ಕಡ್ಡಾಯ ಶಿಕ್ಷಣದಿಂದ ಬಾಲ ಕಾರ್ಮಿಕ ಪದ್ಧತಿ ಅಂತ್ಯ
ಹಾಸನ

ಕಡ್ಡಾಯ ಶಿಕ್ಷಣದಿಂದ ಬಾಲ ಕಾರ್ಮಿಕ ಪದ್ಧತಿ ಅಂತ್ಯ

June 17, 2019

ಅರಸೀಕೆರೆ:  ಶಿಕ್ಷಣ ಎಂಬುದು ಜೀವನದಲ್ಲಿ ಸಿಗುವ ದೊಡ್ಡ ಕೊಡುಗೆ. ಶಿಕ್ಷಣ ಪಡೆದು ಮಕ್ಕಳು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಕಡ್ಡಾಯ ಶಿಕ್ಷಣ ದಿಂದ ಬಾಲಕಾರ್ಮಿಕ ಪದ್ಧತಿ ತೊಲಗು ತ್ತದೆ ಎಂದು ಜೆಎಂಎಫ್‍ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲಾ ಹೇಳಿದರು.

ನಗರದ ಸೇಂಟ್ ಮೇರೀಸ್ ಪ್ರೌಢಶಾಲೆ ಯಲ್ಲಿ ಬಾಲಕಾರ್ಮಿಕರ ವಿರೋಧಿ ದಿನಾ ಚರಣೆಯ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಅವರು, ಮಕ್ಕಳು ವಿದ್ಯೆ ಯಿಂದ ವಂಚಿತರಾಗಿ ಬಾಲಕಾರ್ಮಿಕ ರಾಗಿ ದುಡಿಯಲು ಪೆÇೀಷಕರ ಅನಕ್ಷರತೆ ಮತ್ತು ಕುಟುಂಬದ ಆರ್ಥಿಕ ದುಃಸ್ಥಿತಿ ಪ್ರಮುಖ ಕಾರಣಗಳು. ಪೆÇೀಷಕರು ಹೆಚ್ಚಿನ ಜಾಗ್ರತೆ ವಹಿಸಿ ಮಕ್ಕಳ ಭವಿಷ್ಯವನ್ನು ಉಜ್ವಲ ವಾಗಿಸಲು ತಪ್ಪದೇ ಶಿಕ್ಷಣ ಕೊಡಿಸಬೇಕು. ಸರ್ಕಾರ ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿ ಮೂಲಕ ಬಾಲಕಾರ್ಮಿಕ ಪದ್ಧತಿ ನಿಷೇಧಕ್ಕೆ ಶ್ರಮಿಸುತ್ತಿದೆ. ಆದರೆ ಈ ವಿಚಾರ ಅರಿಯದ ಮುಗ್ದ ಜನರು, ಮಕ್ಕಳು ಶೋಷಣೆಗೆ ಒಳ ಗಾಗುತ್ತಿರುವುದು ವಿಪರ್ಯಾಸ ಎಂದರು.

1986ರ ಶಿಕ್ಷಣ ಕಾಯ್ದೆಯಲ್ಲಿ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಸರ್ಕಾರ ಉಚಿತ ಶಿಕ್ಷಣ ನೀಡಲು ವ್ಯವಸ್ಥೆ ಮಾಡಿದೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಪೆÇೀಷಕರೂ ನಿಶ್ಚಿತ ಗುರಿ ಹೊಂದಬೇಕಿದೆ ಎಂದರು.

ಬಿಇಒ ಮೋಹನಕುಮಾರ್ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸಕ್ಕೆ ಬದಲಾಗಿ ಪಟಾಕಿ, ಬೆಂಕಿ ಪೊಟ್ಟಣ ತಯಾರಿಕೆಯಂತಹ ಅಪಾಯಕಾರಿ ಕೈಗಾರಿಕಾ ಕ್ಷೇತ್ರಗಳಲ್ಲಿ ಬಾಲಕಾರ್ಮಿಕರಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ತಮಿಳುನಾಡಿನ ಶಿವ ಕಾಶಿಯಲ್ಲಿ ನೂರಾರು ಮಕ್ಕಳು ವರ್ಷಗಳ ಹಿಂದೆ ಪಟಾಕಿ ಕಾರ್ಖಾನೆ ಅಗ್ನಿದುರಂತ ದಲ್ಲಿ ಸಾವನ್ನಪ್ಪಿದ ಘಟನೆ ಇದಕ್ಕೆ ಸಾಕ್ಷಿ ಎಂದರು. 14-18 ವಯೋಮಾನದವರಿಗೆ ಸರಿ-ತಪ್ಪು ನಿರ್ಧರಿಸುವ ಶಕ್ತಿ ಇರುವುದಿಲ್ಲ. ಅಂತಹವರನ್ನು ದುಡಿಮೆಗೆ ಹಚ್ಚಿದರೆ ಮಾನಸಿಕ-ದೈಹಿಕವಾಗಿ ಕುಗ್ಗುತ್ತಾರೆ. ಶಿಕ್ಷಣದಿಂದ ವಂಚಿತರಾಗಿ ಸಮಾಜಘಾತಕ ರಾಗುವ ಅಪಾಯವಿದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಮಿಕ ಇಲಾಖೆ ನಿರೀಕ್ಷಕ ಹೆಚ್.ಕೆ ಪ್ರಭಾಕರ್, ಬಾಲಕಾರ್ಮಿಕ ಪದ್ಧತಿ ಬೆಂಬಲಿಸಿದವರಿಗೆ 20ರಿಂದ 50 ಸಾವಿರ ರೂ. ದಂಡ ಹಾಗೂ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ ಎಂದು ವಿವರಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೇಂಟ್ ಮೇರೀಸ್ ಪ್ರೌಢಶಾಲೆ ಮುಖ್ಯೋ ಪಾಧ್ಯಾಯಿನಿ ಸಿಂಥಿಯಾ ಆರ್.ಪಾಯ್ಸ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಸಿದ್ದ ಮಲ್ಲಪ್ಪ ಉಪನ್ಯಾಸ ನೀಡಿದರು. ವಕೀಲ ಸಂಘದ ಕಾರ್ಯದರ್ಶಿ ಕಿರಣ್ ಮೈಲಾರ್, ವಕೀಲ ಎನ್.ಕೆ.ಕಲ್ಯಾಣ್ ಕುಮಾರ್ ಮತ್ತಿತರರಿದ್ದರು.

Translate »