ಬಾಹ್ಯಾಕಾಶದಲ್ಲೂ ಭಾರತದ ಸರ್ಜಿಕಲ್ ಸ್ಟ್ರೈಕ್
ಮೈಸೂರು

ಬಾಹ್ಯಾಕಾಶದಲ್ಲೂ ಭಾರತದ ಸರ್ಜಿಕಲ್ ಸ್ಟ್ರೈಕ್

March 28, 2019

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಲೈವ್ ಸ್ಯಾಟಲೈಟ್‍ವೊಂದನ್ನು ಹೊಡೆದುರು ಳಿಸುವ ಮೂಲಕ ಅತ್ಯಂತ ಅಪರೂಪದ ಸಂಶೋ ಧನೆಯಿಂದ ವಿಶ್ವಮಾನ್ಯರಾಗಿದ್ದಾರೆ.

ಭಾರತದ ಹೆಮ್ಮೆಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್‍ಡಿಓ ಸಹಯೋಗದಲ್ಲಿ ಬಾಹ್ಯಾಕಾಶದ ಲೋ ಅರ್ಥ್ ಆರ್ಬಿಟ್‍ನಲ್ಲಿ ಎ-ಸ್ಯಾಟ್ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಮೂಲಕ ಲೈವ್ ಸ್ಯಾಟಲೈಟ್ ಅನ್ನು ಯಶಸ್ವಿಯಾಗಿ ಹೊಡೆದುರು ಳಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನತೆಗೆ ಮಾಹಿತಿ ನೀಡಿದ್ದು, ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಏನಿದು ಉಪಗ್ರಹ ವಿರೋಧಿ ಅಸ್ತ್ರ?: ಕ್ಷಿಪಣಿ ಮೂಲಕ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮರ್ಥ್ಯ ವನ್ನು ಹೊಂದುವ ಮೂಲಕ ವಿಶ್ವದ ಇತಿಹಾಸದಲ್ಲಿ ಭಾರತ ವಿಶೇಷ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಉಪಗ್ರಹ ವಿರೋಧಿ ಅಸ್ತ್ರಗಳನ್ನು (ಆಂಟಿ-ಸ್ಯಾಟಲೈಟ್ ವೆಪನ್,ಂSಂಖಿ) ಹೊಂದಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮೂಲಕ ವಿಶ್ವದ ಸ್ಪೇಸ್ ಸೂಪರ್ ಪವರ್
ದೇಶವಾಗಿ ಭಾರತದ ಹೊರಹೊಮ್ಮಿದೆ. ಗುರಿಯನ್ನು ನೋಡಿಕೊಂಡು ಗುಂಡಿನ ದಾಳಿ ಅಥವಾ ಏರ್ ಸ್ಟ್ರೈಕ್ ಮೂಲಕ ಬಾಂಬ್ ಹಾಕುವುದು ಇಂದಿನ ದಿನದಲ್ಲಿ ಕಷ್ಟದ ಕೆಲಸವಲ್ಲ. ಹಲವು ದೇಶಗಳು ಈ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದಿವೆ. ಆದರೆ ಉಪಗ್ರಹವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸುವುದು ಸುಲಭದ ಕೆಲಸವಲ್ಲ. ಇದು ಬಹಳ ಕಷ್ಟದ ಕೆಲಸವಾಗಿದ್ದು, ಈ ಕಷ್ಟದ ಕೆಲಸವನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‍ಡಿಒ) ವಿಜ್ಞಾನಿಗಳು ಯಶಸ್ವಿಯಾಗಿ ನಡೆಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ಇನ್ನೊಂದು ದೇಶದ ಉಪಗ್ರಹ ನಮ್ಮ ದೇಶದ ಉಪಗ್ರಹದ ಮಾಹಿತಿ ಕದಿಯುತ್ತದೆ ಎಂದು ಗೊತ್ತಾದರೆ ನಾವು ದಾಳಿ ಮಾಡಬಹುದು. ದಾಳಿ ಮಾಡಲು ಸಾಮರ್ಥ್ಯ ಹೊಂದಿದರೂ ಉಪಗ್ರಹದ ಪಥವನ್ನು ಗುರುತಿಸುವುದು ಕಷ್ಟವಾಗುತ್ತದೆ. ಯಾಕೆಂದರೆ ಉಪಗ್ರಹಗಳು ಕಕ್ಷೆಯಲ್ಲಿ ತಿರುಗುತ್ತಲೇ ಇರುತ್ತವೆ. ಹೀಗಾಗಿ ನಾವು ಪ್ರಯೋಗಿಸುವ ಕ್ಷಿಪಣಿ ಆ ಉಪಗ್ರಹದ ಪಥವನ್ನು ನೋಡಿಕೊಂಡು ದಾಳಿ ಮಾಡಬೇಕಾಗುತ್ತದೆ. ಒಂದು ವೇಳೆ ನಮ್ಮ ಗುರಿ ತಪ್ಪಿ ಬೇರೆ ದೇಶದ ಉಪಗ್ರಹವನ್ನು ಹೊಡೆದು ಉರುಳಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ ಯುದ್ಧವೇ ಆರಂಭವಾಗಬಹುದು. ಹೀಗಾಗಿ ವಿರೋಧಿ ದೇಶದ ಉಪಗ್ರಹದ ಪಥವನ್ನು ಸರಿಯಾಗಿ ನೋಡಿಕೊಂಡು ದಾಳಿ ಮಾಡಬೇಕಾಗುತ್ತದೆ.

ಕಡಿಮೆ ಕಕ್ಷೆಯ ಉಪಗ್ರಹ: ವಾಹಿನಿ, ಇಂಟರ್ ನೆಟ್ ಇತ್ಯಾದಿ ಸೇವೆಗಳನ್ನು ನೀಡುವ ಉಪಗ್ರಹ ಭೂಮಿಯಿಂದ ಸುಮಾರು 36 ಸಾವಿರ ಕಿ.ಮೀ ಎತ್ತರದ ಕಕ್ಷೆಯಲ್ಲಿ ಇರುತ್ತದೆ. ಆದರೆ ಒಂದು ಭಾಗದ ನಿಖರ ಚಿತ್ರಗಳನ್ನು ತೆಗೆಯಬೇಕಾದರೆ ಉಪಗ್ರಹಗಳು 300 ರಿಂದ 700 ಕಿ.ಮೀ ಎತ್ತರ ಕಕ್ಷೆಯಲ್ಲಿ ಇರುತ್ತದೆ. ಭಾರತ ಈಗ ಕಡಿಮೆ ಕಕ್ಷೆಯಲ್ಲಿದ್ದ ಉಪಗ್ರಹವನ್ನು ಕ್ಷಿಪಣಿ ಬಳಸಿ ಹೊಡೆದು ಉರುಳಿಸಿದೆ. ಭಾರತ ವಿದೇಶದ ಯಾವುದೇ ಉಪಗ್ರಹವನ್ನು ಹೊಡೆದು ಉರುಳಿಸಿಲ್ಲ. ಹೀಗಾಗಿ ನಾವು ಯಾವುದೇ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಉಪಗ್ರಹ ಗುರುತಿಸುವುದು ಹೇಗೆ: ಬಾಹ್ಯಾಕಾಶಕ್ಕೆ ಯಾವುದೇ ಉಪಗ್ರಹ ಕಳುಹಿಸಬೇಕಾದರೂ ಅದಕ್ಕೆ ಅನುಮತಿ ಬೇಕಾಗುತ್ತದೆ. ಯಾವುದೇ ವಿದೇಶದ ಉಪಗ್ರಹ ಭಾರತ ಮೇಲೆ ಗೂಢಚಾರಿಕೆ ಮಾಡುತ್ತಿದೆ ಎನ್ನುವುದು ಹಾಸನದಲ್ಲಿರುವ ಮಾಸ್ಟರ್ ಕಂಟ್ರೋಲ್ ರೂಂಗೆ ಗೊತ್ತಾಗುತ್ತದೆ. ಈ ಉಪಗ್ರಹ ನಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿದೆ ಎನ್ನುವುದು ಗೊತ್ತಾದರೆ ದಾಳಿ ಮಾಡಬಹುದಾಗಿದೆ.

ಯಾಕೆ ಇಷ್ಟೊಂದು ಮಹತ್ವ: ಭೂ, ವಾಯು, ನೌಕಾ ಸೇನಾ ಶಕ್ತಿಗಳ ಜೊತೆ ಈಗ ನಾವು ಬಾಹ್ಯಾಕಾಶದಲ್ಲೂ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎನ್ನುವುದು ವಿಶ್ವಕ್ಕೆ ಪ್ರಕಟವಾಗಿದೆ. ವಿಶೇಷವಾಗಿ ಭಾರತದ ವಿಚಾರ ಬಂದಾಗ ಚೀನಾ ಯಾವಾಗಲೂ ಅಡ್ಡಗಾಲು ಹಾಕುತ್ತಲೇ ಇರುತ್ತದೆ. ಹೀಗಾಗಿ ನಾವು ಬಾಹ್ಯಾಕಾಶದ ಕ್ಷೇತ್ರದಲ್ಲೂ ಹಿಂದೆ ಉಳಿದಿಲ್ಲ ಎನ್ನುವ ಸಂದೇಶವನ್ನು ಭಾರತ ಚೀನಾಕ್ಕೆ ರವಾನಿಸಿದೆ.

ಯುದ್ಧದಲ್ಲಿ ಬಳಕೆ ಆಗಿದೆಯೆ: ಉಪಗ್ರಹ ವಿರೋಧಿ ಅಸ್ತ್ರಗಳ ಪರಿಕಲ್ಪನೆ ಹೊಸದೆನಲ್ಲ. 1980ರ ಅವಧಿಯ ಶೀತಲ ಸಮರದ ಸಮಯದಲ್ಲಿ ಅಮೆರಿಕ ಮತ್ತು ರಷ್ಯಾ ಈ ಅಸ್ತ್ರಗಳ ಪ್ರಯೋಗಿಕ ಪರೀಕ್ಷೆ ನಡೆಸಿದ್ದವು. 2007ರಲ್ಲಿ ಚೀನಾ ಈ ಪ್ರಯೋಗದಲ್ಲಿ ಯಶಸ್ವಿ ಆಯಿತು. ಇಲ್ಲಿಯವರೆಗೆ ಯಾವುದೇ ಯುದ್ಧದಲ್ಲಿ ಈ ಅಸ್ತ್ರಗಳ ಪ್ರಯೋಗ ಆಗಿಲ್ಲ. ಎಲ್ಲ ದೇಶಗಳು ತಮ್ಮ ನಿಷ್ಕ್ರೀಯ ಉಪಗ್ರಹಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ.
10 ವರ್ಷದ ಸಾಧನೆ: ಉಪಗ್ರಹ ವಿರೋಧಿ ಅಸ್ತ್ರದ ನಿರ್ಮಾಣದ ಹಿಂದೆ ಡಿಆರ್‍ಡಿಒ ವಿಜ್ಞಾನಿಗಳ 10 ವರ್ಷದ ಶ್ರಮವಿದೆ. ಕೇರಳದ ತಿರುವನಂತಪುರಂನಲ್ಲಿ 2010ರ ಜನವರಿಯಲ್ಲಿ ನಡೆದ ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಈ ಅಸ್ತ್ರ ನಿರ್ಮಾಣಕ್ಕೆ ನಾವು ಕೈ ಹಾಕಿದ್ದೇವೆ ಎಂದು ಡಿಆರ್‍ಡಿಒ ಪ್ರಕಟಿಸಿತ್ತು.

ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ 300 ಕಿ.ಮೀ ದೂರ (ಎಲ್‍ಇಓ) (ಲೋ ಅರ್ಥ್ ಆರ್ಬಿಟ್)ದಲ್ಲಿರುವ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ್ದಾರೆ. ಕೇವಲ 3 ನಿಮಿಷಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಾಚರಣೆಯನ್ನು ವಿಜ್ಞಾನಿಗಳು ಯಶಸ್ವಿಗೊಳಿ ಸಿದ್ದಾರೆ. ಮಿಷನ್ ಶಕ್ತಿ ಎಂಬ ಅತ್ಯಂತ ಕಠಿಣ ಕಾರ್ಯಾಚರಣೆ ಇದಾಗಿತ್ತು. ಅತ್ಯಂತ ಹೆಚ್ಚು ವೆಚ್ಚ ಬಯಸುವ ಈ ಕಾರ್ಯಾಚರಣೆಯನ್ನು ಅತೀ ಕಡಿಮೆ ವೆಚ್ದದಲ್ಲಿ ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. ಆ್ಯಂಟಿ ಸೆಟಲೈಟ್- (ಎ ಸ್ಯಾಟ್) ಕ್ಷಿಪಣಿಯ ಯಶಸ್ವೀ ಪ್ರಯೋಗ ಭಾರತದ ಭದ್ರತೆ ವಿಷಯದಲ್ಲಿ ಮಹತ್ವದ ಸಾಧನೆಯಾಗಿದೆ. ಶತ್ರುದೇಶದ ಉಪಗ್ರಹಗಳನ್ನು ನಾಶಪಡಿಸುವ ಮಹತ್ವದ ಶಕ್ತಿ ಭಾರತಕ್ಕೀಗ ಪ್ರಾಪ್ತವಾಗಿದೆ. ಈ ಸಾಧನೆ ಮಾಡಿದ ಡಿಆರ್‍ಡಿಓ ವಿಜ್ಞಾನಿಗಳಿಗೆ ಅಭಿನಂದನೆಗಳು. ದೇಶದ ಹೆಮ್ಮೆ, ಪ್ರತಿಷ್ಠೆ ಹೆಚ್ಚಿಸಿದ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಹೇಳಿದರು.

ಯಾವುದೇ ದೇಶದ ವಿರುದ್ಧವಲ್ಲ, ನಮ್ಮ ದೇಶದ ರಕ್ಷಣೆಗಾಗಿ ಮಾತ್ರ
ನವದೆಹಲಿ: ಬಾಹ್ಯಾಕಾಶದಲ್ಲಿ ಸಕ್ರಿಯ ಉಪಗ್ರಹವೊಂದನ್ನು ಎ-ಸ್ಯಾಟ್ ಕ್ಷಿಪಣಿ ಬಳಕೆ ಮಾಡಿ ಹೊಡೆದುರುಳಿಸ ಲಾಗಿದ್ದು, ಇದು ನಮ್ಮ ಹೊಸ ಶಕ್ತಿಯಷ್ಟೇ.. ನಮ್ಮ ಈ ಸಾಮರ್ಥ್ಯವನ್ನು ಯಾವುದೇ ದೇಶದ ವಿರುದ್ಧವೂ ಪ್ರಯೋಗಿಸು ವುದಿಲ್ಲ. ಸಂಪೂರ್ಣವಾಗಿ ಭಾರತದ ರಕ್ಷಣಾ ಉಪಕ್ರಮ ಗಳಿಗೆ ಮತ್ತು ಭದ್ರತೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದ ಜನತೆ ಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಎ-ಸ್ಯಾಟ್ ಮಿಸೈಲ್’ ನಮ್ಮ ಬಾಹಾಕ್ಯಾಶ ಕಾರ್ಯಕ್ರಮ ಗಳಿಗೆ ಹೊಸ ಬಲವನ್ನು ತುಂಬಲಿದೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ನಾನೊಂದನ್ನು ಖಚಿತಪಡಿಸುತ್ತೇನೆ. ನಮ್ಮ ಸಾಮರ್ಥ್ಯವನ್ನು ಯಾರ ವಿರುದ್ಧವೂ ಪ್ರಯೋಗಿ ಸುವುದಿಲ್ಲ. ಆದರೆ, ಇದು ಸಂಪೂರ್ಣವಾಗಿ ಭಾರತದ ರಕ್ಷಣಾ ಉಪಕ್ರಮಗಳಿಗೆ ಮತ್ತು ಭದ್ರತೆಗೆ ಬಳಸಲಾ ಗುತ್ತದೆ. ಬಾಹ್ಯಾಕಾಶದಲ್ಲಿನ ಶಸ್ತ್ರಗಳನ್ನು ನಾವು ವಿರೋಧಿಸುತ್ತೇವೆ. ಈ ಪರೀಕ್ಷೆಯಿಂದ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದಗಳನ್ನಾಗಲಿ ಅಥವಾ ಕಾನೂ ನಾಗಲಿ ನಾವು ಉಲ್ಲಂಘಿಸುವುದಿಲ್ಲ ಎಂದು ಮೋದಿ ತಿಳಿಸಿದ್ದಾರೆ. ‘ಆ್ಯಂಟಿ ಸೆಟಲೈಟ್- (ಎ ಸ್ಯಾಟ್) ಕ್ಷಿಪಣಿಯ ಯಶಸ್ವೀ ಪ್ರಯೋಗ ಭಾರತದ ಭದ್ರತೆ ವಿಷಯದಲ್ಲಿ ಮಹತ್ವದ ಸಾಧನೆಯಾಗಿದೆ.

ಶತ್ರುದೇಶದ ಉಪಗ್ರಹಗಳನ್ನು ನಾಶಪಡಿಸುವ ಮಹತ್ವದ ಶಕ್ತಿ ಭಾರತಕ್ಕೀಗ ಪ್ರಾಪ್ತವಾಗಿದೆ. ಅಂತೆಯೇ ‘ಈ ಸಾಧನ ನಮ್ಮ ರಕ್ಷಣೆಗಾಗಿ ಅಷ್ಟೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷೆಯ ವಾತಾವರಣ ಮೂಡಿಸುವುದಕ್ಕಾಗಿ ಬಲಿಷ್ಠ ಭಾರತದ ನಿರ್ಮಾಣದ ಅಗತ್ಯವಿದೆ. ನಮ್ಮ ಉದ್ದೇಶ ಯುದ್ಧದ ವಾತಾವರಣ ಸೃಷ್ಟಿಸುವುದಲ್ಲ. ಭಾರತ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಭಾರತದ ಅಭಿವೃದ್ಧಿಗಾಗಿಯೇ ಹೊರತು ಬೇರೆಯವರ ಮೇಲೆ ದಾಳಿಗಲ್ಲ ಎಂದೂ ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ವಿಳಂಬ: ಇಸ್ರೋ ಮಾಜಿ ಅಧ್ಯಕ್ಷ
ತಿರುವನಂತಪುರಂ: ಭಾರತದಲ್ಲಿ 2007ರಲ್ಲೇ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಅನ್ನು ತಯಾರಿಸಲಾ ಗಿತ್ತು. ಆದರೆ ರಾಜಕೀಯ ಪಕ್ಷದ ಇಚ್ಛಾಶಕ್ತಿಯ ಕೊರತೆಯಿಂದ ಪರೀಕ್ಷಾರ್ಥ ಪ್ರಯೋಗ ಸಾಧ್ಯವಾಗಲಿಲ್ಲ ಎಂದು ಇಸ್ರೋ ಮಾಜಿ ಮುಖ್ಯಸ್ಥ ಜಿ.ಮಾಧವನ್ ನಾಯರ್ ಹೇಳಿದ್ದಾರೆ. 2007ರಲ್ಲಿ ಚೀನಾ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಅನ್ನು ಪರೀಕ್ಷೆ ನಡೆಸಿತ್ತು. ಇದೇ ವೇಳೆ ಭಾರತವೂ ಇಂತಹ ಪರೀಕ್ಷಾರ್ಥ ಪ್ರಯೋಗಕ್ಕೆ ಸಮರ್ಥವಾಗಿತ್ತು ಎನ್ನುವ ವಿಚಾರವನ್ನು ಜಿ.ಮಾಧವನ್ ನಾಯರ್ ಹೇಳಿದ್ದಾರೆ.ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೇರೆ ದೇಶವನ್ನು ಅವಲಂಬಿಸುತ್ತಲೇ ಬಂದಿದೆ. ಇಂದಿನ ಸ್ವದೇಶಿ ನಿರ್ಮಿತ ಎ-ಸ್ಯಾಟ್ ಮಿಸೈಲ್ ಈ ವಿಚಾರದಲ್ಲಿ ಡಿಆರ್‍ಡಿಓ ವಿಜ್ಞಾನಿಗಳು ಮಹತ್ವದ ಸಾಧನೆಗೈದಿದ್ದಾರೆ ಎಂದು ನಾಯರ್ ಹೇಳಿದ್ದಾರೆ. ಇಸ್ರೋ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿದ ಬಳಿಕ 2018 ಅಕ್ಟೋ ಬರ್‍ನಲ್ಲಿ ಮಾಧವನ್ ನಾಯರ್ ಬಿಜೆಪಿ ಸೇರ್ಪಡೆಯಾಗಿದ್ದರು.

Translate »