ಮಡಿಕೇರಿ: ವಿರಾಜಪೇಟೆ ಸಮೀಪದ ಪೆರುಂ ಬಾಡಿ ಚೆಕ್‍ಪೋಸ್ಟ್‍ನಲ್ಲಿ ಮಾ.28ರಂದು ರಾತ್ರಿ 10 ಗಂಟೆಯ ಸಮಯದಲ್ಲಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಕೊಡಗು ಜಿಲ್ಲಾ ಸಾರಿಗೆ ಇಲಾ ಖೆಯ ಪ್ರಭಾರ ಅಧಿಕಾರಿ ಜೆ.ಪಿ.ಗಂಗಾಧರ ಎಂಬು ವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಕೊಡಗು ಜಿಲ್ಲಾಧಿಕಾರಿಗಳು ಪ್ರಭಾರ ಸಾರಿಗೆ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಸಾರಿಗೆ ಆಯುಕ್ತರಿಗೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಸಾರಿಗೆ ಆಯುಕ್ತರು ಮತ್ತು ಶಿಸ್ತು ಸಮಿತಿಯು ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದ ಎಸ್.ಎಸ್.ಟಿ. ತಂಡದ…
ರಾಜ್ಯದಲ್ಲಿ ನಿಂಬೆಹಣ್ಣಿನ ಆಡಳಿತ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯ
April 9, 2019ಮಡಿಕೇರಿ: ರಾಜ್ಯದಲ್ಲಿ ನಿಂಬೆ ಹಣ್ಣಿನ ಆಡಳಿತ ಕಾರ್ಯನಿರ್ವಹಿಸುತ್ತಿದ್ದು, ಸಮ್ಮಿಶ್ರ ಸರ್ಕಾರದ ಕಾರ್ಯ ವಿಧಾನದ ಬಗ್ಗೆ ಜನ ರೋಸಿ ಹೋಗಿದ್ದಾರೆ ಎಂದು ಬಿಜೆಪಿಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ರಾಜಕೀಯ ಇಚ್ಚಾಶಕ್ತಿಯಿಂದ ಆಡಳಿತ ನಡೆಸುವ ಬದಲಿಗೆ ನಿಂಬೆಹಣ್ಣನ್ನು ನಂಬಿ ಕೊಂಡು ಆಡಳಿತ ನಡೆಸಲಾಗುತ್ತಿದೆ. ಮಾರು ಕಟ್ಟೆಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೆಸರಿನ ನಿಂಬೆಹಣ್ಣಿಗೆ ಭಾರೀ ಡಿಮ್ಯಾಂಡ್ ಉಂಟಾಗಿದೆ ಎಂದು ಮೈತ್ರಿ ಸರ್ಕಾರದ…
ದುಬಾರೆಯಲ್ಲಿ ಮದವೇರಿದ ಆನೆಗಳು: ಪ್ರವಾಸಿಗರಿಗೆ ನಿರ್ಬಂಧ
April 9, 2019ಕುಶಾಲನಗರ: ಸಮೀಪದ ನಂಜರಾಯಪಟ್ಟಣ ಬಳಿಯ ದುಬಾರೆ ಶಿಬಿರದಲ್ಲಿನ ಸಾಕಾನೆಯೊಂದು ಮದ ವೇರಿದ ಹಿನ್ನೆಲೆಯಲ್ಲಿ ಶಿಬಿರದಲ್ಲಿ ಬಿಗುವಿನ ವಾತಾವರಣವಿರುವ ಕಾರಣದಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇತಿಹಾಸ ಪ್ರಸಿದ್ಧ ಸಾಕಾನೆ ಶಿಬಿರದಲ್ಲಿ ರುವ ಸಾಕಾನೆ ಗೋಪಿ ಹಾಗೂ ಕಾಡಾನೆ ಗಳಿಗೆ ಮದವೇರಿ ಚೆಲ್ಲಾಟದೊಂದಿಗೆ ಪುಂಡಾಟದಲ್ಲಿ ತೊಡಗಿದ್ದು, ಶಿಬಿರದಲ್ಲಿ ಆನೆಗಳ ಹತ್ತಿರ ಯಾರು ಸುಳಿಯದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲದೆ ದುಬಾರೆ ಅರಣ್ಯದಲ್ಲಿರುವ ಕಾಡಾನೆಗಳಿಗೂ ಕೂಡ ಮದವೇರಿದ್ದು, ಹೆಣ್ಣಾನೆಗಳನ್ನು ಹುಡುಕಿ ಕೊಂಡು ಶಿಬಿರದತ್ತ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಕಾಡಾನೆಗಳು ಮತ್ತು ಸಾಕಾನೆಗಳ ನಡುವೆ ಜಗಳ ಉಂಟಾಗಿ…
ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಪ್ರತಾಪ್‍ಸಿಂಹ ವಿಫಲ
April 9, 2019ಮಡಿಕೇರಿ: ಸಂಸದ ಪ್ರತಾಪ ಸಿಂಹ ಕೇಂದ್ರದ ಸಂಬಾರ ಮಂಡಳಿ ಸದಸ್ಯರಾಗಿದ್ದರೂ, ಬೆಳೆಗಾರರ ಮತ್ತು ರೈತರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಟೀಕಿಸಿದ್ದಾರೆ. ಮಡಿಕೇರಿಯಲ್ಲಿ ಆರಂಭಿಸಿರುವ ‘ಮೈತ್ರಿ ಕಾರ್ಯಾಲಯ’ದ ಉದ್ಘಾಟನಾ ಸಮಾರಂಭ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆಯಲ್ಲಿ ತಾನು ಗೆದ್ದರೆ ಪಕ್ಷ ಭೇದವಿಲ್ಲದೆ ಸಮಸ್ಯೆಗಳಿಗೆ ಸ್ಪಂದಿಸು ವುದಾಗಿ ತಿಳಿಸಿದರು. ಎರಡೂ ಪಕ್ಷಗಳ ಕಾರ್ಯ ಕರ್ತರು ಪರಸ್ಪರ ಒಗ್ಗಟ್ಟಿನಿಂದ ಶ್ರಮವಹಿಸಿ ಮತದಾರರ ಮನವೊಲಿಸಿದಲ್ಲಿ ನನ್ನ ಗೆಲುವು ಖಚಿತ…
ಮಂಡ್ಯ, ಹಾಸನಕ್ಕೆ ಮಾತ್ರ ಸೀಮಿತವಾದ ಮುಖ್ಯಮಂತ್ರಿ ಶಾಸಕ ಅಪ್ಪಚ್ಚು ರಂಜನ್ ಆರೋಪ
April 9, 2019ಸೋಮವಾರಪೇಟೆ: ಹೆಚ್.ಡಿ.ಕುಮಾರಸ್ವಾಮಿ ಅವರು ಕೇವಲ ಮಂಡ್ಯ ಮತ್ತು ಹಾಸನಕ್ಕೆ ಮುಖ್ಯಮಂತ್ರಿಗಳು ಎಂದು ತಿಳಿದುಕೊಂಡಿದ್ದು, ಕೊಡಗಿಗೆ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಅಪ್ಪಚ್ಚು ರಂಜನ್ ದೂರಿದರು. ಜೇಸಿ ವೇದಿಕೆಯಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಗೆ 5 ಸಾವಿರ ಕೋಟಿ ರೂ., ಹಾಸನಕ್ಕೆ 6 ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದಾರೆ. ಆದರೆ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕೊಡಗಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸಂತ್ರಸ್ತರ ಸಂಕಷ್ಟಕ್ಕೆ ದಾನಿಗಳು 231 ಕೋಟಿ…
ಮತಗಟ್ಟೆ ಅಧಿಕಾರಿಗಳಿಗೆ 2ನೇ ಹಂತದ ತರಬೇತಿ
April 8, 2019ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಡಿಸಿ ಅನೀಸ್ ಕಣ್ಮಣಿ ಜಾಯ್ ಸಲಹೆ ಮಡಿಕೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ಏಪ್ರಿಲ್, 18 ರಂದು ನಡೆಯಲಿದ್ದು, ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿ ಸಿರುವ ಪಿಆರ್‍ಒ, ಎಪಿಆರ್‍ಒ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆ ಹಾಗೂ ವಿರಾಜ ಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಎರಡನೇ ಹಂತದ ತರಬೇತಿ ಕಾರ್ಯ ಕ್ರಮ ಭಾನುವಾರ ನಡೆಯಿತು. ಮಸ್ಟರಿಂಗ್ ದಿನ ಮತ್ತು ಮತಗಟ್ಟೆ ಕೇಂದ್ರ ದಲ್ಲಿ ನಿರ್ವಹಿಸಬೇಕಾದ ಕಾರ್ಯ ಹಾಗೂ ಡಿಮಸ್ಟರಿಂಗ್ ಸಂದರ್ಭದಲ್ಲಿ…
ಬಿಜೆಪಿ ವತಿಯಿಂದ ಮನೆ ಮನೆ ಪ್ರಚಾರ
April 8, 2019ಗೋಣಿಕೊಪ್ಪಲು: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಘಟಕದಿಂದ ಮನೆ, ಮನೆ ಪ್ರಚಾರ ನಡೆಸಿ ನರೇಂದ್ರ ಮೋದಿ ಸರ್ಕಾರಕ್ಕೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. ನಗರದಲ್ಲಿ ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ ಬೋಪಣ್ಣ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಸಂಸದ ಪ್ರತಾಪ್ ಸಿಂಹ ಪರ ಮತಯಾಚನೆ ನಡೆಸಿದರು. ಮಾಧÀ್ಯಮದೊಂದಿಗೆ ಮಾತನಾಡಿದ ಸಿ.ಕೆ. ಬೋಪಣ್ಣ, ಪ್ರತಿ ಮನೆಯಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ…
ತೊರೆನೂರು, ಶಿರಂಗಾಲದಲ್ಲಿ ಹೊನ್ನಾರು ಉತ್ಸವ
April 8, 2019ಕುಶಾಲನಗರ: ಸಮೀಪದ ತೊರೆನೂರು-ಶಿರಂಗಾಲ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಹೊನ್ನಾರು ಉತ್ಸವ ಆಚರಿಸಿ ಸಂಭ್ರಮಿಸಿದರು. ಜನಪದ ಸಂಸ್ಕೃತಿ ಪ್ರತೀಕವಾದ ಹೊನ್ನಾರು ಉತ್ಸವ (ಚಿನ್ನದ ಉಳುಮೆ) ವನ್ನು ತಮ್ಮ ತಮ್ಮ ಜಮೀನುಗಳಲ್ಲಿ ಆರಂಭಿಸಿ ಉತ್ತಮ ಮಳೆ, ಬೆಳೆಯೊಂದಿಗೆ ಸಂಮೃದ್ಧಿಯನ್ನು ಕರುಣಿಸುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ರೈತರು ತಮ್ಮ ಜಾನುವಾರುಗಳನ್ನು ನದಿಯಲ್ಲಿ ಸ್ನಾನ ಮಾಡಿಸಿ ನಂತರ ಅಲಂಕರಿಸಿ ಗ್ರಾಮದಲ್ಲಿ ಹೊನ್ನಾರು ಉತ್ಸವದ ಮೆರವಣಿಗೆ ನಡೆಸಿದರು. ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೊದಲಿಗೆ ಗ್ರಾಮದ ರೈತ…
ಹಾನಗಲ್ಲು ಶೆಟ್ಟಳ್ಳಿಯಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಚುನಾವಣೆ ಬಹಿಷ್ಕಾರ
April 8, 2019ಸೋಮವಾರಪೇಟೆ: ಗ್ರಾಮ ಸಂಪರ್ಕಿಸುವ ಪ್ರಮುಖ ರಸ್ತೆ ಕಳೆದ ಹಲವಾರು ದಶಕಗಳಿಂದ ದುರಸ್ತಿ ಕಾಣದೇ ಇರುವುದರಿಂದ ಬೇಸತ್ತು ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾನಗಲ್ಲು ಶೆಟ್ಟಳ್ಳಿ ಗ್ರಾಮಸ್ಥರು ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಗ್ರಾಮದಲ್ಲಿ ಸಭೆ ಸೇರಿದ ಗ್ರಾಮಸ್ಥರು ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡರು. ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಪ್ರಮುಖ ರಸ್ತೆ ಕಳೆದ ಅನೇಕ ದಶಕಗಳಿಂದ ಗುಂಡಿಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಎದುರಾಗಿದೆ. ಈ ಬಗ್ಗೆ ಸ್ಥಳೀಯ…
ಸೇತುವೆ ನಿರ್ಮಾಣ ಕಾಮಗಾರಿ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು
April 8, 2019ವೀರಾಜಪೇಟೆ: ಸೇತುವೆ ನಿರ್ಮಿಸಲು ರಸ್ತೆಗೆ ಅಡ್ಡಲಾಗಿ ತೆಗೆದಿದ್ದ ಸುಮಾರು 20 ಅಡಿ ಆಳದ ಹೊಂಡಕ್ಕೆ ದ್ವಿಚಕ್ರ ಸವಾರನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ವೀರಾಜಪೇಟೆ-ಕೇರಳ ಅಂತರರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ವೀರಾಜ ಪೇಟೆ ಬಳಿಯ ಪೆರುಂಬಾಡಿ ನಿವಾಸಿ ವಿನೋದ್ ಕುಮಾರ್ (29) ಮೃತಪಟ್ಟವರು. ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ವಿನೋದ್‍ಕುಮಾರ್ ಏ.6 ರಂದು ತನ್ನ ಸ್ನೇಹಿತನ ಮದುವೆಗೆಂದು ವೀರಾಜಪೇಟೆಗೆ ಬಂದಿದ್ದು, ರಾತ್ರಿ ಮದುವೆ ಕಾರ್ಯ ಮುಗಿಸಿ ಪೆರುಂಬಾಡಿಯಲ್ಲಿರುವ ತನ್ನ ಮನೆಗೆ ವೀರಾಜಪೇಟೆ ಕಡೆಯಿಂದ ಹೊರಟಿದ್ದಾರೆ. ವೀರಾಜಪೇಟೆ ಮತ್ತು ಆರ್ಜಿ ಗ್ರಾಮದ…