು ಮತ್ತು ಅಂತರ್ಜಲ ಸಮಸ್ಯೆಯನ್ನು ಸಮರ್ಥವಾಗಿ ಎದುರಿ ಸುವ ಜೊತೆಗೆ ಬರಗಾಲ ನಿರ್ವಹಣೆಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವ ಲಿಂಗೇಗೌಡ ತಾಕೀತು ಮಾಡಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಯ ಕೊರತೆಯಿಂದಾಗಿ ತಾಲೂಕು ಬರಗಾಲಕ್ಕೆ ಸಿಲುಕಿದೆ. ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿಹೋಗಿ ದಶಕಗಳೇ ಕಳೆಯುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ಮಾತ್ರ ಜನ-ಜಾನುವಾರು ಗಳಿಗೆ ತೊಂದರೆಯಾಗದ ರೀತಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

ಸಭೆಯಲ್ಲಿ ಇಲಾಖಾವಾರು ಸಾಧಿಸಿ ರುವ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು, ಜನ-ಜಾನುವಾರುಗಳಿಗೆ ಕಾಡು ತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಇಲಾಖೆ ತೆಗೆದುಕೊಂಡಿರುವ ಕ್ರಮಗಳನ್ನು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡು ವಂತೆ ಗ್ರಾಮೀಣ ಕುಡಿಯುವ ನೀರು ಸರಬ ರಾಜು ಮತ್ತು ನೈರ್ಮಲ್ಯ ಅಭಿವೃದ್ಧಿ ಇಲಾಖೆಯ ಕಿರಿಯ ಅಭಿಯಂತರ ಶಿವಾ ನಂದ್ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಶಿವಾ ನಂದ್, ತಾಲೂಕಿನ 112 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು 33 ಗ್ರಾಮ ಗಳಿಗೆ 92 ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದ ಗ್ರಾಮ ಗಳ ಜನತೆಗೆ ಖಾಸಗಿಯವರಿಂದ ನೀರನ್ನು ಖರೀದಿಸಿ ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಶಾಸಕ ಶಿವಲಿಂಗೇಗೌಡ ಮಾತ ನಾಡಿ, ಕಳೆದ ಸಾಲಿನಲ್ಲಿ ನೀರು ಪೂರೈಕೆ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಳು ಬಿಲ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು 87 ಲಕ್ಷ ಅನುದಾನವನ್ನು ತಡೆ ಹಿಡಿದು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಐವರನ್ನು ಒಳಗೊಂಡ ಉಪ ಸಮಿತಿ ರಚಿಸಿದ್ದರು. ಆ ಸಮಿತಿಗೆ ನೀವು ನೀಡಿದ ವರದಿಯನ್ನು ಸಭೆಗೆ ತಿಳಿಸಿ ಎಂದು ಸಭೆ ಯಲ್ಲಿ ಹಾಜರಿದ್ದ ಗ್ರೇಡ್-2 ತಹಸೀ ಲ್ದಾರ್ ಫಾಲಾಕ್ಷ ಅವರಿಗೆ ಸೂಚಿಸಿದರು.

ತಹಸೀಲ್ದಾರ್ ಫಾಲಾಕ್ಷ ಮಾತನಾಡಿ, ಸಮಿತಿ ಪರಿಶೀಲನೆ ನಡೆಸಿ ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ಲೋಪವಾಗಿಲ್ಲ ಎಂದು ವರದಿ ನೀಡಿ ರುವ ಹಿನ್ನಲೆಯಲ್ಲಿ 11 ಲಕ್ಷ ಅನುದಾನ ವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಉಳಿದ ಅನುದಾನ ಶೀಘ್ರದಲ್ಲೇ ಬಿಡುಗಡೆ ಯಾಗಲಿದೆ ಎಂದು ತಿಳಿಸಿದರು.

ಮೇವು ವಿತರಣೆ ಹೆಚ್ಚಿಸಿ: ಮೇವು ಬ್ಯಾಂಕ್ ಗಳನ್ನು ತೆರೆದು ಜಾನುವಾರುಗಳಿಗೆ ದಿನಕ್ಕೆ 50ಕೆಜಿ ಮೇವನ್ನು ಪೂರೈಸುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ. ಆದರೂ, 50 ಕೆಜಿ ಮೇವನ್ನು ಪಡೆಯಲು ರೈತ ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾ ಗಿದೆ. ಇದರಿಂದ ರೈತನ ಒಂದು ದಿನ ಪೂರ್ಣ ವ್ಯರ್ಥವಾಗುತ್ತಿದ್ದು, ದಿನಕ್ಕೆ 50 ಕೆ.ಜಿ ನೀಡುವ ಮೇವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ್ಳುವಂತೆ ಜಿ.ಪಂ ಸದÀಸ್ಯ ಮಾಡಾಳು ಸ್ವಾಮಿ ತಿಳಿಸಿದರು.

ಇದಕ್ಕೆ ಶಾಸಕರು ಸಹಮತ ವ್ಯಕ್ತಪಡಿ ಸುವ ಮೂಲಕ ಪರಿಶೀಲಿಸಿ ಕ್ರಮ ಕೈಗೊ ಳ್ಳುವ ಭರವಸೆ ನೀಡಿದರು. ಸಭೆಯಲ್ಲಿ ತಾಪಂ ಅಧ್ಯಕ್ಷೆ ರೂಪಾ ಗುರುಮೂರ್ತಿ, ಉಪಾಧ್ಯಕ್ಷೆ ಪ್ರೇಮ ಧರ್ಮೇಶ್, ಜಿಪಂ ಸದಸ್ಯ ಗೊಲ್ಲರಹಳ್ಳಿ ಪಟೇಲ್ ಶಿವಣ್ಣ, ಮಾಡಾಳು ಸ್ವಾಮಿ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವತ್ಸಲಾ ಶೇಖರಪ್ಪ, ಗ್ರೇಡ್.2 ತಹಸೀಲ್ದಾರ್ ಪಾಲಾಕ್ಷ, ಇ.ಓ ಕೃಷ್ಣಮೂರ್ತಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಧಿಕಾರಿಗಳ ವಿರುದ್ಧ ಜಿಪಂ ಸದಸ್ಯ ಅಸಮಾಧಾನ
ಕೆಡಿಪಿ ಸಭೆ ನಡೆಯುವ 7ದಿನಗಳ ಮೊದಲೇ ತಮ್ಮ ಇಲಾಖೆಯಲ್ಲಿ ಸಾಧಿಸಿರುವ ಪ್ರಗತಿ ಹಾಗೂ ಸರ್ಕಾರದ ಹೊಸ ಯೋಜನೆಗಳ ಅನುಷ್ಠಾನ ಕುರಿತು ಜನಪ್ರತಿನಿಧಿಗಳಿಗೆ ಸಮಗ್ರ ಅಂಕಿ-ಅಂಶಗಳ ಮಾಹಿತಿಯುಳ್ಳ ಕೈಪಿಡಿಯನ್ನು ನೀಡಬೇಕೆಂಬ ನಿಯಮವಿದ್ದರೂ, ತಾಲೂಕು ಮಟ್ಟದ ಯಾವೊಬ್ಬ ಅಧಿಕಾರಿಯು ಇದನ್ನು ಪಾಲಿಸುತ್ತಿಲ್ಲ. ಕೇವಲ ಮುಖ್ಯ ಅಂಶಗಳನ್ನು ಮಾತ್ರ ಕೈಪಿಡಿಯಲ್ಲಿ ತೋರಿಸಿದರೆ ಏನು ಚರ್ಚೆ ಮಾಡುವುದು ಎಂದು ಅಧಿಕಾರಿಗಳ ವಿರುದ್ಧ ಜಿಪಂ ಸದಸ್ಯ ಗೊಲ್ಲರಹಳ್ಳಿ ಪಟೇಲ್ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಶಿವಲಿಂಗೇಗೌಡ ಮುಂದಿನ ಸಭೆಯಲ್ಲಿ ಇದು ಮರುಕಳಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಇಓ ಕೃಷ್ಣಮೂರ್ತಿ ಅವರಿಗೆ ತಾಕೀತು ಮಾಡಿದರು.

ಕುಡಿಯುವ ನೀರು ಪೂರೈಕೆಗಾಗಿ ಅನುದಾನದ ಕೊರತೆಯಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ, ಜನರಿಗೆ ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸಬೇಕು. – ಕೆ.ಎಂ.ಶಿವಲಿಂಗೇಗೌಡ, ಶಾಸಕ

Translate »