ಪಾಲಿಕೆ ಅಧಿಕಾರಿಗಳಿಂದ ಕಾರ್ಯಾಚರಣೆ 90 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶ
ಮೈಸೂರು

ಪಾಲಿಕೆ ಅಧಿಕಾರಿಗಳಿಂದ ಕಾರ್ಯಾಚರಣೆ 90 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶ

April 26, 2019

ಮೈಸೂರು: ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದರೂ ಮೈಸೂರಿನ ವಿವಿಧೆಡೆ ಕದ್ದು ಮುಚ್ಚಿ ಪ್ಲಾಸ್ಟಿಕ್ ಚೀಲ ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಗಳ ಮೇಲೆ ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಗುರುವಾರ ಕಾರ್ಯಾ ಚರಣೆ ನಡೆಸಿ ಸುಮಾರು 90 ಕೆಜಿಯಷ್ಟು ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ವಶಪಡಿಸಿಕೊಂಡಿ ದ್ದಾರೆ. ಪ್ಲಾಸ್ಟಿಕ್ ಬಳಕೆ ನಿಷೇಧದ ನಡು ವೆಯೂ ಮಾರಾಟಗಾರರು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪಾಲಿಕೆ ಆರೋಗ್ಯಾ ಧಿಕಾರಿ ಡಾ.ನಾಗರಾಜ್ ನೇತೃತ್ವದಲ್ಲಿ ಪರಿಸರ ಇಂಜಿನಿಯರ್ ಮೈತ್ರಿ, ಆರೋಗ್ಯ ನಿರೀ ಕ್ಷಕ ಯೋಗೀಶ್ ಇನ್ನಿತರರು ಮಾರಾಟ ಸ್ಥಳಗಳ ಮೇಲೆ ದಿಢೀರ್ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡರು. ಮೈಸೂರಿನ ಮನ್ನಾರ್ಸ್ ಮಾರುಕಟ್ಟೆ, ವಲಯ 2ರ ವ್ಯಾಪ್ತಿಯ ನಂಜುಮಳಿಗೆ ಇನ್ನಿತರ ಕಡೆಗಳಲ್ಲಿ ನಡೆದ ದಾಳಿಯಲ್ಲಿ ಒಟ್ಟು 90 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದಿ ದ್ದಾರೆ. ಮಾರಾಟಗಾರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಚುನಾವಣೆಯ ಒತ್ತಡದ ಹಿನ್ನೆಲೆ ಯಲ್ಲಿ ಕೊಂಚ ಗಮನ ನೀಡಲಾಗದ ಕಾರಣ ಪ್ಲಾಸ್ಟಿಕ್ ಮಾರಾಟಗಾರರು ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಿತ್ತು. ಇದೀಗ ಕಾರ್ಯಾಚರಣೆ ಪುನಾರಂಭಿ ಸಿದ್ದು, ಇದು ನಿರಂತರವಾಗಿ ನಡೆಯಲಿದ್ದು, ಎಲ್ಲೆಲ್ಲಿ ಪ್ಲಾಸ್ಟಿಕ್ ದಾಸ್ತಾನು ಮತ್ತು ಮಾರಾಟ ನಡೆಯುತ್ತಿದೆಯೋ ಅಲ್ಲಿ ದಾಳಿ ನಡೆಸಲಿದ್ದೇವೆ ಎಂದು ಡಾ.ನಾಗರಾಜು ತಿಳಿಸಿದ್ದಾರೆ.

Translate »