ಬಿಜೆಪಿ ವತಿಯಿಂದ ಮನೆ ಮನೆ ಪ್ರಚಾರ
ಕೊಡಗು

ಬಿಜೆಪಿ ವತಿಯಿಂದ ಮನೆ ಮನೆ ಪ್ರಚಾರ

April 8, 2019

ಗೋಣಿಕೊಪ್ಪಲು: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಘಟಕದಿಂದ ಮನೆ, ಮನೆ ಪ್ರಚಾರ ನಡೆಸಿ ನರೇಂದ್ರ ಮೋದಿ ಸರ್ಕಾರಕ್ಕೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ನಗರದಲ್ಲಿ ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ ಬೋಪಣ್ಣ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಸಂಸದ ಪ್ರತಾಪ್ ಸಿಂಹ ಪರ ಮತಯಾಚನೆ ನಡೆಸಿದರು.

ಮಾಧÀ್ಯಮದೊಂದಿಗೆ ಮಾತನಾಡಿದ ಸಿ.ಕೆ. ಬೋಪಣ್ಣ, ಪ್ರತಿ ಮನೆಯಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ರಚನೆಯಾಗಲಿದೆ. ದೇಶದ ಹಿತದೃಷ್ಟಿಯಿಂದ ಮೋದಿ ಸರ್ಕಾರಕ್ಕೆ ಮತ ನೀಡುವ ಭರವಸೆ ಮತದಾರರಿಂದ ಲಭ್ಯವಾಗಿದೆ. ಲೋಕಸಭಾ ಅಭ್ಯರ್ಥಿಯಾಗಿ ಕಣದಲ್ಲಿರುವ ಪ್ರತಾಪ್ ಸಿಂಹ ಈ ಬಾರಿ ಹೆಚ್ಚಿನ ಮತಗಳಿಂದ ಆರಿಸಿ ಬರಲಿದ್ದಾರೆ ಎಂದು ಹೇಳಿದರು.

ಪ್ರಚಾರದಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಲ್ಚಿರ ಗಾಂಧಿ ದೇವಯ್ಯ, ಕಾರ್ಯದರ್ಶಿ ರಾಮಕೃಷ್ಣ, ನಗರ ಮಹಿಳಾ ಉಪಾಧ್ಯಕ್ಷೆ ವಿಮಲ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಕ್ಕೀಂ, ನಗರ ಸ್ಥಾನೀಯ ಸಮಿತಿ ಪ್ರಮುಖರಾದ ಜಪ್ಪು ಸುಬ್ಬಯ್ಯ, ಎ.ಇ. ಸತೀಶ್, ಶಾಜಿ ಪಿ.ಎಂ, ರಾಮ್‍ದಾಸ್, ಚೋನಿರ ಮಂಜು, ಗ್ರಾಮ ಪಂಚಾಯತಿ ಸದಸ್ಯೆ ನೂರೇರ ರತಿ ಅಚ್ಚಪ್ಪ, ಬಿ.ಜೆ.ಪಿ. ಮುಖಂಡರಾದ ಚೇಂದಂಡ ಸುಮಿ ಸುಬ್ಬಯ್ಯ ಮುಂತಾದವರು ಭಾಗವಹಿಸಿದ್ದರು.

Translate »