5 ನಾಮಪತ್ರ ತಿರಸ್ಕøತ, 25 ಕ್ರಮಬದ್ಧ
ಮೈಸೂರು

5 ನಾಮಪತ್ರ ತಿರಸ್ಕøತ, 25 ಕ್ರಮಬದ್ಧ

March 28, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಬಯಸಿ ಸಲ್ಲಿಸಿದ್ದ 30 ಮಂದಿ ಪೈಕಿ ಐವರು ಅಭ್ಯರ್ಥಿ ಗಳ ನಾಮಪತ್ರಗಳು ತಿರಸ್ಕøತಗೊಂಡಿವೆ.

ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿತ್ತು. ಕಾಂಗ್ರೆಸ್ಸಿನ ಸಿ.ಹೆಚ್.ವಿಜಯ ಶಂಕರ್, ಬಿಜೆಪಿಯ ಪ್ರತಾಪ್ ಸಿಂಹ, ಬಿಎಸ್‍ಪಿಯ ಬಿ.ಚಂದ್ರ ಸೇರಿದಂತೆ ಒಟ್ಟು 30 ಅಭ್ಯರ್ಥಿಗಳಿಂದ 50 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಧಿಕಾರಿ ಅಭಿರಾಂ ಜಿ.ಶಂಕರ್ ಸಾಮಾನ್ಯ ವೀಕ್ಷಕರು, ನೀತಿ ಸಂಹಿತೆ ನೋಡಲ್ ಅಧಿಕಾರಿಗಳು, ಅಭ್ಯರ್ಥಿಗಳು ಮತ್ತು ಚುನಾ ವಣಾ ಏಜೆಂಟರ್‍ಗಳ ಉಪಸ್ಥಿತಿಯಲ್ಲಿ ನಾಮಪತ್ರಗಳ ಪರಿಶೀಲನೆ ನಡೆಸಿದರು.

ಕಾಂಗ್ರೆಸ್‍ನಿಂದ ಸಲ್ಲಿಸಿದ್ದ ಜೆ.ಜೆ. ಆನಂದ, ಬಿಎಸ್‍ಪಿಯ ಎಂ.ಸಿದ್ಧರಾಜು ಸಂಪೂರ್ಣ ಭಾರತ ಕ್ರಾಂತಿ ಪಾರ್ಟಿಯ ಎಂ.ಮಧು, ಶಿವಸೇನೆಯ ಎನ್.ಎ.ಸತೀಶ ಹಾಗೂ ಪಕ್ಷೇತರ ಅಭ್ಯರ್ಥಿ ಅಖೀಲ್ ಅಹಮದ್ ಅವರ ನಾಮಪತ್ರಗಳು ತಿರಸ್ಕøತಗೊಂಡಿವೆ ಎಂದು ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ಪ್ರಕಟಿಸಿದ್ದಾರೆ. ಉಳಿದಂತೆ ಬಿಜೆಪಿಯ ಪ್ರತಾಪ್ ಸಿಂಹ, ಕಾಂಗ್ರೆಸ್‍ನ ಸಿ.ಹೆಚ್.ವಿಜಯಶಂಕರ್, ಐಎನ್‍ಸಿಪಿಯ ಅಯೂಬ್ ಖಾನ್, ಎಸ್‍ಯುಸಿಐನ ಪಿ.ಎಸ್. ಸಂಧ್ಯಾ, ಬಿಪಿಪಿಯ ಆಶಾರಾಣಿ, ಕೆಪಿಪಿಯ ಪಿ.ಕೆ.ಬಿದ್ದಪ್ಪ, ಬಿಎಸ್‍ಪಿಯ ಬಿ.ಚಂದ್ರ ಸೇರಿ ದಂತೆ ಒಟ್ಟು 25 ಮಂದಿಯ ನಾಮಪತ್ರ ಗಳನ್ನು ಚುನಾವಣಾಧಿಕಾರಿಗಳು ಕ್ರಮ ಬದ್ಧವಾಗಿವೆ ಎಂದು ಘೋಷಿಸಿದ್ದಾರೆ. ಪರಿಶೀಲನೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಸಲ್ಲಿಸಿರುವ ನಾಮಪತ್ರದ ದಾಖಲಾತಿಗಳಲ್ಲಿ ಕೆಲ ಸಣ್ಣಪುಟ್ಟ ತಪ್ಪುಗಳಿವೆ ಎಂಬ ವಿಷಯ ತಿಳಿದು ವಿಜಯಶಂಕರ್ ಅವರು ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಅವರು ಕೇಳಿದ ಮಾಹಿತಿಗಳನ್ನು ನೀಡಿದರು. ಅಂತಿಮವಾಗಿ ಅವರ ಉಮೇದುವಾರಿಕೆ ಸರಿ ಇದೆ ಎಂದು ಘೋಷಿಸಲಾಯಿತು. ಚುನಾವಣಾ ಪ್ರಧಾನ ವೀಕ್ಷಕ ಕುಲ್‍ದೀಪ್ ನಾರಾಯಣ್, ನೀತಿ ಸಂಹಿತೆ ನೋಡಲ್ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಸಹಾಯಕ ಚುನಾವಣಾಧಿಕಾರಿ ಜಿ.ಅನುರಾಧ, ಚುನಾವಣಾ ಶಾಖೆ ಶಿರಸ್ತೇದಾರ್ ರಾಮಪ್ರಸಾದ್ ಅವರು ನಾಮಪತ್ರಗಳ ಪರಿಶೀಲನೆ ವೇಳೆ ಹಾಜರಿದ್ದರು.

ಚಾ.ನಗರದಲ್ಲಿ ಒಬ್ಬರ ನಾಮಪತ್ರ ತಿರಸ್ಕøತ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 13 ಮಂದಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಪರಿಶೀಲನೆ ಕಾರ್ಯ ಬುಧವಾರ ನಡೆಯಿತು. ಅದರಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ತಿರಸ್ಕøತವಾಗಿದ್ದರೆ, 12 ಅಭ್ಯಥಿಗಳ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಬಹುಜನ ಕ್ರಾಂತಿದಳ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ಎಸ್.ಗೋವಿಂದನಾಯಕ್ ನಾಮಪತ್ರ ತಿರಸ್ಕøತವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕ ಕಪಕೊಲೈ ಸಮ್ಮುಖದಲ್ಲಿ ನಾಮಪತ್ರÀ ಪರಿಶೀಲನೆ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ನಾಮಪತ್ರಗಳ ಪರಿಶೀಲನೆ ನಡೆಸಿದರು. ಅಭ್ಯರ್ಥಿಗಳು ಹಾಗೂ ಅವರ ಪರ ಪ್ರತಿನಿಧಿಗಳು ಈ ಸಂದರ್ಭ ಹಾಜರಿದ್ದರು.

ನಾಮಪತ್ರ ಕ್ರಮಬದ್ಧ: ಆರ್.ಧ್ರುವನಾರಾಯಣ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ), ಡಾ.ಶಿವಕುಮಾರ (ಬಹುಜನ ಸಮಾಜ ಪಾರ್ಟಿ), ವಿ. ಶ್ರೀನಿವಾಸಪ್ರಸಾದ್ (ಭಾರತೀಯ ಜನತಾ ಪಾರ್ಟಿ), ಎಂ.ನಾಗರಾಜು (ಉತ್ತಮ ಪ್ರಜಾಕೀಯ ಪಾರ್ಟಿ), ಪ್ರಸನ್ನಕುಮಾರ್ ಬಿ. (ಕರ್ನಾಟಕ ಪ್ರಜಾ ಪಾರ್ಟಿ (ರೈತಪರ್ವ), ಸುಬ್ಬಯ್ಯ (ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ), ಆನಂದ ಜಿ.(ಪಕ್ಷೇತರ), ಎನ್.ಅಂಬರೀಶ್(ಪಕ್ಷೇತರ), ಎಂ.ಪ್ರದೀಪ್‍ಕುಮಾರ್ (ಪಕ್ಷೇತರ), ಜಿ.ಡಿ.ರಾಜಗೋಪಾಲ್(ಪಕ್ಷೇತರ), ಎಸ್.ಎಂ.ಲಿಂಗಯ್ಯ (ಪಕ್ಷೇತರ), ಎಂ.ಹೊನ್ನೂರಯ್ಯ(ಪಕ್ಷೇತರ).
ಮಂಡ್ಯದಲ್ಲಿ ಎರಡು ನಾಮಪತ್ರ ತಿರಸ್ಕೃತ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆಯಿತು. ಎರಡು ನಾಮಪತ್ರ ತಿರಸ್ಕೃತ ಗೊಂಡಿವೆ ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ. 27 ಅಭ್ಯರ್ಥಿಗಳು ಒಟ್ಟು 37 ಉಮೇದುವಾರಿಕೆ ಸಲ್ಲಿಸಿದ್ದು, ಈ ಪೈಕಿ 26 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ. ಐರಾ ನ್ಯಾಷನಲ್ ಪಾರ್ಟಿಯಿಂದ 2 ನಾಮಪತ್ರ ಸಲ್ಲಿಸಿದ್ದ ಡಿ.ಸಿ.ಜಯಶಂಕರ್ ಅವರ ಒಂದು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಂಭುಲಿಂಗೇಗೌಡ ಅವರ ನಾಮಪತ್ರ ತಿರಸ್ಕೃತವಾಗಿದೆ. ಮಾರ್ಚ್ 29ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಸನದಲ್ಲಿ ಐದು ತಿರಸ್ಕøತ: ಹಾಸನ ಲೋಕಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳ 18 ನಾಮಪತ್ರಗಳ ಪೈಕಿ ನಾಲ್ವರ 5 ನಾಮಪತ್ರಗಳು ತಿರಸ್ಕøತಗೊಂಡಿವೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂಪಾಷ, ಚುನಾವಣಾ ಆಯೋಗ ನೇಮಿಸಿರುವ ಸಾಮಾನ್ಯ ವೀಕ್ಷಕರಾದ ಶಶಿಭೂಷಣ್ ಕುಮಾರ್ ಮತ್ತು ಮಂಜಿತ್ ಸಿಂಗ್ ಬ್ರಾರ್ ಅವರ ಸಮ್ಮುಖದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಿತು. 5 ನಾಮಪತ್ರಗಳು ಸೂಕ್ತ ದಾಖಲೆ ಹಾಗೂ ಕ್ರಮಬದ್ದವಿಲ್ಲ ಎಂಬ ಕಾರಣದಿಂದ ತಿರಸ್ಕøತಗೊಂಡವು. ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಬಿ.ಜೆ.ರಮೇಶ್ ಮನೆಮನೆ ಅವರ 1, ಕೆಂಪಯ್ಯ ಸಲ್ಲಿಸಿದ್ದ 2 ಹಾಗೂ ಬಿ.ಪಿ.ಕಾಳಪ್ಪ ಸಲ್ಲಿಸಿದ್ದ 1 ತಿರಸ್ಕøತಗೊಂಡಿವೆ.

ಎಂ.ಮಹೇಶ್ ಅವರು ಪಕ್ಷೇತರವಾಗಿ ಹಾಗೂ ಭಾರತೀಯ ಜನತಾ ಪಕ್ಷದಿಂದ ಹೀಗೆ ಎರಡು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಅವರು ಬಿಜೆಪಿಯಿಂದ ಸಲ್ಲಿಸಿದ್ದ ನಾಮಪತ್ರಕ್ಕೆ ಫಾರಂ ಎ ಮತ್ತು ಬಿ ಸಲ್ಲಿಸಿರಲಿಲ್ಲ. ಅಲ್ಲದೆ ಅಗತ್ಯ 10 ಜನ ಸೂಚಕರ ವಿವರ ನೀಡಿಲ್ಲ. ಹಾಗಾಗಿ, ಅವರು ಸಲ್ಲಿಸಿದ್ದ ಎರಡನೇ ನಾಮಪತ್ರ ತಿರಸ್ಕøತಗೊಂಡಿದೆ. ಉಳಿದಂತೆ ಪಕ್ಷೇತರವಾಗಿ ಸಲ್ಲಿಸಿದ್ದ ಅವರ ಮೊದಲ ನಾಮಪತ್ರ ಪುರಸ್ಕøತಗೊಂಡಿದೆ.
ಒಟ್ಟಾರೆ 7ಜನ ಅಭ್ಯರ್ಥಿಗಳ ನಾಮಪತ್ರ ಪುರಸ್ಕøತವಾಗಿದ್ದು, ಅಂತಿಮ ಕಣದಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಪ್ರಜ್ವಲ್ ಆರ್., ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎ.ಮಂಜು, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ವಿನೋದ್‍ರಾಜ್, ಉತ್ತಮ ಪ್ರಜಾಕೀಯ ಪಕ್ಷದ ಹೆಚ್.ಎಂ.ಚಂದ್ರೇಗೌಡ, ಭಾರತೀಯ ಡಾ. ಬಿ.ಆರ್.ಅಂಬೇಡ್ಕರ್ ಪಕ್ಷದ ಅಭ್ಯರ್ಥಿ ಮಂಜುನಾಥ್ ಹೆಚ್.ಪಿ. ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಎಂ.ಮಹೇಶ್, ಆರ್.ಜಿ.ಸತೀಶ್ ಉಳಿದಿದ್ದಾರೆ.

Translate »