ಕೊಡಗು

ಏ.1, ತಲಕಾವೇರಿಗೆ ಪ್ರವೇಶ ನಿರ್ಬಂಧ
ಕೊಡಗು

ಏ.1, ತಲಕಾವೇರಿಗೆ ಪ್ರವೇಶ ನಿರ್ಬಂಧ

March 30, 2019

ಮಡಿಕೇರಿ: ಶ್ರೀ ತಲಕಾ ವೇರಿ ದೇವಾಲಯದಲ್ಲಿ ಏಪ್ರಿಲ್ 1 ರಂದು ಸ್ವಚ್ಛತಾ ಕಾರ್ಯದ ಪ್ರಯುಕ್ತ ಮಧ್ಯಾಹ್ನ 3 ಗಂಟೆಯ ನಂತರ ಪ್ರವೇಶ ಇರುವುದಿಲ್ಲ ವಾದ್ದರಿಂದ ಭಕ್ತಾದಿಗಳು ಸಹಕರಿಸಬೇಕಾಗಿ ದೇವಾಲಯದ ಪ್ರಕಟಣೆ ಕೋರಿದೆ.

ಚುನಾವಣಾ ಆಯೋಗದ ನಿರ್ದೇಶನ  ಕಟ್ಟುನಿಟ್ಟಾಗಿ ಪಾಲಿಸಲು ಡಿಸಿ ಸೂಚನೆ
ಕೊಡಗು

ಚುನಾವಣಾ ಆಯೋಗದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಲು ಡಿಸಿ ಸೂಚನೆ

March 29, 2019

ಮಡಿಕೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ಏಪ್ರಿಲ್ 18 ರಂದು ನಡೆಯಲಿದ್ದು, ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿಸಿರುವ ವಿವಿಧ ಹಂತದ ಅಧಿಕಾರಿಗಳು ಚುನಾ ವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಪಿಆರ್‍ಒ, ಎಪಿಆರ್‍ಒ, 2ನೇ, 3ನೇ ಮತ್ತು 4ನೇ ಮತಗಟ್ಟೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆ ಹಾಗೂ ವಿರಾಜಪೇ ಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಗುರು ವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ದಲ್ಲಿ ಅವರು…

ಅಕ್ರಮ ಸ್ಫೋಟಕ ದಾಸ್ತಾನು: ಐವರ ಬಂಧನ
ಕೊಡಗು

ಅಕ್ರಮ ಸ್ಫೋಟಕ ದಾಸ್ತಾನು: ಐವರ ಬಂಧನ

March 29, 2019

ಮಡಿಕೇರಿ: ಕುಶಾಲನಗರದ ಮನೆಯೊಂದರಲ್ಲಿ ಅಕ್ರಮವಾಗಿ ಅಪಾಯ ಕಾರಿ ಸ್ಫೋಟಕ ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿರುವ ಕುಶಾಲನಗರ ಗ್ರಾಮಾಂ ತರ ಠಾಣಾ ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು ಒಟ್ಟು 5 ಮಂದಿಯನ್ನು ಬಂಧಿಸಿ, ಅಪಾರ ಪ್ರಮಾಣದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಬುಧವಾರ ರಾತ್ರಿ 10.45 ಗಂಟೆಗೆ ದೊರೆತ ಖಚಿತ ಮಾಹಿತಿ ಆಧರಿಸಿ, ಕುಶಾಲ ನಗರದ ಸುಂದರನಗರ ನಿವಾಸಿ ಮಂಜು ಎಂಬುವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ 21 ಎಲೆಕ್ಟ್ರಾನಿಕ್ ಡಿಟೋನೇಟರ್, 200 ಸಾಮಾನ್ಯ ಡಿಟೋನೇಟರ್,…

ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ಹೆಚ್.ವಿಶ್ವನಾಥ್
ಕೊಡಗು

ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ಹೆಚ್.ವಿಶ್ವನಾಥ್

March 29, 2019

ಮಡಿಕೇರಿ: ಜೆಡಿಎಸ್‍ನ ಜಿಲ್ಲಾ ಧ್ಯಕ್ಷರಾಗಿ ಕೆ.ಎಂ.ಬಿ ಗಣೇಶ್ ಮುಂದು ವರೆಯಲಿದ್ದು, ಯಾವುದೇ ಬದಲಾವಣೆ ಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಸ್ಪಷ್ಟಪಡಿಸಿದರು. ನಗರದ ಬಾಲಭವನ ಬಳಿಯಿರುವ ಮೈದಾನದಲ್ಲಿ ನಡೆದ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ನಿಲುವಿನ ಪಕ್ಷ ಅಧಿ ಕಾರಕ್ಕೆ ಬಂದರೆ ದೇಶದ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್ ಮತ್ತು ಜೆಡಿಎಸ್ ಜಾತ್ಯಾತೀತ ಪಕ್ಷಗಳು ಒಂದಾಗುವ ಮೂಲಕ ಇತರೆ ಪಕ್ಷಗಳಿಗೆ ಭಯ ಹುಟ್ಟಿಸಿದೆ. ಕಾಂಗ್ರೆಸ್ ಪಕ್ಷ ನನ್ನ ಮನೆ ಅದು ನನಗೆ ತಾಯಿ…

ಜಿಲ್ಲೆಯಾದ್ಯಂತ ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು
ಕೊಡಗು

ಜಿಲ್ಲೆಯಾದ್ಯಂತ ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು

March 28, 2019

ಮಡಿಕೇರಿ: ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಸೋಮವಾರಪೇಟೆ ಮತ್ತು ವಿರಾಜಪೇಟೆ ಯಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಎಎನ್‍ಎಂಗಳಿಗೆ ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಮತದಾರರು ತಾವು ಮತವನ್ನು ಯಾರಿಗೆ ಚಲಾಯಿಸಿದ್ದೇವೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ವಿವಿಪ್ಯಾಟ್ ಸಹ ಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ನಾನಾ ಮತಗಟ್ಟೆಗಳ ವ್ಯಾಪ್ತಿಗೆ ನಿಯೋ ಜಿಸಿರುವ ಸೆಕ್ಟರ್ ಅಧಿಕಾರಿಗಳು ವಿವಿ ಪ್ಯಾಟ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಗ್ರಾಮೀಣ, ಪಟ್ಟಣ…

ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಪಿ.ಶಿವರಾಜು ಅಧಿಕಾರ ಸ್ವೀಕಾರ
ಕೊಡಗು

ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಪಿ.ಶಿವರಾಜು ಅಧಿಕಾರ ಸ್ವೀಕಾರ

March 28, 2019

ಮಡಿಕೇರಿ: ನೂತನ ಹೆಚ್ಚುವರಿ ಜಿಲ್ಲಾ ಧಿಕಾರಿಯಾಗಿ ಪಿ. ಶಿವರಾಜು ಬುಧ ವಾರ ಅಧಿಕಾರ ವಹಿ ಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸು ತ್ತಿದ್ದ ಟಿ.ಯೋಗೇಶ್ ಅವರು ಗುಲ್ಬರ್ಗಾ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.

ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿಗೆ ನ್ಯಾಕ್ ತಂಡ ಭೇಟಿ
ಕೊಡಗು

ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿಗೆ ನ್ಯಾಕ್ ತಂಡ ಭೇಟಿ

March 28, 2019

ವಿರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿಗೆ ಯುಜಿಸಿಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ಮೌಲ್ಯಾಂ ಕನ ಪರಿಷತ್ತು (ನ್ಯಾಕ್) ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಹಂತದಲ್ಲಿ ಭೋದನಾ ಗುಣಮಟ್ಟ, ದಾಖಲೆಗಳು, ಕಾಲೇಜಿನ ವಿವರ, ವಿವಿಧ ವಿಭಾಗಗಳ ಹಾಗೂ ಫಲಿತಾಂಶದ ಪರಿ ಶೀಲನೆ ಮತ್ತು ಎಲ್ಲಾ ತರಹದ ಭೋದನಾ ಗುಣಮಟ್ಟವನ್ನು ಪರಿಶೀಲಿಸಲಾಯಿತು. ಒಂದು ದಿನ ತಂಡದವರು ಹಳೆಯ ವಿದ್ಯಾ ರ್ಥಿಗಳ ಜೊತೆ ಮತ್ತು ಪೋಷಕರ ಜೊತೆಯೂ ಸಂವಾದ ನಡೆಸಿದರು. ನ್ಯಾಕ್ ತಂಡದಲ್ಲಿ ತಂಡದ ಮುಖ್ಯಸ್ಥ ರಾಗಿ…

ಚಿಕ್ಕಪ್ಪ-ಚಿಕ್ಕಮ್ಮನನ್ನು ಕೊಂದು ತಾನೂ ನೇಣಿಗೆ ಶರಣಾದ ಯುವಕ
ಕೊಡಗು

ಚಿಕ್ಕಪ್ಪ-ಚಿಕ್ಕಮ್ಮನನ್ನು ಕೊಂದು ತಾನೂ ನೇಣಿಗೆ ಶರಣಾದ ಯುವಕ

March 28, 2019

ಸೋಮವಾರಪೇಟೆ: ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕೊಂದ ಯುವಕನೋರ್ವ ನೇಣಿಗೆ ಶರಣಾಗಿರುವ ದಾರುಣ ಘಟನೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದಲ್ಲಿ ಸಂಜೆ ನಡೆದಿದೆ. ಗ್ರಾಮದ ನಿವೃತ್ತ ಪೊಲೀಸ್ ಸೂದನ ಗಣೇಶ್(63), ಅವರ ಪತ್ನಿ ಮೋಹಿನಿ(48) ಕೊಲೆಯಾದವರು. ಆರೋಪಿ ಸೂದನ ದಿಲೀಪ್(30) ಅದೇ ಮನೆಯಲ್ಲಿ ನೇಣಿಗೆ ಶರ ಣಾಗಿದ್ದಾನೆ. ಇಂದು ಸಂಜೆ 6.30ರ ಸಮಯಕ್ಕೆ ಆರೋಪಿ ದಿಲೀಪ್, ತನ್ನ ಚಿಕ್ಕಪ್ಪನ ಮನೆಗೆ ತೆರಳಿ ಆಸ್ತಿ ವಿಷಯಕ್ಕೆ ಜಗಳ ಮಾಡಿದನೆನ್ನಲಾಗಿದೆ. ಈ ವೇಳೆ ಮಾತು ವಿಕೋಪಕ್ಕೆ ತಿರುಗಿ ಕತ್ತಿಯಿಂದ ಗಣೇಶ್ ಅವರ…

ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿರುವ ಜೆಡಿಎಸ್ ಅಧ್ಯಕ್ಷ ಗಣೇಶ್: ಆರೋಪ
ಕೊಡಗು

ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿರುವ ಜೆಡಿಎಸ್ ಅಧ್ಯಕ್ಷ ಗಣೇಶ್: ಆರೋಪ

March 28, 2019

ಗೋಣಿಕೊಪ್ಪಲು: ಮಾರ್ಚ್ 28 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗಿಗೆ ಆಗಮಿಸುತ್ತಾರೆ ಎಂಬ ಸುಳ್ಳು ಮಾಹಿತಿ ನೀಡುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಪ್ರಯತ್ನದಲ್ಲಿ ಜೆಡಿಎಸ್ ಪಕ್ಷಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಕೆ.ಬಿ.ಎಂ. ಗಣೇಶ್ ತೊಡಗಿಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡರುಗಳು ಅರೋಪಿಸಿದ್ದಾರೆ. ಅಧ್ಯಕ್ಷರಾದ ನಂತರ ಕಾರ್ಯಕರ್ತರನ್ನು ಭೇಟಿ ಮಾಡಿ, ಪಕ್ಷ ಬಲವರ್ಧನೆಗೆ ಮುಂದಾಗದ ಗಣೇಶ್, ಸುಳ್ಳು ಮಾಹಿತಿ ನೀಡುವ ಮೂಲಕ ಪಕ್ಷದ ಚಟುವಟಿಕೆಗೆ ಹಿನ್ನಡೆಯಾಗುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ಮುಖಂಡ ಕೆ.ಸಿ. ನಾಣಯ್ಯ ಸುದ್ದಿಗೋಷ್ಠಿಯಲ್ಲಿ…

ಕ್ಷೇತ್ರದಲ್ಲಿ ಪ್ರತಾಪ್‍ಸಿಂಹ ಗೆಲುವಿಗೆ ವಾಮ ಮಾರ್ಗ ಹಿಡಿಯುವ ಅಗತ್ಯ ಬಿಜೆಪಿಗಿಲ್ಲ ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು
ಕೊಡಗು

ಕ್ಷೇತ್ರದಲ್ಲಿ ಪ್ರತಾಪ್‍ಸಿಂಹ ಗೆಲುವಿಗೆ ವಾಮ ಮಾರ್ಗ ಹಿಡಿಯುವ ಅಗತ್ಯ ಬಿಜೆಪಿಗಿಲ್ಲ ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು

March 27, 2019

ಮಡಿಕೇರಿ: ಕೊಡಗು ಜಿಲ್ಲೆ ಸಂಪೂರ್ಣವಾಗಿ ಬಿಜೆಪಿಮಯವಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗೆಲುವಿಗೆ ವಾಮಮಾರ್ಗ ಹಿಡಿಯುವ ಅಗತ್ಯ ನಮ್ಮ ಪಕ್ಷಕ್ಕಿಲ್ಲವೆಂದು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಅಭಿಮನ್ಯು ಕುಮಾರ್, ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ಪರವಾಗಿ ಭ್ರಷ್ಟಾಚಾರ ರಹಿತ ಆಡಳಿತ ವನ್ನು ನೀಡಿರುವುದರಿಂದ ಕಂಗೆಟ್ಟಿರುವ ವಿರೋಧ ಪಕ್ಷಗಳು ‘ಟೀಕೆ’ಗೆ ವಿಷಯ ಗಳೇ ಇಲ್ಲದೆ ಕಪೆÀÇೀಲಕಲ್ಪಿತ ಆರೋ ಪಗಳನ್ನು ಮಾಡುತ್ತಿವೆ ಎಂದು ಅಸ…

1 49 50 51 52 53 187
Translate »