ಮುಗಿಯಿತು ಚುನಾವಣೆ; ಶುರುವಾಗಿದೆ ಗೆಲುವಿನ ಲೆಕ್ಕಾಚಾರ
ಕೊಡಗು

ಮುಗಿಯಿತು ಚುನಾವಣೆ; ಶುರುವಾಗಿದೆ ಗೆಲುವಿನ ಲೆಕ್ಕಾಚಾರ

April 25, 2019

ಮಡಿಕೇರಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ದಾರರು ನೀಡಿರುವ ಮತದಾನದ ತೀರ್ಪು ಮತಯಂತ್ರಗಳಲ್ಲಿ ಭದ್ರವಾಗಿರುವ ಬೆನ್ನಲ್ಲೇ ವಿಜೇತ ಅಭ್ಯರ್ಥಿ ಯಾರಾಗಬಹುದೆನ್ನುವ ಲೆಕ್ಕಾಚಾರಗಳು ಗರಿ ಗೆದರಲಾರಂಭಿಸಿದೆ.

ಈ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ನಡುವೆ ನೇರಾನೇರ ಹಣಾಹಣಿ ನಡೆದಿ ರುವುದರಿಂದ, ಇವರಿಬ್ಬರಲ್ಲಿ ವಿಜಯ ಮಾಲೆ ಯಾರ ಕೊರಳಿಗೆ ಬೀಳಬಹುದೆ ನ್ನುವ ವಿಶ್ಲೇಷಣೆಗಳು ಜಿಲ್ಲೆಯಲ್ಲಿ ನಡೆ ಯುತ್ತಿದೆ. ಜಿಲ್ಲೆಯಲ್ಲಿ 4,40,730 ಮತ ದಾರರಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,21,157 ಮತ ದಾರರು ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ 2,19,573 ಮತದಾ ರರಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಶೇ. 76.55 ರಷ್ಟು ಮತ್ತು ವೀರಾಜಪೇಟೆ ಕ್ಷೇತ್ರದಲ್ಲಿ ಶೇ.72.52 ರಷ್ಟು ಮತದಾನವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಹರಿದು ಬಂದ ಮತದಾರನ ಒಲವು ಯಾರತ್ತ ತಿರುಗಿದೆ ಎನ್ನುವುದನ್ನು ಸ್ಪಷ್ಟಪಡಿಸಿ ಕೊಳ್ಳಲು ಮೇ 23ರವರೆಗೆ ಕಾಯುವುದು ಅನಿವಾರ್ಯವಾಗಿದೆ.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗ ಳಲ್ಲಿ ಬಿಜೆಪಿ ಶಾಸಕರುಗಳೇ ಇದ್ದು, ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೊಟೆ ಎನ್ನುವ ಹಣೆಪಟ್ಟ್ಟಿಯನ್ನು ಹೊತ್ತಿದೆ. ಅದಕ್ಕೆ ತಕ್ಕಂತೆ ಬಿಜೆಪಿ ಪ್ರಮುಖರು ಈ ಬಾರಿ ಲೋಕ ಸಭೆಯಲ್ಲಿ ‘ಬಿಜೆಪಿಯೇ ಗೆಲುವು ಸಾಧಿ ಸುತ್ತದೆ’ ಎನ್ನುವ ವಿಶ್ವಾಸ ವ್ಯಕ್ತಪಡಿಸು ತ್ತಿದ್ದಾರೆ. ಅಭ್ಯರ್ಥಿಯ ಹೆಸರನ್ನು ಅಷ್ಟಾಗಿ ಪ್ರಸ್ತಾಪಿಸದೆ ಮೋದಿ, ತಾವರೆ, ದೇಶದ ಭದ್ರತೆಯ ಹೆಸರಿನಲ್ಲಿ ಪ್ರತಾಪ್‍ಸಿಂಹ ಪರ ಮತಯಾಚಿಸಿರುವ ಬಿಜೆಪಿ ತಂತ್ರಗಾರಿಕೆ ಫಲ ನೀಡುವುದೇ ಅಥವಾ ಮೈತ್ರಿ ಮಂತ್ರ ಫಲ ನೀಡುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟ ಅಹಿಂದ ಮತಗಳ ಮೇಲೆ ಹೆಚ್ಚು ವಿಶ್ವಾಸ ವಿಟ್ಟುಕೊಂಡಿದ್ದು, ಪ್ರತಾಪ್‍ಸಿಂಹ ಅವರ ವೈಫಲ್ಯಗಳ ಲಾಭವೂ ನಮಗೆ ಆಗಲಿದೆ ಎಂದು ಮೈತ್ರಿ ಪಕ್ಷಗಳ ನಾಯಕರು ಬೀಗುತ್ತಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಬಿಜೆಪಿಗೆ ಮತ ಕೊರತೆ ಎದುರಾಗಬಹು ದೆನ್ನುವ ಆತಂಕದಲ್ಲಿರುವ ನಾಯಕರು ಆ ಭಾಗದಲ್ಲಿ ಕಳೆದುಕೊಂಡ ಮತಗಳನ್ನು ಸರಿದೂಗಿಸುವ ಶಕ್ತಿ ಕೊಡಗಿನಲ್ಲಿದೆ ಎನ್ನುವ ಧೈರ್ಯವನ್ನೂ ವ್ಯಕ್ತಪಡಿಸು ತ್ತಾರೆ. ಅಭ್ಯರ್ಥಿ ಪ್ರತಾಪ್‍ಸಿಂಹ ಕೂಡ ಈ ಚುನಾವಣೆಯಲ್ಲಿ ಒಂದಷ್ಟು ಹೆಚ್ಚಿನ ಸಮಯವನ್ನು ಕೊಡಗಿಗೆ ಮೀಸಲಿಟ್ಟಿದ್ದು ದಲ್ಲದೆ, ಮತದಾನದ ದಿನವೂ ಮಡಿ ಕೆÉೀರಿಯ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದ್ದರು.

ಬಿಜೆಪಿಯ ಭದ್ರಕೋಟೆಯನ್ನು ಜೆಡಿಎಸ್ ನೊಂದಿಗಿನ ಮೈತ್ರಿಯ ಮೂಲಕ ಒಡೆದು ವಿಜಯ ಪತಾಕೆ ಹಾರಿಸುವ ಪ್ರಯತ್ನ ಕಾಂಗ್ರೆಸ್‍ನಿಂದಲು ನಡೆದಿದೆ. ಇದಕ್ಕೆ ಆರಂ ಭಿಕ ಹಂತದಲ್ಲಿ ಜೆಡಿಎಸ್‍ನೊಳಗಿನ ಆಂತರಿಕ ಭಿನ್ನಮತ ತೊಡಕಾಗಿ ಕಂಡು ಬಂದಿತ್ತಾದರು, ಆ ನಂತರದ ದಿನಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆದಿದೆ ಎಂದು ಮುಖಂಡರೂ ಹೇಳಿಕೊಳ್ಳು ತ್ತಿದ್ದು, ಇದು ಎಷ್ಟರ ಮಟ್ಟಿಗೆ ಮತವಾಗಿ ಪರಿವರ್ತನೆಯಾಗಿದೆ ಎನ್ನುವುದರ ಮೇಲೆ ವಿಜಯಶಂಕರ್ ಭವಿಷ್ಯ ನಿರ್ಧಾರವಾ ಗಲಿದೆ. ಈ ಎಲ್ಲಾ ರಾಜಕೀಯ ಬೆಳ ವಣಿಗೆಗಳ ನಡುವೆ ಪ್ರಸ್ತಾಪಿಸಲ್ಪಟ್ಟಿರುವ ‘ಮೋದಿ ಅಲೆ’ ತಳಮಟ್ಟದಲ್ಲಿ ನಿಜಕ್ಕೂ ಕೆಲಸ ಮಾಡಿದೆಯೇ ಅಥವಾ ಇದೊಂದು ಕೇವಲ ಭ್ರಮೆಯೇ ಎನ್ನುವುದು ಕೂಡ ಮೇ 23 ರಂದು ಸ್ಪಷ್ಟವಾಗಲಿದೆ.

ಕ್ಷೇತ್ರವಾರು ಮತದಾನ: ಕೊಡಗು ಜಿಲ್ಲೆಯಲ್ಲಿ ಅಧಿಕ ಮತದಾನವಾಗಿದ್ದು, ಇದು ಬಿಜೆಪಿಗೆ ಹೆಚ್ಚು ಲಾಭ ತಂದು ಕೊಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಶೇ. 69.25ರಷ್ಟು ಮತದಾನವಾಗಿದ್ದು, ಒಟ್ಟಾರೆ 13,11,930 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 6,64,712 ಮಂದಿ ಪುರುಷರು, 6,47, 203 ಮಂದಿ ಮಹಿಳೆಯರಾಗಿದ್ದಾರೆ.

ಇನ್ನು ಮಡಿಕೇರಿಯಲ್ಲಿ 1,69,296 ಮಂದಿ ಮತ ಚಲಾಯಿಸಿದ್ದರೆ, ಇವರಲ್ಲಿ 83,781 ಮಂದಿ ಪುರುಷರು ಹಾಗೂ 85,513 ಮಂದಿ ಮಹಿಳೆಯರಾಗಿದ್ದು, ಇಲ್ಲಿ ಶೇ. 76.55 ರಷ್ಟು ಮತದಾನವಾಗಿ ಮೊದಲ ಸ್ಥಾನದಲ್ಲಿದೆ.

ವಿರಾಜಪೇಟೆಯಲ್ಲಿ ಒಟ್ಟು 1,59,227 ಮಂದಿ ಮತದಾನ ಮಾಡಿದ್ದು, ಇವರಲ್ಲಿ 79,753 ಮಂದಿ ಪುರುಷರು ಹಾಗೂ 79,474 ಮಂದಿ ಮಹಿಳೆಯರಾಗಿದ್ದು, ಶೇ 72.52 ರಷ್ಟು ಮತದಾನವಾಗಿದೆ.

ಪಿರಿಯಾಪಟ್ಟಣದಲ್ಲಿ ಒಟ್ಟು 1,44,812 ರಷ್ಟು ಮಂದಿ ತಮ್ಮ ಹಕ್ಕು ಚಲಾ ಯಿಸಿದ್ದು, ಇವರಲ್ಲಿ ಮಂದಿ 74,926 ಪುರು ಷರು ಹಾಗೂ 69,886 ಮಹಿಳೆ ಯರಾಗಿದ್ದು, ಒಟ್ಟು 78.86 ರಷ್ಟು ಮತ ದಾನವಾಗಿದೆ.

ಹುಣಸೂರಿನಲ್ಲಿ ಒಟ್ಟು 1,75,284 ರಷ್ಟು ಮತದಾನವಾಗಿದ್ದು, ಇವರಲ್ಲಿ 90,103 ಮಂದಿ ಪುರುಷರು ಹಾಗೂ 85,181 ಮಂದಿ ಮಹಿಳೆಯರು. ಇಲ್ಲಿ ಒಟ್ಟು 77.24 ರಷ್ಟು ಮತದಾನವಾಗಿದೆ.

ಚಾಮುಂಡೇಶ್ವರಿಯಲ್ಲಿ 2,17,026 ರಷ್ಟು ಮತದಾನವಾಗಿದ್ದು, ಇವರಲ್ಲಿ 1,11,178 ಮಂದಿ ಪುರುಷರು ಮತ್ತು 1,05,848 ಮಹಿಳೆಯರು, ಒಟ್ಟು ಶೇ. 71.68 ರಷ್ಟು ಮತದಾನವಾಗಿದೆ.

ಕೃಷ್ಣರಾಜದಲ್ಲಿ 1,46,907 ರಷ್ಟು ಮತದಾನವಾಗಿದ್ದು, ಇವರಲ್ಲಿ 73788 ಮಂದಿ ಪುರುಷರು ಹಾಗೂ 73,119 ಮಹಿಳೆಯರಾಗಿದ್ದಾರೆ. ಒಟ್ಟು ಶೇ. 60.29 ರಷ್ಟು ಮತದಾನವಾಗಿದೆ.

ಚಾಮರಾಜದಲ್ಲಿ 1,39,809 ರಷ್ಟು ಮತದಾನವಾಗಿದ್ದು, ಇವರಲ್ಲಿ 71,320 ಮಂದಿ ಪುರುಷರು ಹಾಗೂ 68,488 ಮಂದಿ ಮಹಿಳೆಯರು, ಇಲ್ಲಿ ಒಟ್ಟು ಶೇ.59.93 ರಷ್ಟು ಮತದಾನವಾಗಿದೆ.

ಇನ್ನು ನರಸಿಂಹರಾಜದಲ್ಲಿ ಒಟ್ಟು 1,59,569 ರಷ್ಟು ಮತದಾನವಾಗಿದ್ದು, ಇವರಲ್ಲಿ 79,863 ಮಂದಿ ಮಹಿಳೆ ಯರು ಹಾಗೂ 79,694 ಮಂದಿ ಮಹಿಳೆಯರಾಗಿದ್ದು, ಒಟ್ಟು 60.60 ರಷ್ಟು ಮತದಾನವಾಗಿದೆ.

ಕ್ಷೇತ್ರದಲ್ಲಿ ಒಟ್ಟಾರೆ 18,94,372 ಮಂದಿ ಮತದಾರರಿದ್ದು, ಇವರಲ್ಲಿ 9,44,577 ಮಂದಿ ಪುರುಷರು ಹಾಗೂ 9,49,702 ಮಂದಿ ಮಹಿಳೆಯರಾಗಿದ್ದಾರೆ.

Translate »