ಮತಯಂತ್ರಗಳಿರುವ ಮೈಸೂರು ಮಹಾರಾಣಿ ವಾಣಿಜ್ಯ ಕಾಲೇಜಿನ ಸ್ಟ್ರಾಂಗ್ ರೂಂಗಳಿಗೆ ಭಾರೀ ಭದ್ರತೆ
ಮೈಸೂರು

ಮತಯಂತ್ರಗಳಿರುವ ಮೈಸೂರು ಮಹಾರಾಣಿ ವಾಣಿಜ್ಯ ಕಾಲೇಜಿನ ಸ್ಟ್ರಾಂಗ್ ರೂಂಗಳಿಗೆ ಭಾರೀ ಭದ್ರತೆ

April 20, 2019

ಮೈಸೂರು: ಮತಗಳು ದಾಖಲಾಗಿರುವ ಇವಿಎಂಗಳನ್ನು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಂ ಗಳಲ್ಲಿರಿಸಿ, ಭದ್ರಪಡಿಸಲಾಗಿದೆ.

ಗುರುವಾರ ನಡೆದ ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಳಕೆಯಾದ ಇವಿಎಂಗಳನ್ನು ರಾತ್ರಿಯೇ ಪೊಲೀಸ್ ಸರ್ಪ ಗಾವಲಿನಲ್ಲಿ ಟ್ರಕ್‍ಗಳಲ್ಲಿ ತಂದು ಇಲ್ಲಿ ಇರಿಸಲಾ ಗಿತ್ತು. ಸುರಕ್ಷತೆ ದೃಷ್ಟಿಯಿಂದ ಮಡಿಕೇರಿ ಮತ್ತು ವಿರಾಜ ಪೇಟೆ ವಿಧಾನಸಭಾ ಕ್ಷೇತ್ರಗಳ ಇವಿಎಂ ಗಳನ್ನು ಇಂದು ಬೆಳಿಗ್ಗೆ ಮೈಸೂರಿಗೆ ತಂದ ಸಹಾ ಯಕ ಚುನಾವಣಾಧಿಕಾರಿಗಳು, ಪೊಲೀಸ್ ಭದ್ರತೆ ಯೊಂದಿಗೆ ಇಲ್ಲಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಮೊದಲ ಮಹಡಿ ಯಲ್ಲಿ ವ್ಯವಸ್ಥೆ ಮಾಡಿರುವ ಸ್ಟ್ರಾಂಗ್ ರೂಂ ಗಳಲ್ಲಿಟ್ಟು ಕೊಠಡಿ ಬಾಗಿಲು ಬಂದ್ ಮಾಡಿ ಸೀಲ್ ಮಾಡಲಾಯಿತು. ಈ ಎಲ್ಲಾ ಪ್ರಕ್ರಿಯೆಯನ್ನು ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಸಿ, ಇವಿಎಂಗಳ ಸಂಬಂಧಿತ ದಾಖಲಾತಿಗಳನ್ನು ಸಹಾ ಯಕ ಚುನಾ ವಣಾಧಿಕಾರಿಗಳು, ಸ್ಟ್ರಾಂಗ್ ರೂಂ ರಕ್ಷಣಾ ಹೊಣೆ ಹೊತ್ತಿರುವ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ವೇಳೆ ಜಿಲ್ಲಾ ಚುನಾವಣಾಧಿ ಕಾರಿ ಅಭಿರಾಂ ಜಿ ಶಂಕರ್, ಉಪ ಚುನಾವಣಾಧಿ ಕಾರಿ ಜಿ.ಅನುರಾಧ, ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿ ಕೆ.ಜ್ಯೋತಿ, ಮೈಸೂರು ಮಹಾ ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ಹಾಜರಿದ್ದು, ಸ್ಟ್ರಾಂಗ್ ರೂಂ, ಎಣಿಕಾ ಕೇಂದ್ರ ಗಳ ನಿರ್ವಹಣೆಯನ್ನು ವೀಕ್ಷಿಸಿದರು. ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಇವಿಎಂ ಗಳನ್ನು ಟ್ರಕ್‍ಗಳಿಂದ ಇಳಿಸಿ ಸ್ಟ್ರಾಂಗ್‍ರೂಂಗೆ ಸಾಗಿಸುವ ಸಂದರ್ಭ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಉಪಸ್ಥಿತರಿದ್ದು, ಮತ ಯಂತ್ರಗಳ ಭದ್ರತೆ ಹಾಗೂ ನಿರ್ವಹಣೆ ಯನ್ನು ವೀಕ್ಷಿಸಿದರು. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಮೂರು (2 ಇವಿಎಂ ಮತ ಹಾಗೂ 1 ಅಂಚೆ ಮತದಾನದ ಟಪಾಲು) ಸ್ಟ್ರಾಂಗ್ ರೂಂಗಳನ್ನು ಕಾಲೇಜಿನ ನೆಲಮಹಡಿ, ಮೊದಲ ಹಾಗೂ ಎರಡನೇ ಮಹಡಿಯಲ್ಲಿ ವ್ಯವಸ್ಥೆ ಮಾಡಿ, ಅಲ್ಲಿ ಮಾರ್ಕ್ ಮಾಡಿರುವ ಬಾಕ್ಸ್ ಒಳಗೆ ಇಟ್ಟು ಕಿಟಕಿ-ಬಾಗಿಲುಗಳನ್ನು ಪ್ಲೈವುಡ್ ಶೀಟ್‍ನಿಂದ ಬಂದ್ ಮಾಡಿ, ಸೀಲ್ ಮಾಡಲಾಗಿದೆ. ಶಾರ್ಟ್ ಸಕ್ರ್ಯೂಟ್ ನಂತಹ ಕೃತ್ಯ ತಡೆಯಲು ಭದ್ರತಾ ಕೊಠಡಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಭಾರತ ಚುನಾವಣಾ ಆಯೋಗದ ಸ್ಟ್ರಾಂಗ್ ರೂಂ ನಿಯಮಾವಳಿಯನ್ವಯ ಜಿಲ್ಲಾ ಚುನಾವಣಾ ಧಿಕಾರಿಗಳು ಪ್ರತ್ಯೇಕ ಸುರಕ್ಷತಾ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಸ್ಟಾಂಗ್‍ರೂಂಗಳಿಗೆ 3 ಟೈರ್ ಸಿಸ್ಟಮ್ ಭದ್ರತೆಯನ್ನು ಒದಗಿಸಲಾಗಿದೆ. ಮೊದಲ ಹಂತದಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ತುಕಡಿ, 2ನೇ ಹಂತದಲ್ಲಿ ಸಶಸ್ತ್ರ ಮೀಸಲು ಪಡೆ ಹಾಗೂ 3ನೇ ಹಂತದಲ್ಲಿ ಸ್ಥಳೀಯ ಸಿವಿಲ್ ಪೊಲೀಸ್ ಸಿಬ್ಬಂದಿ ಯನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. ಕಟ್ಟಡದ ಎಲ್ಲಾ ಸ್ಟ್ರಾಂಗ್ ರೂಂಗಳು, ಮತ ಎಣಿಕಾ ಕೇಂದ್ರಗಳು, ಕಾರಿಡಾರ್, ಕಟ್ಟಡದ ಪ್ರವೇಶ ದ್ವಾರ, ಸುತ್ತಲಿನ ಹೊರ ಭಾಗ, ಪೋರ್ಟಿ ಕೋದಲ್ಲಿ 100ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ಕಟ್ಟೆಚ್ಚರ ವಹಿಸಲಾಗಿದೆ. ಕಾಲೇಜಿನ ಪ್ರವೇಶ ದ್ವಾರದಲ್ಲಿ ಮೆಟಲ್ ಡೋರ್ ಡಿಟೆಕ್ಟರ್ ಅಳವಡಿಸಿ ಪ್ರತಿಯೊಬ್ಬ ರನ್ನೂ ತಪಾಸಣೆ ಮಾಡ ಲಾಗುತ್ತಿದೆ. ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರನ್ನು ಹೊರತುಪಡಿಸಿ ಬೇರೆ ಯಾರೂ ಸ್ಟ್ರಾಂಗ್ ರೂಂ ಕಟ್ಟಡ ಪ್ರವೇಶಿಸಲು ಅವಕಾಶವಿಲ್ಲ. ವಿದ್ವಂಸಕ ಕೃತ್ಯ ನಿಗ್ರಹ ದಳ, ಶ್ವಾನ ದಳ ಸಿಬ್ಬಂದಿ ಸ್ಥಳದಲ್ಲಿದ್ದು, ನಿರಂತರ ತಪಾಸಣಾ ಕಾರ್ಯದಲ್ಲಿ ನಿರತರಾಗಿ ದ್ದಾರೆ. ಅಗ್ನಿ ಶಾಮಕ ದಳ, ಆಂಬುಲೆನ್ಸ್‍ಗಳು ಮೊಕ್ಕಾಂ ಹೂಡಿವೆ. ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತು ರಾಜ್ ಹಾಗೂ ಮೂವರು ಎಸಿಪಿಗಳೂ ಆಗಿಂದಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮೇ 23ರಂದು ಬೆಳಿಗ್ಗೆ 8 ಗಂಟೆಯಿಂದ ಮಹಾರಾಣಿ ಮಹಿಳಾ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕಾ ಕಾರ್ಯ ನಡೆಯಲಿದೆ.

ಮತ ಎಣಿಕೆ ಕೇಂದ್ರಗಳು
ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23ರಂದು ದೇಶಾದ್ಯಂತ ನಡೆಯಲಿದ್ದು, ಮೈಸೂರು-ಕೊಡಗು ಕ್ಷೇತ್ರದ ಮತ ಎಣಿಕೆ ಮೈಸೂರಿನ ಪಡುವಾರಹಳ್ಳಿ, ವಾಲ್ಮೀಕಿ ರಸ್ತೆಯಲ್ಲಿರುವ ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದೆ. ಮಂಡ್ಯ ಕ್ಷೇತ್ರದ ಮತ ಎಣಿಕೆಯು ಮಂಡ್ಯದ ಬಿ.ಎಂ. ರಸ್ತೆಯಲ್ಲಿರುವ ಸರ್ಕಾರಿ (ಸ್ವಾಯತ್ತ) ಕಾಲೇಜಿನಲ್ಲಿ ನಡೆಯಲಿದೆ. ಹಾಸನ ಕ್ಷೇತ್ರದ ಮತ ಎಣಿಕೆ ಹಾಸನದ ಬಿ.ಎಂ. ರಸ್ತೆ ಡೈರಿ ಸರ್ಕಲ್‍ನಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ್ತು ಚಾಮರಾಜನಗರ ಕ್ಷೇತ್ರದ ಮತ ಎಣಿಕೆ ಚಾಮರಾಜನಗರ-ನಂಜನಗೂಡು ರಸ್ತೆಯ ಬೇಡರಪುರ ದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

Translate »