ರಾಜ್ಯದಲ್ಲಿ ನಿಂಬೆಹಣ್ಣಿನ ಆಡಳಿತ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯ
ಕೊಡಗು

ರಾಜ್ಯದಲ್ಲಿ ನಿಂಬೆಹಣ್ಣಿನ ಆಡಳಿತ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯ

April 9, 2019

ಮಡಿಕೇರಿ: ರಾಜ್ಯದಲ್ಲಿ ನಿಂಬೆ ಹಣ್ಣಿನ ಆಡಳಿತ ಕಾರ್ಯನಿರ್ವಹಿಸುತ್ತಿದ್ದು, ಸಮ್ಮಿಶ್ರ ಸರ್ಕಾರದ ಕಾರ್ಯ ವಿಧಾನದ ಬಗ್ಗೆ ಜನ ರೋಸಿ ಹೋಗಿದ್ದಾರೆ ಎಂದು ಬಿಜೆಪಿಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ರಾಜಕೀಯ ಇಚ್ಚಾಶಕ್ತಿಯಿಂದ ಆಡಳಿತ ನಡೆಸುವ ಬದಲಿಗೆ ನಿಂಬೆಹಣ್ಣನ್ನು ನಂಬಿ ಕೊಂಡು ಆಡಳಿತ ನಡೆಸಲಾಗುತ್ತಿದೆ. ಮಾರು ಕಟ್ಟೆಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೆಸರಿನ ನಿಂಬೆಹಣ್ಣಿಗೆ ಭಾರೀ ಡಿಮ್ಯಾಂಡ್ ಉಂಟಾಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ದ ಟೀಕಾಪ್ರಹಾರ ನಡೆಸಿದರು.

ಸಾಮಾನ್ಯ ಗೃಹಿಣಿಯಾಗಿದ್ದ ಸುಮಲತಾ ಪರವಾಗಿ ಮಂಡ್ಯದಲ್ಲಿ ಮತದಾರರ ಹವಾ ಎದ್ದಿದ್ದು, ಸುಮಲತಾ ಗೆಲುವನ್ನು ಊಹಿಸ ಲಾಗದೇ ಸುಮಲತಾ ಎಂಬ ಹೆಸರಿನ ಮೂವ ರನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್ ನಾಯಕರು ಹೀನಾಯ ಸ್ಥಿತಿಗೆ ತಲುಪಿರು ವುದಕ್ಕೆ ನಿದರ್ಶನವಾಗಿದ್ದಾರೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.

ನಿಖಿಲ್ ಕುಮಾರಸ್ವಾಮಿ ನೀಡುವ ನೋಟ್ ಪಡೆದು ಮತದಾರರು ಸುಮಲತಾಗೆ ವೋಟು ಹಾಕುತ್ತಾರೆ. ಮಂಡ್ಯದಲ್ಲಿ ನಿಖಿಲ್ ನೋಟು, ಸುಮಲತಾ ವೋಟು ಎನ್ನುವಂತಾಗಿದೆ. ಹಾಸನದಲ್ಲಿಯೂ ರಾಜ ಕೀಯ ಪರಿಸ್ಥಿತಿ ಬದಲಾಗಿದ್ದು, ಬಿಜೆಪಿ ಅಭ್ಯರ್ಥಿ ಎ.ಮಂಜು ಖಂಡಿತವಾಗಿಯೂ ಗೆಲುವು ಸಾಧಿಸಲಿದ್ದಾರೆ. ಕರ್ನಾಟಕದಲ್ಲಿ ಕನಿಷ್ಟ 22 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ಮೋದಿ ಈ ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸುವ ದಿನ ದಂದೇ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನ ಗೊಳ್ಳಲಿದೆ ಎಂದು ಭವಿಷ್ಯ ನುಡಿದ ಕೋಟಾ ಶ್ರೀನಿವಾಸ ಪೂಜಾರಿ, ಈವರೆಗೆ ಬಿಜೆಪಿ ಯಾವೆಲ್ಲಾ ಭರವಸೆಗಳನ್ನು ದೇಶದ ಜನತೆಗೆ ನೀಡಿತ್ತೋ ಆ ಪೈಕಿ ಬಹುತೇಕ ವನ್ನು ಈಡೇರಿಸಿದ ತೃಪ್ತಿಯಿದೆ ಎಂದರು.

ಬಿಜೆಪಿ ಪ್ರಣಾಳಿಕೆ ಬಗ್ಗೆ ಮಾಹಿತಿ ನೀಡಿದ ಕೋಟಾ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಉಗ್ರರನ್ನು ಬೆಂಬಲಿಸುವ ಅಂಶಗಳನ್ನು ಹೊಂದಿರುವ ಪ್ರಣಾಳಿಕೆ ನೀಡಿದರೆ ಬಿಜೆಪಿಯು ಭಯೋತ್ಪಾದಕರನ್ನು ಜೈಲಿಗಟ್ಟಿ ಉಗ್ರ ದಮನ ಮಾಡುವ ಸಂಕಲ್ಪದ ಅಂಶ ಗಳನ್ನು ಪ್ರಣಾಳಿಕೆಯಲ್ಲಿ ಹೊಂದಿದೆ. ಯುಪಿಎ ನಾಯಕರು ಉಗ್ರರ ಬಗ್ಗೆ ಮೃದು ಧೋರಣೆ ತಳೆದಿರುವುದು ಖಂಡನೀಯ ಎಂದರು. ಇಂಥವರನ್ನು ಜನ ಈಗಾಗಲೇ ಗುರುತಿಸಿದ್ದು ಮತದ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದೂ ಶ್ರೀನಿವಾಸ ಪೂಜಾರಿ ಹೇಳಿದರು.
ಜಮ್ಮು ಕಾಶ್ಮೀರದಲ್ಲಿನ 370ನೇ ವಿಶೇಷ ವಿಧಿಯನ್ನು ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ರದ್ದುಗೊಳಿ ಸುತ್ತದೆ. ಕಾಶ್ಮೀರಿ ಪಂಡಿತರು, ಮಹಿಳೆಯರ ಆಸ್ತಿ ಹಕ್ಕನ್ನು ರಕ್ಷಿಸಲು ಸಂವಿಧಾನದ 35(ಎ) ವಿಧಿಯನ್ನು ಅಸಿಂಧು ಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. 60 ವರ್ಷ ಮೀರಿದ ಸಣ್ಣ ಹಿಡುವಳಿದಾರರಿಗೆ ಮಾಸಿಕ ಪಿಂಚಣಿ ನೀಡಲಾಗುತ್ತದೆ. ದೇಶಕ್ಕೆ ನುಸುಳುಕೋರ ರನ್ನು ತಪ್ಪಿಸಲು ಸ್ಮಾರ್ಟ್ ಫೆನ್ಸಿಂಗ್ ಮೂಲಕ ಗಡಿ ರಕ್ಷಣೆ ಮಾಡಲಾಗುತ್ತದೆ. ಸೇನೆ ಸಶಸ್ತ್ರೀ ಕರಣ, ಭಾರತೀಯ ಸೇನೆಗೆ ಸಂಪೂರ್ಣ ಅಧಿಕಾರ, ಭಯೋತ್ಪಾದನೆ ವಿರುದ್ದ ರಾಜಿ ಯಿಲ್ಲದ ಕಠಿಣ ನಿಲವು ಕೈಗೊಳ್ಳಲಾಗು ತ್ತದೆ. ಬಿಜೆಪಿ ಸರ್ಕಾರದ ಪ್ರಣಾಳಿಕೆಯಲ್ಲಿ ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ದೇಶದ 130 ಕೋಟಿ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕ, ಶೈಕ್ಷಣಿಕ, ಜೀವನ ಭದ್ರತೆ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಅಂಶಗಳನ್ನೂ ಪ್ರಣಾಳಿಕೆ ಹೊಂದಿದೆ ಎಂದೂ ಕೋಟಾ ಶ್ರೀನಿವಾಸ ಪೂಜಾರಿ ವಿವರಿಸಿದರು.

ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಅತ್ಯಧಿಕ ಅಂತರದ ಮತ ಗಳಿಂದ ಗೆಲ್ಲಲಿದ್ದು, ಶ್ರೇಷ್ಠ ಸಂಸದ ನಾಗಿ ಪ್ರತಾಪ್ ಸಿಂಹ ಕ್ಷೇತ್ರಕ್ಕೆ ನೀಡಿದ ವಿವಿಧ ಯೋಜನೆಗಳು ಮತಗಳಾಗಿ ಪರಿವರ್ತನೆ ಯಾಗಲಿದೆ ಎಂದೂ ಕೋಟಾ ಶ್ರೀನಿವಾಸ ಪೂಜಾರಿ ವಿಶ್ವಾಸದಿಂದ ನುಡಿದರು.

ವಿಧಾನಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅರುಣ್ ಕುಮಾರ್, ನಾಪಂಡ ರವಿಕಾಳಪ್ಪ, ಮಡಿಕೇರಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ಉಮೇಶ್ ಸುಬ್ರಮಣಿ, ಪ್ರಮುಖರಾದ ಶಜಿಲ್ ಕೃಷ್ಣ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಾಳನ ರವಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Translate »