ಬೆಂಗಳೂರು: ಪಶು ಸಂಗೋಪನಾ ಇಲಾಖೆಯಿಂದ ವಿವಿಧ ಯೋಜನೆಗಳಡಿ ನೀಡಲಾಗುವ ಹಸುಗಳನ್ನು ಫಲಾನುಭವಿ ಆರು ವರ್ಷ ಗಳವರೆಗೂ ಮಾರಾಟ ಮಾಡುವಂತಿಲ್ಲ.
ಸರ್ಕಾರದ ಸಬ್ಸಿಡಿ ಪಡೆದ ಫಲಾನು ಭವಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಯೋಜನೆಯನ್ನು ಭಾರೀ ಪ್ರಮಾಣದಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಇದನ್ನು ತಪ್ಪಿಸಲು ಇನ್ನು ಮುಂದೆ ಇಲಾಖಾ ವತಿಯಿಂದ ಪಡೆದ ಪ್ರಾಣಿಗಳಿಗೆ ಚಿಪ್ ಅಳವಡಿಸುವುದಾಗಿ ಪಶು ಸಂಗೋಪನಾ ಸಚಿವ ವೆಂಕಟ ರಾವ್ ನಾಡಗೌಡ ಇಂದಿಲ್ಲಿ ತಿಳಿ ಸಿದರು. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಾಮಾನ್ಯ ವರ್ಗಕ್ಕೆ ಶೇಕಡ 25ರಷ್ಟು ಸಬ್ಸಿಡಿ ಹಾಗೂ ಉಳಿದ ಹಣವನ್ನು ಬ್ಯಾಂಕ್ ನಿಂದ ಸಾಲ ರೂಪದಲ್ಲಿ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಈ ಅನುಪಾತ ಶೇಕಡ 90-10 ಆಗಿರುತ್ತದೆ ಎಂದರು. ಒಂದೇ ಹಸುವನ್ನು ನೂರಾರು ಫಲಾನುಭವಿಗಳಿಗೆ ನೀಡಿ ಬ್ಯಾಂಕ್ ಅಧಿ ಕಾರಿಗಳು ಭಾರೀ ಪ್ರಮಾಣದಲ್ಲಿ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಹಸುಗಳಿಗೆ ಚಿಪ್ ಅಳವಡಿಸಲಾಗುವುದು. ಇದರಲ್ಲಿ ಎಲ್ಲಾ ಮಾಹಿತಿ ಒಳಗೊಂಡಿರುತ್ತದೆ.
ನಿಗದಿಪಡಿಸಿದ ಅವಧಿಗೂ ಮುನ್ನ ಹಸು ಮಾರಾಟ ಮಾಡಿದರೆ ಅದರ ಮಾಹಿತಿ ಇಲಾಖೆಗೆ ಲಭ್ಯವಾಗಲಿದೆ. ಒಂದು ವೇಳೆ ಅನಾರೋಗ್ಯದಿಂದ ಪ್ರಾಣ ಬಿಟ್ಟರೆ ಚಿಪ್ ಮಾಹಿತಿ ಆಧರಿಸಿ ಪರಿಹಾರ ನೀಡಲಾ ಗುವುದು ಎಂದರು. ಇದುವರೆಗೂ ಎರಡು ಹಸು ಪಡೆಯಲು 1.20 ಲಕ್ಷ ರೂ. ನಿಗದಿ ಪಡಿಸಲಾಗಿತ್ತು. ಇನ್ನು ಮುಂದೆ ಒಂದೇ ಹಸು ನೀಡಲಾಗುವುದು ಎಂದರು. ಪಶು ಸಂಗೋಪನಾ ಇಲಾಖೆಯನ್ನು ಕ್ರಿಯಾ ಶೀಲಗೊಳಿಸಲು ಸಾಫ್ಟ್‍ವೇರ್ ಅಭಿವೃದ್ಧಿಗೊಳಿಸ ಲಾಗುತ್ತಿದೆ, ಇದರಲ್ಲಿ ವೈದ್ಯರ ಮಾಹಿತಿ ಹಾಗೂ ಪಶು ಆಸ್ಪತ್ರೆಗಳಲ್ಲಿ ಔಷಧಿ, ದಾಸ್ತಾನು ಕೊರತೆ ಮಾಹಿತಿ ಲಭ್ಯವಾಗಲಿದೆ. ಸದ್ಯದಲ್ಲೇ ಇಲಾಖೆ ವೆಬ್‍ಸೈಟ್ ಉದ್ಘಾಟನೆಯಾಗಲಿದೆ.