ವಿರಾಜಪೇಟೆ: ಸವಿತಾ ಸಮಾಜದ ಬಾಂಧವರು ಕಳೆದ ಮೂರು ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿರುವ ಕ್ರಿಕೆಟ್ ಪಂದ್ಯಾಟ ಉತ್ತಮ ಕಾರ್ಯ, ಅದರೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವಂತಾಗಬೇಕು ಎಂದು ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‍ನ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಹೇಳಿದರು. ತಾಲೂಕು ಸವಿತಾ ಸಮಾಜದ ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿ ವತಿಯಿಂದ ಸ್ಥಳೀಯ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸವಿತಾ ಸಮಾಜ ಬಾಂಧವರಿಗಾಗಿ ಆಯೋಜಿಸ ಲಾಗಿದ್ದ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಧು ದೇವಯ್ಯ,…
ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳು ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಸಂವಿಧಾನವು ಒಂದು ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ
April 30, 2019ಕುಶಾಲನಗರ: ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಜ್ಞಾನವನ್ನು ಒಂದು ಶಕ್ತಿಯನ್ನಾಗಿಸಿಕೊಳ್ಳುವುದು ಹೇಗೆಂಬುದನ್ನು ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‍ರವರ ಜನ್ಮ ದಿನಾಚರಣೆ ಮನುಕುಲ ಇರುವವರೆಗೂ ಪ್ರಪಂಚದಾದ್ಯಂತ ಬಹು ಸಡಗರದಿಂದ ಜರುಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜಗನ್ನಾಥ್ ಕೆ. ಡಾಂಗೆ ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋ ತ್ತರ ಕೇಂದ್ರ ಚಿಕ್ಕ ಅಳುವಾರ, ಇಲ್ಲಿನ ವಿಜ್ಞಾನ ಸಂಕೀರ್ಣದಲ್ಲಿ ಸೋಮವಾರ ಜರುಗಿದ ಡಾ.ಬಿ.ಆರ್.ಅಂಬೇಡ್ಕರ್ 128ನೇ ಜಯಂತ್ಯೋತ್ಸವದ ಅಂಗವಾಗಿ ಸಾಮಾಜಿಕ ಬದಲಾವಣೆಯಲ್ಲಿ…
ಕೊಡಗಲ್ಲಿ ಮತ್ತೆ ಮಳೆ ಗಂಡಾಂತರ?
April 26, 2019ಮಡಿಕೇರಿ: ಕೊಡಗು ಮತ್ತು ನೆರೆಯ ಕೇರಳ ರಾಜ್ಯದಲ್ಲಿ ಈ ವರ್ಷವೂ ಭಾರೀ ಮಳೆ ಸುರಿಯುವುದರೊಂದಿಗೆ ಕಳೆದ ಬಾರಿಯ ಪ್ರಕೃತಿ ವಿಕೋಪ ಮರು ಕಳಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಭಾರತೀಯ ಭೂ ವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ ಮಾಜಿ ಉಪ ಮಹಾ ನಿರ್ದೇಶಕ ಡಾ.ಹೆಚ್.ಎಸ್.ಎಂ.ಪ್ರಕಾಶ್ ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿರುವ ಡಿಜಿವರ್ಡ್ ನ್ಯೂಸ್ ನೆಟ್‍ವರ್ಕ್‍ಗೆ ನೀಡಿರುವ ಸಂದರ್ಶನದಲ್ಲಿ ಜನರಲ್ಲಿನ ಪ್ರಕೃತಿ ವಿಕೋಪದ ಆತಂಕಗಳ ಕುರಿತು ಅವರು ವಿಶ್ಲೇಷಿಸಿದ್ದಾರೆ. ಹವಾಯ್ ಮತ್ತು ಮಾರಿಷಸ್‍ನ ಪೋರ್‍ಮೆಸಾ ದಲ್ಲಿನ ಜ್ವಾಲಾಮುಖಿ ಸ್ಫೋಟದಿಂದ ತೀವ್ರ ತರವಾದ ದಟ್ಟ ಮೋಡಗಳು…
ಮುಗಿಯಿತು ಚುನಾವಣೆ; ಶುರುವಾಗಿದೆ ಗೆಲುವಿನ ಲೆಕ್ಕಾಚಾರ
April 25, 2019ಮಡಿಕೇರಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ದಾರರು ನೀಡಿರುವ ಮತದಾನದ ತೀರ್ಪು ಮತಯಂತ್ರಗಳಲ್ಲಿ ಭದ್ರವಾಗಿರುವ ಬೆನ್ನಲ್ಲೇ ವಿಜೇತ ಅಭ್ಯರ್ಥಿ ಯಾರಾಗಬಹುದೆನ್ನುವ ಲೆಕ್ಕಾಚಾರಗಳು ಗರಿ ಗೆದರಲಾರಂಭಿಸಿದೆ. ಈ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ನಡುವೆ ನೇರಾನೇರ ಹಣಾಹಣಿ ನಡೆದಿ ರುವುದರಿಂದ, ಇವರಿಬ್ಬರಲ್ಲಿ ವಿಜಯ ಮಾಲೆ ಯಾರ ಕೊರಳಿಗೆ ಬೀಳಬಹುದೆ ನ್ನುವ ವಿಶ್ಲೇಷಣೆಗಳು ಜಿಲ್ಲೆಯಲ್ಲಿ ನಡೆ ಯುತ್ತಿದೆ. ಜಿಲ್ಲೆಯಲ್ಲಿ 4,40,730 ಮತ ದಾರರಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ…
ಕನ್ನಡ ಭಾಷೆ ಬೆಳವಣಿಗೆಗೆ ಡಾ.ರಾಜ್‍ಕುಮಾರ್ ಕೊಡುಗೆ ಅಪಾರಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅಭಿಮತ
April 25, 2019ಮಡಿಕೇರಿ: ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗುವಂತಾಗಲು ಗೋಕಾಕ್ ಚಳುವಳಿ ಪ್ರಮುಖವಾಗಿದ್ದು, ಕನ್ನಡ ಭಾಷೆ ಬೆಳವಣಿಗೆಗೆ ಡಾ.ರಾಜ್ ಕುಮಾರ್ ಅವರ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ನಡೆದ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗೋಕಾಕ್ ಚಳುವಳಿಯಲ್ಲಿ ಸಕ್ರಿಯ ವಾಗಿ…
ಸಿದ್ದಾಪುರದಲ್ಲಿ ಭಾರಿ ಗಾಳಿ-ಮಳೆ ಮನೆಗಳಿಗೆ ಹಾನಿ, ಮಹಿಳೆಗೆ ಗಾಯ
April 25, 2019ಸಿದ್ದಾಪುರ: ಸಿದ್ದಾಪುರ ವ್ಯಾಪ್ತೀಯಲ್ಲಿ ಸುರಿದ ಭಾರೀ ಗಾಳಿ, ಮಳೆಗೆ ಮೂರು ಮನೆಗಳು ಸಂಪೂರ್ಣ ಹಾನಿಯಾಗಿದ್ದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಹಲವರು ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಮೈಸೂರು ರಸ್ತೆಯಲ್ಲಿ ನಡೆದಿದೆ. ಮಂಗವಾರ ಸಂಜೆ ಮೋಡ ಕವಿದ ವಾತಾವರಣದೊಂದಿಗೆ ರಾತ್ರಿ ದಿಢೀರನೆ ಸುರಿದ ಧಾರಾಕಾರ ಗಾಳಿ ಮಳೆಗೆ ಮೈಸೂರು ರಸ್ತೆಯ ಸುಜಯ್ ಎಂಬವರಿಗೆ ಸೇರಿದ ಕಾರ್ಮಿಕರ ವಾಸದ ಮನೆಯ ಮೇಲ್ಚಾವಣಿ ಹಾರಿಹೋಗಿದ್ದು ಮೂರು ಕುಟುಂಬಗಳು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಪ್ರಜೀದಾ ಎಂಬ ಮಹಿಳೆಗೆ ಮನೆಯ ಮೇಲ್ಛಾವಣಿಯ ಸೀಟು…
ಕಳೆದ ವರ್ಷದ ಭಾರೀ ಮಳೆ, ನೆರೆ ಹಾವಳಿ ಕರಾಳ ಛಾಯೆ
April 24, 2019ಈ ಬಾರಿ ಅಗತ್ಯ ಮುನ್ನೆಚ್ಚರಿಕಾ ಕ್ರಮಕ್ಕೆ ಸಾರ್ವಜನಿಕರ ಮನವಿ ಅಪರ ಜಿಲ್ಲಾಧಿಕಾರಿಗೆ ಮಳೆಗಾಲದ ಎಚ್ಚರಿಕಾ ಮಾಹಿತಿ ನೀಡಿದ ನಾಗರಿಕರು ಮಡಿಕೇರಿ: ಕಳೆದ ವರ್ಷ ಸುರಿದ ಮಹಾಮಳೆಯ ಮಾರಣಹೋಮ ಮಾಸುವ ಮುನ್ನವೇ ಮತ್ತೊಂದು ಮಳೆಗಾಲ ಸಮೀ ಪಿಸಿದೆ. ಮುಂಗಾರು ಆರಂಭಕ್ಕೆ ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ಬೆಟ್ಟ, ಗುಡ್ಡಗಳಿಂದ ಆವೃತವಾಗಿರುವ ಮಡಿಕೇರಿ ನಗರದಲ್ಲಿ ಆತಂಕದ ವಾತಾ ವರಣ ಮನೆ ಮಾಡಿದೆ. ಈ ಬಾರಿಯೂ ಅತೀ ಮಳೆಯಾಗಿ ಅನಾಹುತಗಳು ಸಂಭವಿಸಬಹುದೆನ್ನುವ ಭಯವನ್ನು ವ್ಯಕ್ತಪಡಿಸಿರುವ ಸಾರ್ವಜನಿಕರು, ತಕ್ಷಣ ಜಿಲ್ಲಾಡಳಿತ ಹಾಗೂ…
ಹಿರಿಯ ನಾಗರಿಕರಿಗಾಗಿ ನಾಳೆ ವಿಶೇಷ ಲೋಕ ಅದಾಲತ್
April 24, 2019ಮಡಿಕೇರಿ: ನ್ಯಾಯಾಲಯದ ವಿವಿಧ ಹಂತದಲ್ಲಿರುವ ಹಿರಿಯ ನಾಗರಿ ಕರ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಏ.25 ರಂದು ವಿಶೇಷ ಲೋಕ ಅದಾಲತ್ ನಡೆಯಲಿದ್ದು, ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಡಿ.ಪವನೇಶ್ ಕೋರಿದ್ದಾರೆ. ನಗರದ ಜಿಲ್ಲಾ ನ್ಯಾಯಾಲಯ ಸಭಾಂ ಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಹಿರಿಯ ನಾಗರಿಕರು ನ್ಯಾಯಾಲ ಯಕ್ಕೆ ಅಲೆದಾಡುವುದನ್ನು ತಪ್ಪಿಸುವ…
ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಕೊಡಗಿನ ಮೂಲ ಜನಾಂಗದ ಕುಟುಂಬಗಳಿಗೆ ಕಾಲ್ಚೆಂಡು ಪಂದ್ಯಾವಳಿ
April 24, 2019ವೀರಾಜಪೇಟೆ: ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಂದ ಕೊಡಗಿನ ಜಮ್ಮಾ ಮನೆ ಹೆಸರು ಹೊಂದಿರುವ ಎ¯್ಲ ಮೂಲ ಜನಾಂಗದವರ ಕುಟುಂಬಗಳ ನಡುವೆ 5 ಆಟಗಾರರ ಕಾಲ್ಚೆಂಡು ಪಂದ್ಯಾವಳಿಯನ್ನು ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೇ 7 ರಿಂದ 14 ರವರೆಗೆ ಆಯೋಜಿಸಲಾಗಿದೆ ಎಂದು ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಮೂಕೊಂಡ ಶಶಿಸುಬ್ರಮಣಿ ತಿಳಿಸಿದರು. ವಿರಾಜಪೇಟೆ ಬಳಿಯ ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಕರೆದಿದ್ದ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಶಿ ಸುಬ್ರಮಮಣಿ ಅವರು ಕೊಡಗಿನ ಜಮ್ಮಾ ಎಲ್ಲ ಮೂಲ ಜನಾಂಗದವರ ಒಗ್ಗಟ್ಟು,…
ಕಿರಿಯರ ಮಟ್ಟದ ಬ್ಯಾಡ್ಮಿಂಟನ್ ಸಿಂಗಲ್ಸ್‍ನಲ್ಲಿ ಕೊಡಗು ತಂಡಕ್ಕೆ ಪ್ರಥಮ ಬಹುಮಾನ
April 24, 2019ಗೋಣಿಕೊಪ್ಪಲು, ಏ.23- ಮೈಸೂರು ಕೊಡವ ಸಮಾಜ ಕಲ್ಚರಲ್ ಆಂಡ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಮೈಸೂರು ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಆಯೋ ಜಿಸಿದ್ದ ಕಿರಿಯರ ಜಿಲ್ಲಾ ಮಟ್ಟದ ಬ್ಯಾಡ್ಮಿಂ ಟನ್ ಸಿಂಗಲ್ಸ್ ಟೂರ್ನಿಯಲ್ಲಿ ಕೊಡಗು ತಂಡಕ್ಕೆ 5 ಬಹುಮಾನ ಲಭಿಸಿದೆ. ಕೊಡವ ಸಮಾಜ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಕೂರ್ಗ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿ ಯಿಂದ 11 ಸ್ಪರ್ಧಿಗಳು ಪಾಲ್ಗೊಂಡು, ಐವರು ಕ್ರೀಡಾಪಟುಗಳು 7 ಬಹುಮಾನ ಗಳಿಸಿದ್ದಾರೆ. ಬೊಪ್ಪಂಡ ದಿಯಾ ಭೀಮಯ್ಯ ಹಾಗೂ ಆರಾಧನಾ ಬಾಲಚಂದ್ರ ತಲಾ ಎರಡು ಬಹುಮಾನ…