ವಿರಾಜಪೇಟೆ: ಮಕ್ಕಳಿಗೆ ಶಿಕ್ಷಣ ನೀಡಲು ಸವಿತಾ ಸಮಾಜಕ್ಕೆ ಸಲಹೆ
ಕೊಡಗು

ವಿರಾಜಪೇಟೆ: ಮಕ್ಕಳಿಗೆ ಶಿಕ್ಷಣ ನೀಡಲು ಸವಿತಾ ಸಮಾಜಕ್ಕೆ ಸಲಹೆ

April 30, 2019

ವಿರಾಜಪೇಟೆ: ಸವಿತಾ ಸಮಾಜದ ಬಾಂಧವರು ಕಳೆದ ಮೂರು ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿರುವ ಕ್ರಿಕೆಟ್ ಪಂದ್ಯಾಟ ಉತ್ತಮ ಕಾರ್ಯ, ಅದರೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವಂತಾಗಬೇಕು ಎಂದು ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‍ನ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಹೇಳಿದರು.

ತಾಲೂಕು ಸವಿತಾ ಸಮಾಜದ ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿ ವತಿಯಿಂದ ಸ್ಥಳೀಯ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸವಿತಾ ಸಮಾಜ ಬಾಂಧವರಿಗಾಗಿ ಆಯೋಜಿಸ ಲಾಗಿದ್ದ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಧು ದೇವಯ್ಯ, ಸವಿತಾ ಸಮಾಜ ಗ್ರಾಮೀಣ ಪ್ರದೇಶದ ಆಟಗಾರರನ್ನು ಒಗ್ಗೂಡಿಸಿ ಪ್ರತಿಭೆಗಳಿಗೆ ಅವಕಾಶ ನೀಡಿರುವುದು ಶ್ಲಾಘನೀಯ. ಮುಂದೆ ಯು ಈ ಸಮಾಜ ಅಭಿವೃದ್ಧಿ ಹೊಂದಿ ಕಷ್ಟದಲ್ಲಿರುವವರಿಗೆ ಸ್ಪಂದಿಸುವಂತಾಗಲಿ ಎಂದರು. ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಕೆ.ಟಿ.ವೆಂಕಟೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಪಟುಗಳು ಶಿಸ್ತನ್ನು ಪಾಲಿಸುವಂತಾಗಬೇಕು ಹಾಗೂ ಗ್ರಾಮೀಣ ಪ್ರತಿಭಾವಂತರು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸುವಂತಾಗಲಿ ಎಂದು ಹಾರೈಸಿದರು. ಶಿಕ್ಷಕ ಬಿ.ಆರ್.ಸತೀಶ್ ಬಿಡಿಸಿದ್ದ ಸವಿತಾ ಮಹರ್ಷಿ ಅವರ ಭಾವಚಿತ್ರವನ್ನು ಮಧುದೇವಯ್ಯ ಅನಾವರಣಗೊಳಿಸಿದರು.

ವೇದಿಕೆಯಲ್ಲಿ ಸವಿತಾ ಸಮಾಜದ ನಗರ ಅಧ್ಯಕ್ಷ ಬಿ.ದೇವ ರಾಜು, ಮಹಿಳಾ ಘಟಕದ ಅಧ್ಯಕ್ಷೆ ಆರ್.ಬಿ.ವಸಂತಿ, ಹಿರಿಯರಾದ ಬಿ.ಜಿ.ನಾರಾಯಣ, ಎ.ಯು.ಗಣೇಶ್, ಹೆಚ್.ಪಿ. ಶುಭಾವತಿ, ಮಡಿಕೇರಿಯ ದೇವಿ ಪ್ರಸಾದ್, ಗೋಣಿಕೊಪ್ಪ ಮಾಜಿ ಸೈನಿಕ ಶಿವಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಅಧ್ಯಕ್ಷ ಬಿ.ಆರ್.ಸತೀಶ್ ಸ್ವಾಗತಿಸಿ ನಿರೂಪಿಸಿದರು. ಪಂದ್ಯಾಟದಲ್ಲಿ 13 ತಂಡಗಳು ಭಾಗವಹಿಸಿದ್ದವು.

Translate »