ಸಿಎಂ ಹೇಳಿಕೆ ಬೆನ್ನಲ್ಲೇ ರಾಜ್ಯದಲ್ಲಿ ಐಟಿ ದಾಳಿ
ಮೈಸೂರು

ಸಿಎಂ ಹೇಳಿಕೆ ಬೆನ್ನಲ್ಲೇ ರಾಜ್ಯದಲ್ಲಿ ಐಟಿ ದಾಳಿ

March 28, 2019

ಮಂಡ್ಯ: ಬೆಂಗಳೂರಿನ ಸುಮಾರು ಐದಕ್ಕೂ ಹೆಚ್ಚು ಉದ್ಯಮಿಗಳ ಮನೆಗಳ ಮೇಲೆ ಇಂದು ರಾತ್ರಿ ಆದಾಯ ತೆರಿಗೆ ಇಲಾಖೆ ಅಧಿ ಕಾರಿಗಳು ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಹಾಗೂ ಅಭಿಮಾನಿಗಳ ಮನೆಗಳ ಮೇಲೆ ಐಟಿ ದಾಳಿ ನಡೆಯಲಿದೆ ಎಂದು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಬೆಂಗಳೂ ರಿನ ಸೌತ್ ಎಂಡ್ ಸರ್ಕಲ್ ಬಳಿ ಇರುವ ಉದ್ಯಮಿ ಸಿದ್ದಿಖಿ ಸೇಠ್ ಮನೆ ಸೇರಿದಂತೆ ಜಯನಗರ ಮತ್ತು ಬಸವನಗುಡಿ ಮುಂತಾ ದೆಡೆ ಸುಮಾರು ಐವರು ಉದ್ಯಮಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿ ಸುತ್ತಿದ್ದಾರೆ. ಇದಕ್ಕೂ ಮುನ್ನ ಮಂಡ್ಯ ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಳೆ ರಾಜ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ದೊಡ್ಡ ಮಟ್ಟದ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ನಗರದಲ್ಲಿ ಇಂದು ರಾತ್ರಿ ವಿವಿಧ ನನ್ನ ಜೊತೆ ಆತ್ಮೀಯರಾಗಿರುವ ಬಿಜೆಪಿಯವ ರೊಬ್ಬರು ಹೇಳಿದ ಪ್ರಕಾರ ಆದಾಯ ತೆರಿಗೆ ಇಲಾಖೆಯ ಕರ್ನಾಟಕ-ಗೋವಾ ವಲಯದ ಡಿಜಿ ಬಾಲಕೃಷ್ಣ, ಇಂದು 250 ರಿಂದ 300 ಅಧಿಕಾರಿಗಳನ್ನು ಕಲೆ ಹಾಕಿ ಕೊಂಡಿದ್ದಾರೆ. ಸಿಆರ್‍ಪಿಎಫ್ ರಕ್ಷಣೆ ಪಡೆದು ದಾಳಿ ನಡೆಸಲು ಪ್ಲಾನ್ ಮಾಡಿದ್ದಾರೆ. ಅವರುಗಳನ್ನು ಏರ್‍ಪೋರ್ಟ್‍ನಿಂದ ಪಿಕ್‍ಅಪ್ ಮಾಡಲು 300 ಕ್ಯಾಬ್‍ಗಳು ಸಿದ್ಧವಾಗಿವೆ ಎಂದಿದ್ದರು.

ನಾವು ದರೋಡೆ ಮಾಡಿಲ್ಲ. ಪ್ರಾಮಾ ಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಐಟಿ ಅಧಿ ಕಾರಿಗಳು ಆಡುವ ಆಟ ನಮಗೆ ಗೊತ್ತಿದೆ. ಅವರು ಕೇಂದ್ರ ಸರ್ಕಾರದ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಐಟಿ ದಾಳಿಯಲ್ಲಿ ಸಾಮಾನ್ಯವಾಗಿ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯ ನೆರವು ಪಡೆಯುವುದು ಸರ್ವೇ ಸಾಮಾನ್ಯ. ಅದನ್ನು ಬಿಟ್ಟು ಸಿಆರ್ ಪಿಎಫ್ ಕರೆಸಿಕೊಂಡು ದಾಳಿ ಮಾಡಲು ಹೊರಟಿರುವ ಆಟ ಬಹಳ ದಿನ ನಡೆಯುವುದಿಲ್ಲ. ಇವರು ಇದೇ ರೀತಿ ದಬ್ಬಾಳಿಕೆ ಮಾಡಿದರೆ ಪಶ್ಚಿಮ ಬಂಗಾ ಳದ ಮುಖ್ಯಮಂತ್ರಿಗಳು ಮಾಡಿದ ಹಾಗೆ ನಾನೂ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

Translate »