ಬಡ ರೈತರಿಗೆ ಮಾಸಿಕ 3 ಸಾವಿರ ಪಿಂಚಣಿ
ಮೈಸೂರು

ಬಡ ರೈತರಿಗೆ ಮಾಸಿಕ 3 ಸಾವಿರ ಪಿಂಚಣಿ

June 1, 2019

ನವದೆಹಲಿ: ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಗದ್ದುಗೆ ಏರಿದ ಮರುದಿನವೇ ದೇಶದ ಬಡ ರೈತರು, ಬಡವರು, ಸಣ್ಣ ವ್ಯಾಪಾರಿ ಗಳು, ಹುತಾತ್ಮ ಯೋಧರ ಕುಟುಂಬಗಳಿಗೆ ಭರ್ಜರಿ ಉಡುಗೊರೆ ನೀಡಿದ್ದು, ದೇಶದಲ್ಲಿ ಬಡತನ ನಿರ್ಮೂ ಲನೆ ಮಾಡಲು ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ.

ವಾರ್ಷಿಕ 6 ಸಾವಿರ ರೂ. ನೀಡುವ ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯನ್ನು ಎಲ್ಲ ರೈತರಿಗೆ ವಿಸ್ತರಿಸಿದ್ದು ಇದರಿಂದ 14.5 ಕೋಟಿ ರೈತರಿಗೆ ಪ್ರಯೋಜನವಾಗ ಲಿದೆ. ಇದಕ್ಕೆ ಕೇಂದ್ರ ಸರ್ಕಾರ ವಾರ್ಷಿಕ 87 ಸಾವಿರ ಕೋಟಿ ರೂ ವೆಚ್ಚ ಮಾಡಲಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೆಲವೊಂದು ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಮೊದಲ ಸಂಪುಟ ಸಭೆಯಲ್ಲೇ ಮೋದಿ ಮಹತ್ವದ ನಿರ್ಧಾರ ತೆಗೆದುಕೊಂಡಿ ದ್ದಾರೆ. ರೈತರಿಗಾಗಿ ಪ್ರಧಾನ್ ಮಂತ್ರಿ ಕಿಸಾನ್ ಪೆನ್ಷನ್ ಯೋಜನೆಯನ್ನು ಘೋಷಣೆ ಮಾಡಿದ್ದು, ಇದರಿಂದ 60ವರ್ಷ ಮೇಲ್ಪಟ್ಟ ಬಡ ರೈತರಿಗೆ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ದೊರೆಯಲಿದೆ. ಬಡವರು, ಅಸಂಘಟಿಕ ಕಾರ್ಮಿಕರು, ಸಣ್ಣ ಕಿರಾಣಿ ಅಂಗಡಿಯ ವರಿಗೂ ಹೊಸ ಪಿಂಚಣಿ ಯೋಜನೆಯನ್ನು ರೂಪಿಸ ಲಾಗಿದ್ದು, ಅದರ ಸದುಪಯೋಗ ದೊರಕಲಿದೆ.

ಪ್ರಧಾನಿ ಕಿಸಾನ್ ಯೋಜನೆ ಎಲ್ಲಾ ರೈತರಿಗೂ ಲಭ್ಯ: ನರೇಂದ್ರ ಮೋದಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಎನ್‍ಡಿಎ-2 ಸರ್ಕಾರದ ಪ್ರಣಾಳಿಕೆಯಲ್ಲಿ ಆಶ್ವಾಸನೆ ಕೊಟ್ಟಂತೆ ಪಿಎಂ-ಕಿಸಾನ್ ಯೋಜನೆಯನ್ನು ದೇಶದ ಎಲ್ಲಾ ರೈತರಿಗೂ ವಿಸ್ತರಿಸಲು
ಸಂಪುಟ ಅನುಮೋದನೆ ಮಾಡಿದೆ. ಇದರೊಂದಿಗೆ, ಎಲ್ಲಾ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ರೂ. ಹಣದ ನೆರವು ನೀಡಲಿದೆ.

ಚುನಾವಣೆ ಘೋಷಣೆಗೆ ಸ್ವಲ್ಪ ದಿನಗಳ ಮೊದಲು ಎನ್‍ಡಿಎ-1 ಸರ್ಕಾರವು `ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಿದ್ಧಿ’ (ಪಿಎಂಕೆಎಸ್‍ಎಸ್) ಯೋಜನೆಯನ್ನು ಘೋಷಿಸಿತ್ತು. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ, ಆರ್ಥಿಕ ನೆರವಾಗಿ ಮೂರು ತಿಂಗಳಿಗೊಮ್ಮೆ 2 ಸಾವಿರ ರೂ. ನಂತೆ ವರ್ಷಕ್ಕೆ 6 ಸಾವಿರ ರೂ. ಕೊಡುವುದು ಈ ಯೋಜನೆಯ ಉದ್ದೇಶವಾಗಿತ್ತು. 12 ಕೋಟಿ ರೈತರು ಒಟ್ಟು 75 ಸಾವಿರ ಕೋಟಿ ರೂ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ 3.11 ಕೋಟಿ ರೈತರು ಮೊದಲ ತ್ರೈಮಾಸಿಕ ಕಂತಿನ ಹಣವನ್ನು ಪಡೆದಿದ್ದಾರೆ. 2 ಕೋಟಿಗೂ ಹೆಚ್ಚು ರೈತರಿಗೆ ಎರಡನೇ ಕಂತಿನ ಹಣವೂ ಬಂದಿದೆ. ಈಗ ದೇಶದ ಎಲ್ಲಾ ರೈತರನ್ನೂ ಈ ಯೋಜನೆಯ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿರುವುದರಿಂದ ಯೋಜನೆಯ ವೆಚ್ಚವೂ ಇನ್ನಷ್ಟು ಹೆಚ್ಚಾಗಲಿದೆ.

ರಕ್ಷಕರಿಗೆ ಮೋದಿ ಕೊಡುಗೆ: ರಾಷ್ಟ್ರೀಯ ರಕ್ಷಣಾ ನಿಧಿ ವ್ಯಾಪ್ತಿಗೆ ಬರುವ ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆಯಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಜಾರಿಗೆ ತರಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಯೋಧರ ಮಕ್ಕಳಿಗೆ ಈ ಹಿಂದೆ ಮಾಸಿಕ 2000 ರೂ. ಇದ್ದ ವಿದ್ಯಾರ್ಥಿ ವೇತನವನ್ನು ಈಗ 2,500 ರೂ.ಗಳಿಗೆ ಏರಿಕೆ ಮಾಡಲಾ ಗಿದ್ದರೆ, ವಿದ್ಯಾರ್ಥಿನಿಯರಿಗೆ 2,250 ರಿಂದ 3000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇನ್ನು ವಿದ್ಯಾರ್ಥಿವೇತನದ ವ್ಯಾಪ್ತಿಯನ್ನು ನಕ್ಸಲ್ ಹಾಗೂ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ರಾಜ್ಯ ಪೆÇಲೀಸ್ ಅಧಿಕಾರಿಗಳ ಮಕ್ಕಳಿಗೆ ಲಭ್ಯವಾಗುವಂತೆ ವಿಸ್ತರಿಸಲಾಗಿದೆ. ಇದೇ ವೇಳೆ ರಾಜ್ಯ ಪೆÇಲೀಸ್ ಅಧಿಕಾರಿಗಳ ಮಕ್ಕಳಿಗೆ ಹೊಸದಾಗಿ ವಿದ್ಯಾರ್ಥಿ ವೇತನ ಪಡೆಯುವ ಮಿತಿಯನ್ನು ವಾರ್ಷಿಕವಾಗಿ ನಿಗದಿಪಡಿಸಲಾಗಿದೆ.

Translate »