ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ಹೆಚ್.ವಿಶ್ವನಾಥ್
ಕೊಡಗು

ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ಹೆಚ್.ವಿಶ್ವನಾಥ್

March 29, 2019

ಮಡಿಕೇರಿ: ಜೆಡಿಎಸ್‍ನ ಜಿಲ್ಲಾ ಧ್ಯಕ್ಷರಾಗಿ ಕೆ.ಎಂ.ಬಿ ಗಣೇಶ್ ಮುಂದು ವರೆಯಲಿದ್ದು, ಯಾವುದೇ ಬದಲಾವಣೆ ಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಸ್ಪಷ್ಟಪಡಿಸಿದರು.

ನಗರದ ಬಾಲಭವನ ಬಳಿಯಿರುವ ಮೈದಾನದಲ್ಲಿ ನಡೆದ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ನಿಲುವಿನ ಪಕ್ಷ ಅಧಿ ಕಾರಕ್ಕೆ ಬಂದರೆ ದೇಶದ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್ ಮತ್ತು ಜೆಡಿಎಸ್ ಜಾತ್ಯಾತೀತ ಪಕ್ಷಗಳು ಒಂದಾಗುವ ಮೂಲಕ ಇತರೆ ಪಕ್ಷಗಳಿಗೆ ಭಯ ಹುಟ್ಟಿಸಿದೆ. ಕಾಂಗ್ರೆಸ್ ಪಕ್ಷ ನನ್ನ ಮನೆ ಅದು ನನಗೆ ತಾಯಿ ಇದ್ದಂತೆ. ಜೆಡಿಎಸ್ ಪಕ್ಷ ನನ್ನ ಧಮನಿ ಯಲ್ಲಿದೆ. ಪ್ರಸ್ತುತ ಮೈತ್ರಿ ಸರ್ಕಾರ ಹಾಗೂ ಕಳೆದ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಅಪಾರ ಕೊಡುಗೆ ನೀಡಿದೆ. ಕಳೆದ ಬಾರಿಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಜನಪರವಾಗಿ ಕೆಲಸ ಮಾಡಿದೆ. ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಕೂಡ ಬಜೆ ಟ್‍ನಲ್ಲಿ ಕಳೆದ ಹಲವು ವರ್ಷಗಳ ಬಹು ಬೇಡಿಕೆಯ 2 ತಾಲೂಕುಗಳನ್ನು ಘೋಷಣೆ ಮಾಡುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಕೊಡವ ಸಮಾ ಜಕ್ಕೆ 10 ಕೋಟಿ ಮೀಸಲಿಡುವ ಮೂಲಕ ಕೊಡವರ ಅಭಿವೃದ್ಧಿಗೆ ಮುಂದಾಗಿದ್ದಾರೆ. ಹಾಕಿ ಸ್ಟೇಡಿಯಂಗೆ 5 ಕೋಟಿ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿ ಸುವ ಕೆಲಸವಾಗಿದೆ. ನಾನು ವಿಜಯ ಶಂಕರ್ 2009ರಲ್ಲಿ ನಡೆದ ಲೋಕಸಭೆ ಯಲ್ಲಿ ಎದುರಾಳಿಗಳಾಗಿದ್ದೆವು. ಇದೀಗ ಅವರ ಗೆಲು ವಿಗೆ ನಾವು ಕೆಲಸ ಮಾಡು ತ್ತಿದ್ದೇವೆ. ಇದುವೇ ಬ್ಯೂಟಿ ಆಫ್ ಡೆಮಾ ಕ್ರಸಿ ಎಂದು ವರ್ಣಿಸಿದರು.

ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸವನ್ನು ಜಿಲ್ಲೆಯ ಜೆಡಿಎಸ್ ಕಾರ್ಯ ಕರ್ತರು ಮಾಡಬೇಕು. ಸಂಘಟನೆಯಾಗಿ ಕೆಲಸ ಮಾಡಿದರೆ ಯಾವುದು ಅಸಾಧ್ಯ ವಿಲ್ಲ. ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ರಾಷ್ಟ್ರಾಧ್ಯಕ್ಷ ದೇವೇಗೌಡರ ಆದೇಶದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ರೇವಣ್ಣ ಅವರ ಆಶಯದಂತೆ ಕೆ.ಎಂ.ಬಿ ಗಣೇಶ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾ ಗಿದೆ. ಅವರೇ ಜಿಲ್ಲಾಧ್ಯಕ್ಷರಾಗಿ ಮುಂದುವ ರೆಯಲ್ಲಿದ್ದು, ಊಹಪೋಹಗಳಿಗೆ ಅವ ಕಾಶವಿಲ್ಲ ಎಂದು ತಿಳಿಸಿದರು.

ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, ಮತದಾರರು ಜಾಗೃತಿ ಗೊಂಡಿದ್ದಾರೆ. ಅಭಿವೃದ್ದಿ ಪರ ಮತ ಹಾಕು ತ್ತಾರೆ. ಇದುವರೆಗೂ ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆದುಕೊಂಡಿಲ್ಲದಿರು ವುದೇ ಇದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿದರು.

ಸಭೆಗೂ ಮುನ್ನಾ ಮಡಿಕೇರಿ ನಗರದ ತಿಮ್ಮಯ್ಯ ವೃತ್ತದಿಂದ ವೇದಿಕೆಯವರಗೆ ಕಾರ್ಯಕರ್ತರ ಮೆರವಣಿಗೆ ಸಾಗಿತು. ಮೈತ್ರಿ ಅಭ್ಯರ್ಥಿ ವಿಜಯ ಶಂಕರ್ ಬರುವ ವೇಳೆಯಲ್ಲಿ ನಾವು ಗಂಡಿನ ಕಡೆಯವರು ಎಂದು ಫಲತಾಂಬೂಲಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರಿಗೆ ನೀಡಿ ದರು. ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯ ಶಂಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖ ರಾದ ನಾಗೇಶ್, ಎಂ.ಟಿ ಕಾರ್ಯಪ್ಪ, ಮನ್ಸೂರ್ ಅಲಿ, ಇಸಾಕ್ ಖಾನ್, ಶರೀಫ್, ಕುಸುಮಾ, ಬೋಜಪ್ಪ, ಪುಷ್ಪಾ ನಗರಾಜ್, ಮತೀನ್, ಲೀಲಾ ಶೇಷಮ್ಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ ಮಂಜುನಾಥ್, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತು ವಾರಿ ವೆಂಕಪ್ಪ ಗೌಡ, ಪ್ರಮುಖರಾದ ಟಿ.ಪಿ ರಮೇಶ್, ಯಾಕೂಬ್, ಕೆ.ಪಿ ಚಂದ್ರಕಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.

Translate »