ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಎಟಿಆರ್ ಸೂಚನೆ
ಹಾಸನ

ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಎಟಿಆರ್ ಸೂಚನೆ

June 5, 2019

* ರಾಮನಾಥಪುರ-ಬೆಟ್ಟದಪುರ ಸಂಪರ್ಕ ರಸ್ತೆ ಕಾಮಗಾರಿ ಬಾಕಿ: ಸ್ಥಳೀಯರ ಅಸಮಾಧಾನ

* ಸ್ಥಳಕ್ಕೆ ಕೆಆರ್‍ಡಿಸಿಎಲ್ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರÀನ್ನು ಕರೆದೊಯ್ದಿದ್ದ ಶಾಸಕ

ರಾಮನಾಥಪುರ: ಅರಕಲ ಗೂಡು, ರಾಮನಾಥಪುರ ಮಾರ್ಗ ಬೆಟ್ಟದ ಪುರಕ್ಕೆ ಹಾದು ಹೋಗಿರುವ ಮುಖ್ಯರಸ್ತೆಯ ಲ್ಲಿನ ಸಮಸ್ಯೆಗಳ ಕುರಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸುವ ಉದ್ದೇಶದಿಂದ ಜನರ ಬಳಿಗೇ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (ಕೆಅರ್‍ಡಿಸಿಎಲ್) ಹಾಸನ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿ ಗಳನ್ನು ಶಾಸಕ ಎ.ಟಿ.ರಾಮಸ್ವಾಮಿ ಮಂಗಳ ವಾರ ಪಟ್ಟಣಕ್ಕೆ ಕರೆತಂದಿದ್ದರು.

ಜನಾಗ್ರಹ: ಈ ಸಂದರ್ಭ ಸ್ಥಳೀಯರು, ಪಟ್ಟಣದಲ್ಲಿ ಹಾದು ಹೋಗಿರುವ ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆಯನ್ನು ಚತುಷ್ಪಥವಾಗಿರಿಸಬೇಕು. ಅದಕ್ಕೆ ಬೇಕಾದ ಜಾಗ ಸ್ವಾಧೀನಪಡಿಸಿಕೊಂಡು ಮೇಲ್ದರ್ಜೆ ಗೇರಿಸಬೇಕು ಎಂದು ಶಾಸಕ ಎ.ಟಿ.ರಾಮ ಸ್ವಾಮಿ ಮತ್ತು ಕೆಆರ್‍ಡಿಸಿಎಲ್ ಇಂಜಿನಿ ಯರ್ ಅವರನ್ನು ಒತ್ತಾಯಿಸಿದರು.

ದೊಡ್ಡಮಗ್ಗೆಯಲ್ಲಿ ಈ ರಸ್ತೆಗೆ ಡಿವೈಡರ್ ನಿರ್ಮಿಸಲಾಗಿದೆ. ಆದರೆ ಪ್ರಮುಖ ವಾಣಿಜ್ಯ ಪಟ್ಟಣವಾದ ರಾಮನಾಥಪುರದಲ್ಲಿಯೇ ರಸ್ತೆ ವಿಭಜಕ ನಿರ್ಮಿಸದೇ ನಿರ್ಲಕ್ಷಿಸಲಾ ಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಜಿಲ್ಲೆ ಗಡಿ ಭಾಗದ ಮಲ್ಲಾಪುರ ಬಳಿ ಇಂಜಿನಿಯರ್‍ಗಳನ್ನು ಕರೆದೊಯ್ದು ಅಲ್ಲಿನ ಸಮಸ್ಯೆಗಳತ್ತ ಗಮನ ಸೆಳೆದರು. ಅಗತ್ಯವಿರು ವೆಡೆ ಸರಿಯಾಗಿ ರಸ್ತೆ ಉಬ್ಬುಗಳನ್ನು ನಿರ್ಮಿ ಸಿಲ್ಲ. ಹಂಪ್ಸ್ ಇರುವೆಡೆ ಸೂಚನಾ ಫಲಕವನ್ನೂ ಅಳವಡಿಸಿಲ್ಲ. ಉಬ್ಬುಗಳಿಗೆ ಬಣ್ಣವನ್ನೂ ಹಚ್ಚದಿರುವುದರಿಂದ ದ್ವಿಚಕ್ರ ವಾಹನಗಳ ಅಪಘಾತ ಹೆಚ್ಚಾಗಿದೆ ಎಂದು ಎಂದು ದೂರಿದರು.

ಬಳಿಕ ಮಾತನಾಡಿದ ಶಾಸಕರು, ಕೆಆರ್ ಡಿಸಿಎಲ್‍ನಿಂದ ಅಭಿವೃದ್ಧಿಯಾದ ಈ ರಸ್ತೆಯಲ್ಲಿ ಹಲವು ಗ್ರಾಮಗಳ ಬಳಿ ಇನ್ನೂ ಹತ್ತು ಹಲವು ಕೆಲಸಗಳ ಬಾಕಿಯಾಗಿ ಸಮಸ್ಯೆಗಳಾಗುತ್ತಿವೆ. ರಾಮ ನಾಥಪುರ ದಿಂದ ಮಲ್ಲಾಪುರವರೆಗಿನ 12 ಕಿ.ಮೀ. ರಸ್ತೆಯಲ್ಲಿ ಸಮಸ್ಯೆಗಳಿವೆ. ಮಲ್ಲಿರಾಜಪಟ್ಟಣ, ಗಂಗೂರು, ರುದ್ರ ಪಟ್ಟಣ ಕ್ರಾಸ್, ರಾಗಿಮರೂರು, ಮಲ್ಲಾ ಪುರದಲ್ಲಿ ಗ್ರಾಮದ ಹೆಸರು ಮತ್ತಿತರ ಮಾಹಿತಿಗಳ ಫಲಕ ಅಳವಡಿಸಬೇಕಿದೆ. ರಸ್ತೆ ಉಬ್ಬು ದೂರದಿಂದಲೇ ಗೋಚರಿಸು ವಂತೆ ಬಿಳಿ ಬಣ್ಣ ಬಳಿಸಿರಿ. ರಾಗಿಮರೂರು ಕೆರೆ ಏರಿ ಮೇಲೆ ಕ್ರಾಸಿಂಗ್ ಸಿಗ್ನಲ್ ಹಾಕಿಸಿ. ಗ್ರಾಮಗಳಿರುವೆಡೆ ರಸ್ತೆಗಳ ಎರಡೂ ಬದಿ ಚರಂಡಿ, ಎಚ್ಚರಿಕೆಯ ಸಿಗ್ನಲ್ ದೀಪ ಅಳವಡಿಸಿ. ಈ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಎಂದು ಅಧಿಕಾರಿ ಗಳಿಗೆ ತಾಕೀತು ಮಾಡಿದರು.

ಗಂಗೂರು ಹ್ಯಾಂಡ್‍ಪೆÇೀಸ್ಟ್‍ನಲ್ಲಿ ಹೈಮಾಸ್ಟ್ ದೀಪ ಅಳವಡಿಸಿ ವೃತ್ತ ಅಭಿವೃದ್ಧಿಪಡಿಸ ಬೇಕು. ಮಲ್ಲರಾಜಪಟ್ಟಣ ವೃತ್ತವನ್ನೂ ಅಭಿವೃದ್ಧಿಪಡಿಸಬೇಕು ಎಂದರು.

ಅಧಿಕಾರಿಗಳ ಭರವಸೆ: ರಸ್ತೆ ಡಾಂಬರೀ ಕರಣವಾಗದೇ ಬಾಕಿಯಾಗಿರುವ ಗ್ರಾಮ ಗಳಲ್ಲಿ ರಸ್ತೆಗಳ ಎರಡೂ ಬದಿ ಡ್ರೈೈನೇಜ್, ಸಿಗ್ನಲ್ ಲೈಟ್ಸ್, ಬಸ್ ಬೇ ಮತ್ತು ರಸ್ತೆ ಅಗಲೀ ಕರಣ ಮಾಡಿಸಿಕೊಡುವುದಾಗಿ ಕೆಆರ್‍ಡಿಸಿ ಎಲ್‍ನ ಮಂಜುನಾಥ್, ಇಂಜಿನಿಯರ್ ರಘುಕುಮಾರ್, ಡಿಬಿಎಲ್ ಕಂಪನಿ ಮುಖ್ಯಸ್ಥ ಮುಖೇಶ್ ಭರವಸೆ ನೀಡಿದರು.

ಈ ಸಂದರ್ಭ ದೊಡ್ಡಮಗ್ಗೆ ರಂಗ ಸ್ವಾಮಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಸವಾ ಪಟ್ಟಣದ ಜೆ.ನಾಗರಾಜ, ಗ್ರಾಪಂ ಅಧ್ಯಕ್ಷ ಕರೀಗೌಡ, ಸದಸ್ಯರಾದ ದಿವಾ ಕರ್, ದ್ಯಾವಯ್ಯ, ಶಿವಯ್ಯ, ನೀರು ಬಳಕೆ ದಾರರ ಸಂಘದ ಅಧ್ಯಕ್ಷ ಚೌಡೇಗೌಡ, ಚಿಂಕ್ಕಣ್ಣಶೆಟ್ಟಿ, ಎಂ.ಹೆಚ್. ಕೃಷ್ಣಮೂರ್ತಿ, ಹನ್ಯಾಳು ಮಂಜುನಾಥ್, ಕೋಟವಾಳು ವಿರೂಪಾಕ್ಷ, ತಾಪಂ ಮಾಜಿ ಸದಸ್ಯ ಸಂಜೀವೇಗೌಡ ಮತ್ತಿತರರಿದ್ದರು.

 

 

Translate »