ದುಬಾರೆಯಲ್ಲಿ ಮದವೇರಿದ ಆನೆಗಳು: ಪ್ರವಾಸಿಗರಿಗೆ ನಿರ್ಬಂಧ
ಕೊಡಗು

ದುಬಾರೆಯಲ್ಲಿ ಮದವೇರಿದ ಆನೆಗಳು: ಪ್ರವಾಸಿಗರಿಗೆ ನಿರ್ಬಂಧ

April 9, 2019

ಕುಶಾಲನಗರ: ಸಮೀಪದ ನಂಜರಾಯಪಟ್ಟಣ ಬಳಿಯ ದುಬಾರೆ ಶಿಬಿರದಲ್ಲಿನ ಸಾಕಾನೆಯೊಂದು ಮದ ವೇರಿದ ಹಿನ್ನೆಲೆಯಲ್ಲಿ ಶಿಬಿರದಲ್ಲಿ ಬಿಗುವಿನ ವಾತಾವರಣವಿರುವ ಕಾರಣದಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಇತಿಹಾಸ ಪ್ರಸಿದ್ಧ ಸಾಕಾನೆ ಶಿಬಿರದಲ್ಲಿ ರುವ ಸಾಕಾನೆ ಗೋಪಿ ಹಾಗೂ ಕಾಡಾನೆ ಗಳಿಗೆ ಮದವೇರಿ ಚೆಲ್ಲಾಟದೊಂದಿಗೆ ಪುಂಡಾಟದಲ್ಲಿ ತೊಡಗಿದ್ದು, ಶಿಬಿರದಲ್ಲಿ ಆನೆಗಳ ಹತ್ತಿರ ಯಾರು ಸುಳಿಯದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲದೆ ದುಬಾರೆ ಅರಣ್ಯದಲ್ಲಿರುವ ಕಾಡಾನೆಗಳಿಗೂ ಕೂಡ ಮದವೇರಿದ್ದು, ಹೆಣ್ಣಾನೆಗಳನ್ನು ಹುಡುಕಿ ಕೊಂಡು ಶಿಬಿರದತ್ತ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಕಾಡಾನೆಗಳು ಮತ್ತು ಸಾಕಾನೆಗಳ ನಡುವೆ ಜಗಳ ಉಂಟಾಗಿ ಅಪಾಯ ಸಂಭವಿಸಬಹುದು ಎಂದು ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.

ಮದವೇರಿದ ಸಾಕಾನೆಗಳು ಹಾಗೂ ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಸಿಬ್ಬಂದಿಗಳು, ಮಾವುತರು, ಕಾವಾಡಿಗರು ಹಗಲಿರುಳು ನಿದ್ರೆಯಿಲ್ಲದೆ ಆನೆಗಳನ್ನು ಕಾಯುವ ಪರಿಸ್ಥಿತಿ ಉಂಟಾಗಿದೆ.

ಸಾಕಾನೆಗಳು ಕಾಡಿಗೆ ತೆರಳದಂತೆ ಕಟ್ಟಿಹಾಕಲಾಗಿದ್ದು, ಎಂದಿನಂತೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಆದರೆ ಎಂದಿನಂತೆ ಸಲುಗೆಯಿಂದ ಮಾವುತ ರು ಹತ್ತಿರ ಸುಳಿಯಲು ಸಾಧ್ಯವಾಗುತ್ತಿಲ್ಲ. ಮದವೇರಿದ ಆನೆಗಳು ತುಂಬಾ ಅಪಾಯ ಕಾರಿಯಾಗಿದ್ದು, ಅವುಗಳಿಗೆ ಸಿಟ್ಟು ನೆತ್ತಿಗೇರಿ ದರೆ ಏನು ಮಾಡುತ್ತವೆಯೋ ಹೇಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಯಾರು ಆನೆಗಳ ಬಳಿಗೆ ಹೋಗದಂತೆ ಸೂಚನೆ ನೀಡಲಾಗಿದೆ ಎಂದು ದುಬಾರೆ ಸಾಕಾನೆ ಶಿಬಿರ ಅರಣ್ಯಾಧಿಕಾರಿ ರಂಜನ್ ತಿಳಿಸಿದ್ದಾರೆ.

ಪ್ರವಾಸಿಗರು ಹಾಗೂ ಸಾರ್ವಜನಿಕರು ಶಿಬಿರದೊಳಗೆ ಬರದಂತೆ ನಿರ್ಬಂಧಿಸಲಾ ಗಿದೆ. ದಿನನಿತ್ಯ ಇದರಿಂದ ಪ್ರವಾಸಿಗರ ಕಲರವದಿಂದ ಕೂಡಿದ್ದ ದುಬಾರೆ ಶಿಬಿರ ಜನನಿಬಿಡ ಪ್ರದೇಶವಾಗಿ ಗೋಚರಿಸುತ್ತಿದೆ. ಹೊರಗಿನಿಂದ ಬರುವ ನೂರಾರು ಪ್ರವಾಸಿ ಗರು ಕಾವೇರಿನಲ್ಲಿ ಈಜಾಡಿ ಹಿಂತಿರುಗುತ್ತಿ ದ್ದರೆ, ಆನೆಗಳನ್ನು ನೋಡಲು ಸಾಧ್ಯವಾಗದೆ ವಿವಿಧ ಶಾಲಾ ಕಾಲೇಜುಗಳಿಂದ ಬಂದಿದ್ದ ಮಕ್ಕಳು ನಿರಾಸೆಯಿಂದ ಹಿಂತಿರುಗುತ್ತಿ ದ್ದಾರೆ. ಮುಂದಿನ ದಿನಗಳಲ್ಲಿ ಆನೆಗಳಿಗೆ ಮದ ಇಳಿದ ಬಳಿಕ ಎಂದಿನಂತೆ ಪ್ರವಾಸಿ ಗರ ವೀಕ್ಷಣೆಗೆ ಅವಕಾಶ ಮಾಡಿಕೊಡ ಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »