ಮಕ್ಕಳಿಗೆ ಕೆಲಸವಲ್ಲ, ಶಿಕ್ಷಣ ಕೊಡಿಸಿ: ಬಾಲಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಜಿಪಂ ಸಿಇಓ ಶ್ವೇತಾ
ಹಾಸನ

ಮಕ್ಕಳಿಗೆ ಕೆಲಸವಲ್ಲ, ಶಿಕ್ಷಣ ಕೊಡಿಸಿ: ಬಾಲಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಜಿಪಂ ಸಿಇಓ ಶ್ವೇತಾ

June 17, 2019

ಹಾಸನ, ಜೂ.16- ಮಕ್ಕಳ ಬಾಲ್ಯ ಅಮೂಲ್ಯವಾದುದು. ಮಕ್ಕಳನ್ನು ಯಾವ ಕಾರಣಕ್ಕೂ ಕೆಲಸಕ್ಕೆ ತಳ್ಳದೇ ಕಡ್ಡಾಯ ವಾಗಿ ಶಿಕ್ಷಣ ಕೊಡಿಸಬೇಕು ಎಂದು ಜಿಪಂ ಅಧ್ಯಕ್ಷೆ ಶ್ವೇತಾ ಕರೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಡಳಿತ, ಜಿಪಂ, ಬಾಲಕಾರ್ಮಿಕ ತಡೆ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯ ದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಳಿಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪಣ ತೊಡುವ ಪ್ರಮಾಣವಚನ ಬೋಧಿಸಿದರು.

ಮಕ್ಕಳು ಹೆಚ್ಚಾಗಿರುವ ಕುಟುಂಬ ದವರೇ ಬಾಲಕಾರ್ಮಿಕರಾಗುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿ ಅನಿಷ್ಟ. ಪೋಷ ಕರು ಹೋಟೆಲ್, ಕಾರ್ಖಾನೆ, ವರ್ಕ್ ಶಾಪ್, ಹೊಲಗದ್ದೆ ಹಾಗೂ ಮನೆ ಕೆಲಸಕ್ಕೆ ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಬಿಡ ಬೇಕು. ಮಕ್ಕಳು ದುಡಿಮೆ ಮಾಡುತ್ತಿರು ವೆಡೆ ಇಲಾಖೆ ಅಧಿಕಾರಿಗಳು ಆಗಾಗ್ಗೆ ದಾಳಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗು ವಂತೆ ಮಾಡಬೇಕು ಎಂದರು.

ಬಾಲಕಾರ್ಮಿಕ ಪದ್ಧತಿಗೆ ಬಡತನ ವೊಂದೇ ಕಾರಣವಲ್ಲ. ಅರಿವಿನ ಕೊರತೆಯೂ ಕಾರಣ. ಈ ಸಾಮಾಜಿಕ ಪಿಡುಗಿನ ವಿರುದ್ಧ ಸಂಘಟಿತ ಹೋರಾಟ ಅಗತ್ಯ. ಇಂಥ ಪದ್ಧತಿಯಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಬಾಲಕಾರ್ಮಿಕ ಪದ್ಧತಿಗೆ ವಿರೋಧ 1 ದಿನಕ್ಕೆ ಸೀಮಿತ ವಾಗಬಾರದು ಎಂದು ಕಾರ್ಮಿಕ ಅಧಿ ಕಾರಿ ಹೆಚ್.ಎನ್.ರಮೇಶ್ ಹೇಳಿದರು.

ಜಿಪಂ ಸಿಇಒ ವಿಜಯಪ್ರಕಾಶ್, ತಾಪಂ ಅಧ್ಯಕ್ಷ ಲಿಂಗೇಗೌಡ, ಜಿಪಂನ ಅರುಣ್ ಕುಮಾರ್, ಬಿಇಒ ಕೃಷ್ಣ, ಪ್ರಜೋದಯ ಸಂಸ್ಥೆಯ ಪೌಲಾಸ್ ಮತ್ತಿತರರಿದ್ದರು.

Translate »