ಹಾಸನ

ಕುಸಿದ ಬಾಣಾವರ ಕೋಟೆ ಗೋಡೆ
ಹಾಸನ

ಕುಸಿದ ಬಾಣಾವರ ಕೋಟೆ ಗೋಡೆ

June 10, 2019

ಅರಸೀಕೆರೆ: ತಾಲೂಕಿನ ಬಾಣಾವರ ಪಟ್ಟಣದ ಲ್ಲಿರುವ ಪಾಳೆಗಾರರ ಕಾಲದ ಕೋಟೆಯ ಗೋಡೆಯ ಒಂದು ಭಾಗ ಕುಸಿದಿದ್ದು, ಕೋಟೆ ಶಿಥಿಲವಾಗುತ್ತಿದೆ ಎಂದು ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಸಾವಿರ ವರ್ಷಗಳ ಹಿಂದಿನ ಈ ಕೋಟೆಯ ಗೋಡೆಯು ಕೆಲವೆಡೆ ಶಿಥಿಲವಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಗೋಡೆಯ ಒಂದು ಪಾಶ್ರ್ವ ಕುಸಿದು ಬಿದ್ದಿದೆ. ಐತಿಹಾಸಿಕ ಸ್ಮಾರಕವನ್ನು ಪುರಾತತ್ವ ಇಲಾಖೆಯವರು ತಕ್ಷಣವೇ ದುರಸ್ತಿಪಡಿಸಬೇಕು. ಕೋಟೆಯ ಉಳಿದ ಭಾಗವನ್ನೂ ಸಂರಕ್ಷಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. 10ನೇ ಶತಮಾನದಲ್ಲಿ ಹೊಯ್ಸಳ ಅರಸರ ಕಾಲದಲ್ಲಿ ಈ ಕೋಟೆ ನಿರ್ಮಿತವಾಗಿದೆ….

ಸಂಪನ್ಮೂಲವಿದ್ದೂ ಬಡತನ, ತೆರಿಗೆ ಸಂಗ್ರಹದಲ್ಲಿ ಹಿನ್ನಡೆ; ಹಾಸನ ನಗರಸಭೆ ವಿಶೇಷ
ಹಾಸನ

ಸಂಪನ್ಮೂಲವಿದ್ದೂ ಬಡತನ, ತೆರಿಗೆ ಸಂಗ್ರಹದಲ್ಲಿ ಹಿನ್ನಡೆ; ಹಾಸನ ನಗರಸಭೆ ವಿಶೇಷ

June 10, 2019

ಹಾಸನ: ಹಾಸನ ಎಂದರೆ ಸಾಮಾನ್ಯವಲ್ಲ, ಐತಿಹಾಸಿಕ, ಆಕರ್ಷಕ ಪ್ರವಾಸಿ ತಾಣಗಳಿಂದಾಗಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆ. ಒಂದು ಮೂಲೆಯಲ್ಲಿ ಕಾಫಿ, ಇನ್ನೊಂದು ಮೂಲೆಯಲ್ಲಿ ಮಿಡಿಸೌತೆ, ಇನ್ನೊಂದೆಡೆ ಕೊಬ್ಬರಿ, ಮತ್ತೊಂದೆಡೆ ತಂಬಾಕು, ನಡುವೆ ಆಲೂಗಡ್ಡೆ… ಹಾಗಾಗಿ ಕೃಷಿಯಲ್ಲಿ ಶ್ರೀಮಂತ ಜಿಲ್ಲೆ ಎಂಬ ಹೆಗ್ಗಳಿಕೆ. ಆದರೆ, ಅಭಿವೃದ್ಧಿ ಯಲ್ಲಿ ಸಮಗ್ರತೆ ಇಲ್ಲ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲೂ ಬಹಳಷ್ಟು ಏರುಪೇರು ಎಂಬ ಆರೋಪ, ಅಸಮಾಧಾನದ ಮಾತುಗಳಿವೆ. ಹಾಸನದ ನಗರಸಭೆಯೂ ಇದಕ್ಕೆ ಹೊರತಾಗಿಲ್ಲ. ಅದು ಈ ಬಾರಿ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದೆ….

ಸರಕಾರಿ ಶಾಲೆಗೆ ಬಂದ ಮಕ್ಕಳಿಗೆ ಕುದುರೆ ಗಾಡಿಯಲ್ಲಿ ಮೆರವಣಿಗೆ!
ಹಾಸನ

ಸರಕಾರಿ ಶಾಲೆಗೆ ಬಂದ ಮಕ್ಕಳಿಗೆ ಕುದುರೆ ಗಾಡಿಯಲ್ಲಿ ಮೆರವಣಿಗೆ!

June 5, 2019

ಹಾಸನ: ನಗರದ ಹೊರವಲಯ ದಲ್ಲಿರುವ ಹನುಮಂತಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಸೇರ್ಪಡೆಯಾದ ಮಕ್ಕಳ ಪಾಲಿಗೆ ಮಂಗಳವಾರ ಎಂದಿನಂತಿರಲಿಲ್ಲ. ಶಾಲೆಗೆ ಹೊರಟು ಬಂದ ಅವರನ್ನೆಲ್ಲಾ ಕುದುರೆ ಗಾಡಿಯಲ್ಲಿ ಮೆರವಣಿಗೆ ಮಾಡಿ ಶಾಲೆಗೆ ಅದ್ಧೂರಿಯಾಗಿ ಕರೆ ತರಲಾ ಯಿತು. ಜತೆಗೆ ಪೂರ್ಣಕುಂಭ ಕಳಶದ ಸ್ವಾಗತವೂ ಮಕ್ಕಳಿಗೆ ದೊರೆಯಿತು. ಇದನ್ನೆಲ್ಲಾ ಕಂಡು ಮಕ್ಕಳು ಹಿರಿಹಿರಿ ಹಿಗ್ಗಿದರು. ಕುದುರೆ ಗಾಡಿಯಲ್ಲಿ ಕುಳಿತು ಕೇಕೆ ಹಾಕಿ ನಕ್ಕರು. ಮಕ್ಕಳನ್ನು ಕುದುರೆ ಗಾಡಿಯಲ್ಲಿ ಕುಳ್ಳಿರಿಸಿದ ಶಿಕ್ಷಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು….

ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆ ರೂಪಿಸಿ
ಹಾಸನ

ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆ ರೂಪಿಸಿ

June 5, 2019

ಜಿಪಂ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಶ್ವೇತಾ ನಿರ್ದೇಶನ ಹಾಸನ: ಜಿಲ್ಲೆಯಲ್ಲಿ ಸಂಯೋಜಿತ ಬೇಸಾಯದ ಮೂಲಕ ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಾದ ತುರ್ತು ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಹೇಳಿದ್ದಾರೆ. ಜಿಪಂನ ಹೊಯ್ಸಳ ಸಭಾಂಗಣದಲ್ಲಿ ಮಂಗಳ ವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೃಷಿ ಮತ್ತು ತೋಟಗಾರಿಕೆ ಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿ ಸಲು ರೈತರಿಗೆ ಪೂರಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಿದೆ. ಅಲ್ಲದೇ ಕಾಲಕಾಲಕ್ಕೆ ಸೂಕ್ತ ಮಾರ್ಗ…

94ನೇ ದಿನಕ್ಕೆ ಕಾಲಿಟ್ಟ ಮಿನರ್ವ ಮಿಲ್ ಕಾರ್ಮಿಕರ ಮುಷ್ಕರ
ಹಾಸನ

94ನೇ ದಿನಕ್ಕೆ ಕಾಲಿಟ್ಟ ಮಿನರ್ವ ಮಿಲ್ ಕಾರ್ಮಿಕರ ಮುಷ್ಕರ

June 5, 2019

ಪ್ರತಿಭಟನಾ ಸ್ಥಳಕ್ಕೆ ಶಾಸಕ ಪ್ರೀತಂ ಗೌಡ ಭೇಟಿ ಹಾಸನ: ನಗರದ ಹೊರವಲಯ ಹನುಮಂತಪುರ ಬಳಿ ಇರುವ ನ್ಯೂ ಮಿನರ್ವ ಮಿಲ್‍ನ ಕಾರ್ಮಿಕರು ವೇತನ ಒಪ್ಪಂದ ಕುರಿತು ನಡೆಸುತ್ತಿರುವ ಮುಷ್ಕರ ಮಂಗಳವಾರ 94ನೇ ದಿನಕ್ಕೆ ಕಾಲಿಟ್ಟಿತು. ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕ ಮುಖಂಡರ ಜತೆ ಚರ್ಚಿಸಿದರು. ಬಳಿಕ ಶಾಸಕರು ಮಿನರ್ವ ಮಿಲ್‍ನ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿದರು. ಇಲ್ಲಿನ ಕಾರ್ಮಿಕರ ಸಮಸ್ಯೆಯನ್ನು ನೂತನ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರ ಗಮನಕ್ಕೆ…

ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಎಟಿಆರ್ ಸೂಚನೆ
ಹಾಸನ

ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಎಟಿಆರ್ ಸೂಚನೆ

June 5, 2019

* ರಾಮನಾಥಪುರ-ಬೆಟ್ಟದಪುರ ಸಂಪರ್ಕ ರಸ್ತೆ ಕಾಮಗಾರಿ ಬಾಕಿ: ಸ್ಥಳೀಯರ ಅಸಮಾಧಾನ * ಸ್ಥಳಕ್ಕೆ ಕೆಆರ್‍ಡಿಸಿಎಲ್ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರÀನ್ನು ಕರೆದೊಯ್ದಿದ್ದ ಶಾಸಕ ರಾಮನಾಥಪುರ: ಅರಕಲ ಗೂಡು, ರಾಮನಾಥಪುರ ಮಾರ್ಗ ಬೆಟ್ಟದ ಪುರಕ್ಕೆ ಹಾದು ಹೋಗಿರುವ ಮುಖ್ಯರಸ್ತೆಯ ಲ್ಲಿನ ಸಮಸ್ಯೆಗಳ ಕುರಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸುವ ಉದ್ದೇಶದಿಂದ ಜನರ ಬಳಿಗೇ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (ಕೆಅರ್‍ಡಿಸಿಎಲ್) ಹಾಸನ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿ ಗಳನ್ನು ಶಾಸಕ ಎ.ಟಿ.ರಾಮಸ್ವಾಮಿ ಮಂಗಳ…

ನೆನೆಗುದಿಗೆ ಬಿದ್ದಿರುವ ಕಾಮಗಾರಿ ತ್ವರಿತ ಅನುಷ್ಠಾನ
ಹಾಸನ

ನೆನೆಗುದಿಗೆ ಬಿದ್ದಿರುವ ಕಾಮಗಾರಿ ತ್ವರಿತ ಅನುಷ್ಠಾನ

June 2, 2019

ಜಿಲ್ಲಾಧಿಕಾರಿ ಕಚೇರಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಸ್ಪಷ್ಟ ನಿರ್ದೇಶನ ಹಾಸನ: ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವ ಹಿಸುವುದರ ಜೊತೆಗೇ, ನೆನೆಗುದಿಗೆ ಬಿದ್ದಿ ರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮಂಜೂರಾ ಗಿರುವ ಹೊಸ ಯೋಜನೆಗಳನ್ನೂ ಶೀಘ್ರ ವಾಗಿ ಅನುಷ್ಠಾನಗೊಳಿಸಿ ಎಂದು ಲೋಕೋಪ ಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ…

ಜಿಲ್ಲೆಯ ಸರ್ಕಾರಿ ಕಾಲೇಜುಗಳಿಗೆ 125 ಕಂಪ್ಯೂಟರ್
ಹಾಸನ

ಜಿಲ್ಲೆಯ ಸರ್ಕಾರಿ ಕಾಲೇಜುಗಳಿಗೆ 125 ಕಂಪ್ಯೂಟರ್

June 2, 2019

ಹಾಸನ ಹಾಲು ಒಕ್ಕೂಟದಿಂದ 50 ಲಕ್ಷ ರೂ. ಕೊಡುಗೆ: ಸಚಿವ ರೇವಣ್ಣ ವಿತರಣೆ ಹಾಸನ: ಹಾಸನ ಹಾಲು ಒಕ್ಕೂಟದ ವತಿಯಿಂದ ನಗರದಲ್ಲಿನ ಪ್ರಧಾನ ಹಾಲು ಉತ್ಪಾದನಾ ಘಟಕದಲ್ಲಿ ವಿಶ್ವ ಹಾಲು ದಿನವನ್ನು ಶನಿವಾರ ಆಚರಿಸಲಾಯಿತು. ಇದೇ ವೇಳೆ ಜಿಲ್ಲೆಯ ವಿವಿಧ ಸರಕಾರಿ ಕಾಲೇಜುಗಳಿಗೆ 125 ಕಂಪ್ಯೂಟರ್‍ಗಳನ್ನು ಒಕ್ಕೂಟದ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ವಿತರಿಸಿದರು. ನಂತರ ಮಾತನಾಡಿದ ಅವರು, ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಸರಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ನಿಟ್ಟಿನಲ್ಲಿ ಒಟ್ಟು…

ಮಳೆಗಾಲದಲ್ಲಿ ಸೋರುವ ದೇಗುಲ; ಜೀರ್ಣೋದ್ಧಾರಕ್ಕೆ ಭಕ್ತರ ಆಗ್ರಹ
ಹಾಸನ

ಮಳೆಗಾಲದಲ್ಲಿ ಸೋರುವ ದೇಗುಲ; ಜೀರ್ಣೋದ್ಧಾರಕ್ಕೆ ಭಕ್ತರ ಆಗ್ರಹ

June 2, 2019

ರಾಮನಾಥಪುರ: ರಾಮ ನಾಥಪುರದ ಕಾವೇರಿ ನದಿ ದಂಡೆಯ ಲ್ಲಿನ ಶ್ರೀರಾಮೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕಾಗಿ 4.80 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದು, ಅಡಳಿತಾ ತ್ಮಕ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರವನ್ನು ಕಾವೇರಿ ನದಿ ಸ್ವಚ್ಛ್ಚತಾ ಅಂದೋಲನ ಸಮಿತಿ ಒತ್ತಾಯಿಸಿದೆ. ದೇವಸ್ಥಾನ ಶಿಥಿಲವಾಗಿದ್ದು, ಆದಷ್ಟು ಬೇಗ ಜೀರ್ಣೋದ್ಧಾರ ಮಾಡಿಸುವಂತೆ ಇಲ್ಲಿಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಯವರು ಮನವಿ ಮಾಡಿದ್ದರಿಂದ ಪುರಾ ತತ್ವ ಇಲಾಖೆಯ ಮೈಸೂರಿನ ಅಧಿಕಾರಿ ಎ.ಇ.ಪೂಜಾರ್ ಅವರು 4.80 ಕೋಟಿ ರೂ. ಅಂದಾಜು…

ಆರೋಪಿ ಕಾವ್ಯಳ ಜೊತೆ ಪತಿ ಸತೀಶ್
ಮೈಸೂರು, ಹಾಸನ

ಆರೋಪಿ ಕಾವ್ಯಳ ಜೊತೆ ಪತಿ ಸತೀಶ್

June 1, 2019

ಹಾಸನ/ಶ್ರೀರಂಗಪಟ್ಟಣ: ಹಾಸನ ಮತ್ತು ಶ್ರೀರಂಗ ಪಟ್ಟಣದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪತ್ನಿಯರೇ ತಮ್ಮ ಪತಿಯರನ್ನು ಹತ್ಯೆ ಮಾಡಿದ್ದು, ಪೊಲೀಸರಿಂದ ಬಂಧನ ಕ್ಕೊಳಗಾಗಿದ್ದಾರೆ. ಗ್ರಾನೈಟ್ ಉದ್ಯಮಿಯಾಗಿದ್ದ ಪತಿ ಎರಡನೇ ಮದುವೆಯಾದಾಗ ಆತನ ಆಸ್ತಿಗಾಗಿ ಮೊದಲ ಪತ್ನಿ ಸುಪಾರಿ ಪತಿಯನ್ನು ಹತ್ಯೆ ಮಾಡಿದ್ದರೆ, ಶ್ರೀರಂಗ ಪಟ್ಟಣ ತಾಲೂಕು ಅರಕೆರೆ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಯನ್ನು ಪ್ರಿಯಕರ ಮತ್ತಿತರರೊಡನೆ ಸೇರಿ ಪತ್ನಿಯೇ ಕೊಂದಿದ್ದಾಳೆ. ಶ್ರೀರಂಗಪಟ್ಟಣ ವರದಿ: ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೃಹಿಣಿ, ತನ್ನ ಈ…

1 16 17 18 19 20 133
Translate »