ಕನ್ನಡ ಭಾಷೆ ಬೆಳವಣಿಗೆಗೆ ಡಾ.ರಾಜ್‍ಕುಮಾರ್ ಕೊಡುಗೆ ಅಪಾರಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅಭಿಮತ
ಕೊಡಗು

ಕನ್ನಡ ಭಾಷೆ ಬೆಳವಣಿಗೆಗೆ ಡಾ.ರಾಜ್‍ಕುಮಾರ್ ಕೊಡುಗೆ ಅಪಾರಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅಭಿಮತ

April 25, 2019

ಮಡಿಕೇರಿ: ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗುವಂತಾಗಲು ಗೋಕಾಕ್ ಚಳುವಳಿ ಪ್ರಮುಖವಾಗಿದ್ದು, ಕನ್ನಡ ಭಾಷೆ ಬೆಳವಣಿಗೆಗೆ ಡಾ.ರಾಜ್ ಕುಮಾರ್ ಅವರ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ನಡೆದ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗೋಕಾಕ್ ಚಳುವಳಿಯಲ್ಲಿ ಸಕ್ರಿಯ ವಾಗಿ ತೊಡಗಿಸಿಕೊಂಡು ಗೋಕಾಕ್ ವರದಿ ಅನುಷ್ಠಾನಕ್ಕೆ ಡಾ.ರಾಜ್ ಕುಮಾರ್ ಅವರು ಶ್ರಮಿಸಿದ್ದರು ಎಂದು ಲೋಕೇಶ್ ಸಾಗರ್ ಅವರು ಸ್ಮರಿಸಿದರು.

ಡಾ.ರಾಜ್‍ಕುಮಾರ್ ಅವರು ಸಾಮಾನ್ಯ ರಲ್ಲಿ ಸಾಮಾನ್ಯರಂತೆ ಬದುಕು ನಡೆಸಿದ್ದ ಅಪರೂಪದ ವ್ಯಕ್ತಿ. ನಟನೆ, ಅಭಿನಯ, ಗಾಯನ, ಯೋಗಾಸನ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದ ಅಪರೂ ಪದ ಮೇರು ನಟ ಎಂದು ಅವರು ಬಣ್ಣಿ ಸಿದರು. ಡಾ.ರಾಜ್‍ಕುಮಾರ್ ಅವರು ಕಲಾ ವಿದರಾಗಿ ಅಪಾರ ಜನಪ್ರಿಯತೆ ಪಡೆದ ಶ್ರೇಷ್ಠ ನಟ ಸಾರ್ವಭೌಮ. ವೃತ್ತಿ ರಂಗ ಭೂಮಿ ಹಿನ್ನೆಲೆಯಿಂದ ಬಂದ ಅವರು ಕೇವಲ ಮೂರನೇ ತರಗತಿ ಅಧ್ಯಯನ ಮಾಡಿ ಶಾಸ್ತ್ರೀಯ ಸಂಗೀತ ಜ್ಞಾನದ ಪಾಂಡಿ ತ್ಯವನ್ನು ಹೊಂದಿದ್ದರು. ತಮ್ಮ ನಟನೆ ಮೂಲಕ ಚಲನಚಿತ್ರ ಗೀತೆಗಳು, ಭಕ್ತಿ, ಭಾವ ಗೀತೆಗಳನ್ನು ಹಾಡುವ ಮೂಲಕ ಕನ್ನಡ ಭಾಷೆಗೆ ಸೊಬಗು ತಂದಿದ್ದರು ಎಂದು ಕಸಾಪ ಜಿಲ್ಲಾ ಅಧ್ಯಕ್ಷರು ಹೇಳಿದರು.

1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ನಟರಾಗಿ ಅಭಿನಯಿಸಿದ ಡಾ.ರಾಜ್ ಕುಮಾರ್ ಅವರು ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಬಂಗಾರದ ಮನುಷ್ಯ, ಭಾಗ್ಯ ವಂತರು, ಜೀವನ ಚೈತ್ರ, ಒಡ ಹುಟ್ಟಿದ ವರು, ಕಸ್ತೂರಿ ನಿವಾಸ ಮತ್ತಿತರ ಚಿತ್ರಗಳು ನೋಡುಗರನ್ನು ಮತೊಮ್ಮೆ ನೋಡುವಂತೆ ಮಾಡುತ್ತವೆ ಎಂದು ಅವರು ತಿಳಿಸಿದರು.

ಡಾ.ರಾಜ್‍ಕುಮಾರ್ ಅವರು ಏಕಾಗ್ರತೆ, ಸಮಯ ಪ್ರಜ್ಞೆಯಿಂದ ಸಿನಿಮಾ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದ ಸಾಧನೆ ಅಪಾರ ಎಂದು ಬಣ್ಣಿಸಿದರು. ಜಿಪಂ ಉಪಕಾರ್ಯ ದರ್ಶಿ ಗುಡೂರು ಭೀಮಸೇನ ಮಾತನಾಡಿ, ಡಾ.ರಾಜ್‍ಕುಮಾರ್ ಅಭಿನಯದ ಸತ್ಯ ಹರಿಶ್ಚಂದ್ರ, ಕವಿರತ್ನ ಕಾಳಿದಾಸ ಮತ್ತಿತರ ಚಿತ್ರಗಳು ಇಂದಿಗೂ ಜನಮೆಚ್ಚುಗೆಗೆ ಪಾತ್ರ ವಾಗಿವೆ. ಇವರ ಕನ್ನಡ ಅಭಿಮಾನ, ಭಾಷೆ ಬೆಳವಣಿಗೆಗೆ ಕೊಡುಗೆ ಅಪಾರ ಎಂದು ಅವರು ಹೇಳಿದರು.

ಡಾ.ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಹೀಗೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಬಂದಿವೆ ಎಂದು ತಿಳಿಸಿದರು.
ಜಿಪಂ ಸಿಇಓ ಕೆ.ಲಕ್ಷ್ಮಿಪ್ರಿಯಾ ಮಾತ ನಾಡಿ, ಹೊರ ರಾಜ್ಯದಿಂದ ಬಂದವರಿಗೆ ಕನ್ನಡ ಭಾಷೆ ಕಲಿಯುವಂತಾಗಲು ಡಾ.ರಾಜ್‍ಕುಮಾರ್ ಅವರ ಸಿನಿಮಾಗಳು ಪ್ರೇರಣೆಯಾಗಿವೆ ಎಂದು ಅವರು ಅಭಿ ಪ್ರಾಯ ವ್ಯಕ್ತಪಡಿಸಿದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ನಂದ, ಜಿಲ್ಲಾ ಖಜಾನಾಧಿಕಾರಿ ಸತೀಶ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್ ಇತರರು ಇದ್ದರು.

ಕಾರ್ಯಕ್ರಮ ಆರಂಭದಲ್ಲಿ ಡಾ.ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Translate »