ಮಳೆಗಾಲದಲ್ಲಿ ಸೋರುವ ದೇಗುಲ; ಜೀರ್ಣೋದ್ಧಾರಕ್ಕೆ ಭಕ್ತರ ಆಗ್ರಹ
ಹಾಸನ

ಮಳೆಗಾಲದಲ್ಲಿ ಸೋರುವ ದೇಗುಲ; ಜೀರ್ಣೋದ್ಧಾರಕ್ಕೆ ಭಕ್ತರ ಆಗ್ರಹ

June 2, 2019

ರಾಮನಾಥಪುರ: ರಾಮ ನಾಥಪುರದ ಕಾವೇರಿ ನದಿ ದಂಡೆಯ ಲ್ಲಿನ ಶ್ರೀರಾಮೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕಾಗಿ 4.80 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದು, ಅಡಳಿತಾ ತ್ಮಕ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರವನ್ನು ಕಾವೇರಿ ನದಿ ಸ್ವಚ್ಛ್ಚತಾ ಅಂದೋಲನ ಸಮಿತಿ ಒತ್ತಾಯಿಸಿದೆ.
ದೇವಸ್ಥಾನ ಶಿಥಿಲವಾಗಿದ್ದು, ಆದಷ್ಟು ಬೇಗ ಜೀರ್ಣೋದ್ಧಾರ ಮಾಡಿಸುವಂತೆ ಇಲ್ಲಿಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಯವರು ಮನವಿ ಮಾಡಿದ್ದರಿಂದ ಪುರಾ ತತ್ವ ಇಲಾಖೆಯ ಮೈಸೂರಿನ ಅಧಿಕಾರಿ ಎ.ಇ.ಪೂಜಾರ್ ಅವರು 4.80 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು.

ಮಳೆಗೆ ದೇವಾಲಯದ ಗರ್ಭಗುಡಿ ಹಾಗೂ ದೇವಸ್ಥಾನದ ಹಲವೆಡೆ ಸೋರು ತ್ತಿದೆ. ಪರಿಣಾಮ ದೇವಸ್ಥಾನದ ಒಳಾಂ ಗಣದಲ್ಲಿ ಬಹಳಷ್ಟು ಕಡೆ ನೀರು ನಿಲ್ಲು ತ್ತಿದೆ. ಗರ್ಭಗುಡಿ ಮಾತ್ರವಲ್ಲದೇ ಪಾಶ್ರ್ವ ಗೋಡೆಗಳು ಬಿರುಕು ಬಿಟ್ಟಿವೆ. ದೇವಾಲ ಯದ ಪೌಳಿ, ಪ್ರಾಂಗಣದ ಸುತ್ತಲ 36 ಶಿವಲಿಂಗ ಹಾಗೂ ಬಸವಲಿಂಗ ಗುಡಿ ಗಳು, ಶ್ರೀಚಕ್ರದ ಸ್ಥಳ, ಇಂದ್ರಾಕ್ಷಿ, ವಿಶಾಲ ಕ್ಷಮ್ಮ ದೇವಾಲಯಗಳು ಸಹ ಮಳೆ ಬಂದರೆ ಸೂರುತ್ತವೆ. ನೀರಿನಲ್ಲಿ ಮುಳು ಗುತ್ತಿವೆ. ಇದರಿಂದ ದೇವಸ್ಥಾನಕ್ಕೆ ತೆರ ಳಲು ಭಕ್ತರು ಹಿಂಜರಿಯುತ್ತಿದ್ದಾರೆ. ಸರ್ಕಾರ ಆದಷ್ಟೂ ಬೇಗ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಅಂದೋಲನಾ ಸಮಿತಿ ಅಧ್ಯಕ್ಷ ಕುಮಾರ ಸ್ವಾಮಿ, ಖಜಾಂಚಿ ರಘು, ತಾಲೂಕು ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಕುಮಾರ ಸ್ವಾಮಿ ರಾವ್, ಕೇಶವ ಸರ್ಕಾರಕ್ಕೆ ಒತ್ತಾಯಿ ಸಿದ್ದಾರೆ. ರಾಮೇಶ್ವರಸ್ವಾಮಿ ದೇಗುಲ ಜೀರ್ಣೋದ್ಧಾರ ವೆಚ್ಚದ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು, ಶೀಘ್ರವೇ ಅನುಮೋದನೆ ದೊರಕಿಸಿಕೊಡ ಲಾಗುವುದು ಎಂದು ಶಾಸಕ ಎ.ಟಿ.ರಾಮ ಸ್ವಾಮಿ ಭರವಸೆ ನೀಡಿದ್ದಾರೆ.

Translate »